*ಬಾನಾಡಿಗಳಿಗೆ ಪಾನಪಾತ್ರೆ

Contributed bycrastalp19@gmail.com|Vijaya Karnataka

ಕಾಸರಗೋಡಿನಲ್ಲಿ ಬೇಸಗೆಯ ತಾಪಮಾನ ಹೆಚ್ಚಾಗಿದೆ. ಇದರಿಂದಾಗಿ ಪಕ್ಷಿಗಳು ನೀರಿಲ್ಲದೆ ಬಳಲುತ್ತಿವೆ. ಈ ಸಮಸ್ಯೆಗೆ ಪರಿಹಾರವಾಗಿ ನಾಯಮ್ಮಾರೆಮೂಲೆ ತನ್‌ಬೀಹುಲ್‌ ಇಸ್ಲಾಂ ಹೈಯರ್‌ ಸೆಕೆಂಡರಿ ಶಾಲೆಯಲ್ಲಿ ಪಾನಪಾತ್ರೆಗಳನ್ನು ಅಳವಡಿಸಲಾಗಿದೆ. ಶಾಲೆಯ ಜೆಆರ್‌ಸಿ ಘಟಕ ಮತ್ತು ಸಂಸ್ಕೃತ ಕ್ಲಬ್‌ ಈ ಯೋಜನೆಯನ್ನು ಜಾರಿಗೆ ತಂದಿವೆ. ಜಿಲ್ಲಾ ಶಿಕ್ಷಣ ಉಪನಿರ್ದೇಶಕ ವಿ. ಇಬ್ರಾಹಿಂ ಅವರು ಇದನ್ನು ಉದ್ಘಾಟಿಸಿದರು.

water supply for students in summer new initiative by nayammare school

ಕಾಸರಗೋಡು: ಬೇಸಗೆ ತೀವ್ರಗೊಂಡ ಹಿನ್ನೆಲೆಯಲ್ಲಿಪಕ್ಷಿಗಳಿಗೆ ದಾಹ ನೀಗಿಸಲು ನಾಯಮ್ಮಾರೆಮೂಲೆ ತನ್ ಬೀಹುಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆಯಲ್ಲಿಪಾನಪಾತ್ರೆ ವ್ಯವಸ್ಥೆಗೊಳಿಸಲಾಯಿತು. ಶಾಲಾ ಜೆಆರ್ ಸಿ ಘಟಕ ಹಾಗೂ ಸಂಸ್ಕೃತ ಕ್ಲಬ್ ಸಂಯುಕ್ತವಾಗಿ ಪಾನಪಾತ್ರೆ ಯೋಜನೆಯನ್ನು ನಿರ್ವಹಿಸುತ್ತಿದೆ.

ಬೇಸಗೆ ಕಾಲದಲ್ಲಿಜಲಸಂಪನ್ಮೂಲಗಳು ಬತ್ತಿಹೋಗುವ ಹಿನ್ನೆಲೆಯಲ್ಲಿಪಕ್ಷಿಗಳು ನೀರು ಲಭಿಸದೆ ಅಸ್ವಸ್ಥಗೊಳ್ಳುತ್ತವೆ.ಈ ಹಿನ್ನೆಲೆಯಲ್ಲಿಪಾನಪಾತ್ರೆ ವ್ಯವಸ್ಥೆಗೊಳಿಸಲಾಯಿತು.

ಜಿಲ್ಲಾಶಿಕ್ಷಣ ಉಪನಿರ್ದೇಶಕ ವಿ.ಇಬ್ರಾಹಿಂ ಉದ್ಘಾಟಿಸಿದರು.ಮುಖ್ಯ ಶಿಕ್ಷಕ ಪಿ.ಕೆ.ಅನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕಿ ಶ್ರೀಮ, ಮಹೆಶ್ ಕುಮಾರ್ ,ಪಿ.ಐ.ಅಬ್ದುಲ್ ಲತೀಫ್ , ಪ್ರಜಿತ ಮತ್ತಿತರರು ಮಾತನಾಡಿದರು.

ಚಿತ್ರ: 3ಕೆಎಸ್ ಎಲ್ ಪಾನಪಾತ್ರೆ- ಜಿಲ್ಲಾಶಿಕ್ಷಣ ಉಪನಿರ್ದೇಶಕ ವಿ. ಇಬ್ರಾಹಿಂ ಉದ್ಘಾಟಿಸಿದರು.