ಕಳ್ಳತನವಾಗಿದ್ದ ಎರಡು ಕಾರು ವಶಕ್ಕೆ

Contributed bymallugoudra461987@gmali.com|Vijaya Karnataka

ಬೆಳಗಾವಿಯ ಹನುಮಾನ ನಗರದಲ್ಲಿ ಕಳ್ಳತನವಾಗಿದ್ದ ಎರಡು ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೇ 10ರಂದು ಕಿಯಾ ಸೆಲ್ಟೊಸ್ ಕಾರು ಕಳ್ಳತನವಾಗಿತ್ತು. ಮಹಾರಾಷ್ಟ್ರದ ಮುಂಬೈನಲ್ಲಿ ಈ ಕಾರು ಪತ್ತೆಯಾಗಿದೆ. ಧಾರವಾಡ ಉಪನಗರ ಠಾಣೆ ವ್ಯಾಪ್ತಿಯ ಹುಂಡೈ ಕ್ರೆಟಾ ಕಾರು ಕೂಡ ಇದೇ ಸ್ಥಳದಲ್ಲಿ ಪತ್ತೆಯಾಗಿದೆ. ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

car theft unveiled in a few minutes an incident amidst reasons for crime in belagavi

ವಿಕ ಸುದ್ದಿಲೋಕ ಬೆಳಗಾವಿ

ಇಲ್ಲಿನ ಹನುಮಾನ ನಗರದಲ್ಲಿನಡೆದ ಕಾರು ಕಳ್ಳತನಕ್ಕೆ ಸಂಬಂಧಿಸಿದಂತೆ ಎಪಿಎಂಸಿ ಠಾಣೆಯ ಪೊಲೀಸರು ಎರಡು ಕಾರು ವಶಕ್ಕೆ ಪಡೆದಿದ್ದಾರೆ.

ಹನುಮಾನ ನಗರದ ಪ್ರಿಯಾಂಕ ಅಜರೇಕರ್ ಎಂಬುವರು ಮೇ 10ರಂದು ತಮ್ಮ ಮನೆ ಮುಂದೆ ನಿಲ್ಲಿಸಿದ್ದ ಕಿಯಾ ಸೆಲ್ಟೊಸ್ ಕಾರು ಕಳ್ಳತನ ಆಗಿರುವ ಬಗ್ಗೆ ಎಪಿಎಂಸಿ ಠಾಣೆಗೆ ದೂರು ನೀಡಿದ್ದರು. ಈ ಕುರಿತು ತನಿಖೆ ಕೈಗೊಂಡಿದ್ದ ಪೊಲೀಸರು, ಮಹಾರಾಷ್ಟ್ರದ ಮುಂಬೈನಲ್ಲಿಕಾರು ಪತ್ತೆ ಹಚ್ಚಿದ್ದರು. ಧಾರವಾಡ ಉಪನಗರ ಠಾಣೆ ವ್ಯಾಪ್ತಿಯಲ್ಲಿಕಳ್ಳನವಾಗಿದ್ದ ಹುಂಡೈ ಕ್ರೆಟಾ ಕಾರು ಕೂಡ ಇದೇ ಸ್ಥಳದಲ್ಲಿಪತ್ತೆಯಾಗಿದೆ. ಆರೋಪಿಗಳು ಪರಾರಿಯಾಗಿದ್ದು, ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.