ಟ್ವಿಶಾ ಶರ್ಮಾ ಪತಿ 7 ದಿನ ಪೊಲೀಸರ ವಶಕ್ಕೆ

Contributed byvijay.cheelange@timesgroup.com|Vijaya Karnataka

ನಟಿ ಟ್ವಿಶಾ ಶರ್ಮಾ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಪತಿ ಸಮರ್ಥ್ ಸಿಂಗ್‌ರನ್ನು ಪೊಲೀಸರು 7 ದಿನ ವಶಕ್ಕೆ ಪಡೆದಿದ್ದಾರೆ. ಮೇ 21ರಂದು ಸೆಷನ್ಸ್ ನ್ಯಾಯಾಲಯ ಸಮರ್ಥ್ ಸಿಂಗ್‌ನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಶುಕ್ರವಾರ ಶರಣಾಗಲು ಬಂದಿದ್ದ ಆತನನ್ನು ಪೊಲೀಸರು ವಶಕ್ಕೆ ಪಡೆದರು. ಟ್ವಿಶಾ ಪೋಷಕರು ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ. ಡೆಲ್ಲಿ ಏಮ್ಸ್‌ನಿಂದ ನಾಲ್ವರು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ.

twiha sharmas husband taken into police custody for 7 days

ಭೋಪಾಲ್ : ಮಾಡೆಲ್ ಹಾಗೂ ನಟಿ ಟ್ವಿಶಾ ಶರ್ಮಾ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿಪತಿ ಹಾಗೂ ವಕೀಲ ಸಮಥ್ ರ್ ಸಿಂಗ್ ರನ್ನು ಪೊಲೀಸರು 7 ದಿನ ವಶಕ್ಕೆ ಪಡೆದಿದ್ದಾರೆ. ಮೇ 21ರಂದು ಭೋಪಾಲ್ ಸೆಷನ್ಸ್ ನ್ಯಾಯಾಲಯವು ಸಮಥ್ ರ್ ಸಿಂಗ್ ನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿ, ತಕ್ಷಣವೇ ಶರಣಾಗುವಂತೆ ಖಡಕ್ ಸೂಚನೆ ನೀಡಿತ್ತು. ಅದರಂತೆ ಶುಕ್ರವಾರ ಜಬ್ಬಲ್ಪುರದ ಸೆಷನ್ಸ… ನ್ಯಾಯಾಲಯಕ್ಕೆ ಶರಣಾಗಲು ಬಂದಿದ್ದ ಸಮಥ್ ರ್ ಸಿಂಗ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಮೆಡಿಕಲ್ ಪರೀಕ್ಷೆ ಮಾಡಿಸಿದ ಪೊಲೀಸರು ಬಳಿಕ ಕೋರ್ಟ್ ಗೆ ಹಾಜರುಪಡಿಸಿದ್ದರು. ಈ ವೇಳೆ 14 ದಿನಗಳ ಕಸ್ಟಡಿಗೆ ಪೊಲೀಸರು ಮನವಿ ಮಾಡಿದರು. ಆದರೆ, ಕೋರ್ಟ್ 7 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ. ಇದೇ ವೇಳೆ ಸಮಥ್ ರ್ ಪಾಸ್ ಪೋರ್ಟ್ ಅನ್ನು ಕೋರ್ಟ್ ಗೆ ಒಪ್ಪಿಸಿದ್ದಾರೆ. ಇನ್ನು, ಸಿಬಿಐ ತನಿಖೆಯೇ ನಮಗೆ ಆಶಾಕಿರಣ. ನನ್ನ ಮಗಳ ಸಾವಿಗೆ ನ್ಯಾಯ ಸಿಗಬೇಕು ಅಂತ ಟ್ವಿಶಾ ಪೋಷಕರು ಆಗ್ರಹಿಸಿದ್ದಾರೆ. ಕೋರ್ಟ್ 2ನೇ ಬಾರಿ ಮರಣೋತ್ತರ ಪರೀಕ್ಷೆಗೆ ಡೆಲ್ಲಿಏಮ್ಸ್ ನಿಂದ ನಾಲ್ವರು ವೈದ್ಯರನ್ನು ನಿಯೋಜಿಸಿದ್ದು, ಶೀಘ್ರದಲ್ಲೇ ನಡೆಯಲಿದೆ.

33 ವರ್ಷದ ಟ್ವಿಶಾ ಶರ್ಮಾ ಮೇ 12ರಂದು ಭೋಪಾಲ್ ನಲ್ಲಿರುವ ಪತಿಯ ಮನೆಯಲ್ಲಿಶವವಾಗಿ ಪತ್ತೆಯಾಗಿದ್ದಳು. ಮಗಳ ಸಾವಿನಿಂದ ಕಂಗಾಲಾಗಿದ್ದ ಟ್ವಿಶಾ ಕುಟುಂಬಸ್ಥರು, ಇದು ಕೇವಲ ಆತ್ಮಹತ್ಯೆಯಲ್ಲ, ಇದರ ಹಿಂದೆ ಪತಿ ಮತ್ತು ಅತ್ತೆಯ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪತಿ ಹಾಗೂ ಅತ್ತೆ ನಿರಂತರವಾಗಿ ವರದಕ್ಷಿಣೆ ಕಿರುಕುಳ ನೀಡುತ್ತಾ, ಆಕೆಯನ್ನು ಆತ್ಮಹತ್ಯೆಗೆ ಪ್ರಚೋದಿಸಿದ್ದಾರೆ ಎಂದು ಪೋಷಕರು ದೂರು ನೀಡಿದ್ದಾರೆ. ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಸಿಂಗ್ ಕುಟುಂಬಸ್ಥರು, ‘‘ಟ್ವಿಶಾ ಮಾದಕ ವ್ಯಸನಕ್ಕೆ ಒಳಗಾಗಿದ್ದಳು, ಅದೇ ಆಕೆಯ ಸಾವಿಗೆ ಕಾರಣ,’’ ಎಂಬ ವಾದವನ್ನು ಮುಂದಿಟ್ಟಿದ್ದಾರೆ.