ತಗ್ಗು-ಗುಂಡಿಗಳ ರಸ್ತೆಗಿಲ್ಲದುರಸ್ತಿ ಭಾಗ್ಯ !

Contributed bys12mainale@gmail.com|Vijaya Karnataka

ಖತಗಾಂವ-ಹಕ್ಯಾಳ ಮೂಲಕ ಮುರ್ಕಿ ಗ್ರಾಮಕ್ಕೆ ಸಂಪರ್ಕಿಸುವ 9 ಕಿ.ಮೀ. ರಸ್ತೆ ಹದಗೆಟ್ಟಿದೆ. ಲೋಕೋಪಯೋಗಿ ಇಲಾಖೆಗೆ ಸೇರಿದ ಈ ರಸ್ತೆಯಲ್ಲಿ ಆಳವಾದ ಗುಂಡಿಗಳು ಹಾಗೂ ಸೇತುವೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಮುರ್ಕಿ ಗ್ರಾಮದ ಮುಖ್ಯರಸ್ತೆಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ನೀರು ನಿಂತು ಗುಂಡಿಗಳು ಉಂಟಾಗಿವೆ. ಇದರಿಂದ ವಾಹನ ಸವಾರರು ಹಾಗೂ ಪಾದಾಚಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

road misfortune ditches and officials negligence

23ಕೆ ಎಂ ಆರ್ 3.

ಕಮಲನಗರ ತಾಲುಕಿನ ಮುರ್ಕಿ ಗ್ರಾಮಕ್ಕೆ ಸಂಪರ್ಕಿಸುವ ಖತಗಾಂವ- ಹಕ್ಯಾಳ ಗ್ರಾಮಗಳ ಮುಖ್ಯ ರಸ್ತೆ.

23ಕೆ ಎಂ ಆರ್ 3-1

ಕಮಲನಗರ ತಾಲೂಕಿನ ಮುರ್ಕಿ ಗ್ರಾಪಂ ವ್ಯಾಪ್ತಿಯಲ್ಲಿಸೂಕ್ತ ಚರಂಡಿ ಇಲ್ಲದೆ ಮುಖ್ಯರಸ್ತೆಯಲ್ಲಿಆಳ ತಗ್ಗು ಬಿದ್ದಿರುವುದು.

****

ತಗ್ಗು-ಗುಂಡಿಗಳ ರಸ್ತೆಗಿಲ್ಲದುರಸ್ತಿ ಭಾಗ್ಯ !

ವಿಕ ಸುದ್ದಿಲೋಕ ಕಮಲನಗರ

ತಾಲೂಕಿನ ಮುರ್ಕಿ ಗ್ರಾಮದ ವ್ಯಾಪ್ತಿಗೆ ಸೇರಿದ ಮುಖ್ಯರಸ್ತೆಯಲ್ಲಿಆಳವಾದ ತಗ್ಗುಗಳು ಕಾಣಿಸಿಕೊಂಡಿವೆ.ಇದರಿಂದಾಗಿ ನಿತ್ಯ ವಾಹನ ಸವಾರರು ಮತ್ತು ಪಾದಾಚಾರಿಗಳು ಪರದಾಡುವಂತಾಗಿದೆ.ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರು ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ. ಕಮಲನಗರ ವ್ಹಾಯಾ ಖತಗಾಂವ ಮತ್ತು ಹಕ್ಯಾಳ ಮೂಲಕ ಮುರ್ಕಿ ಗ್ರಾಮಕ್ಕೆ ಸಂಪರ್ಕಿಸುವ 9ಕಿ.ಮೀ.ಉದ್ದದ ರಸ್ತೆ ಇದಾಗಿದೆ. ಈ ರಸ್ತೆ ಲೋಕೋಪಯೋಗಿ ಇಲಾಖೆಗೆ ಸೇರಿದೆ.ರಸ್ತೆಯಲ್ಲಿಆಳವಾದ ತಗ್ಗುಗಳು ಮತ್ತು ಸೇತುವೆಗಳಲ್ಲಿಬಿರುಕು ಕಾಣಿಸಿಕೊಂಡಿವೆ.ಪಕ್ಕದಲ್ಲಿಗಿಡ ಮತ್ತು ಮುಳ್ಳು ಕಂಟಿ ಬೆಳೆದು ನಿಂತಿವೆ. ಹೀಗಾಗಿ 9ಕಿ.ಮೀ.ಉದ್ದದ ರಸ್ತೆಯಲ್ಲಿಸಂಚರಿಸುವ ವಾಹನ ಸವಾರರಿಗೆ ಒಂಟೆ ಮೇಲೆ ಕುಳಿತು ಸವಾರಿ ಮಾಡುವ ಅನುಭವವಾಗುತ್ತದೆ. ನಿತ್ಯ ನೂರಾರು ವಾಹನಗಳು ರಸ್ತೆಯಲ್ಲಿಸಂಚರಿಸುತ್ತವೆ. ಇದಲ್ಲದೆ ಮುರ್ಕಿ ಗ್ರಾಮದ ವ್ಯಾಪ್ತಿಯಲ್ಲಿಸೂಕ್ತ ಚರಂಡಿ ನಿರ್ಮಿಸದೇ ಇರುವುದರಿಂದ ಮುಖ್ಯರಸ್ತೆಯಲ್ಲಿ ಆಳವಾದ ತಗ್ಗುಗಳು ಕಾಣಿಸಿಕೊಂಡಿವೆ. ಇದರಿಂದ ಬಚ್ಚಲು ಮತ್ತು ಮಳೆ ನೀರು ರಸ್ತೆಯಲ್ಲಿ ನಿಂತುಕೊಳ್ಳುತ್ತವೆ. ಇದರಿಂದ ಪಾದಾಚಾರಿಗಳು ಮುಖ ಮುಚ್ಚಿಕೊಂಡು ಸಂಚರಿಸುತ್ತಾರೆ. ಈ ಬಗ್ಗೆ ಗ್ರಾಮಸ್ತರು ಹಲವು ಬಾರಿ ಮನವಿ ಸಲ್ಲಿಸಿದ್ದಾರೆ.ಆದರೆ, ಇದುವರೆಗೆ ಗ್ರಾಮ ಪಂಚಾಯಿತಿ ಸೂಕ್ತ ಚರಂಡಿ ನಿರ್ಮಿಸದೇ ಇರುವುದರಿಂದ ವಾಹನ ಸವಾರರು ಮತ್ತು ಪಾದಾಚಾರಿಗಳಿಗೆ ಕಿರಿಕ್ ಉಂಟಾಗುತ್ತಿದೆ. ತಕ್ಷಣ 9ಕಿ.ಮೀ.ಉದ್ದ ರಸ್ತೆ ದುರಸ್ತಿ ಕಾಮಗಾರಿ ಕೈಗೊಂಡು ವಾಹನ ಸಂಚಾರಕ್ಕೆ ಸೂಕ್ತ ವ್ಯವಸ್ತೆ ಕಲ್ಪಿಸಬೇಕು ಎಂದು ಗ್ರಾಪಂ ಮಾಜಿ ಸದಸ್ಯ ರವಿ ದೇವರ್ಸೆ ಆಗ್ರಹಿಸಿದ್ದಾರೆ.

ಈ ಕುರಿತು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹನ ಅಭಿಯಂತರ ಅವರಿಗೆ ಮೊಬೈಲ್ ಮೂಲಕ ಸಂಪರ್ಕಿಸಿದರೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.ಇನ್ನಾದರೂ ಸಂಬಂಧಿತ ಅಧಿಕಾರಿಗಳು ಹದಗೆಟ್ಟ ರಸ್ತೆ ದುರಸ್ತಿಗೆ ಮುಂದಾಗಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.