ದಿಡಗ ಸಹಕಾರ ಸಂಘದ ಉಪಾಧ್ಯಕ್ಷ ಮಹೇಶ್
ಹಾಸನ: ಹಿರೀಸಾವೆ ಹೋಬಳಿಯ ದಿಡಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾಗಿ ಉಳ್ಳಾವಳ್ಳಿ ಗ್ರಾಮದ ಎಚ್ .ಎಸ್ .ಮಹೇಶ್ ಅವಿರೋಧವಾಗಿ ಆಯ್ಕೆಯಾದರು.
ಇತ್ತೀಚೆಗೆ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಮಹೇಶ್ ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಬಳಿಕ ನೂತನ ಉಪಾಧ್ಯಕ್ಷ ಎಚ್ .ಎಸ್ .ಮಹೇಶ್ ಅವರನ್ನು ಸಂಘದ ವತಿಯಿಂದ ಅಭಿನಂದಿಸಲಾಯಿತು. ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸಿದರು.
ತಾಪಂ ಮಾಜಿ ಸದಸ್ಯ ಪುಟ್ಟರಾಜು, ಎಂ.ಆರ್ .ವಾಸು, ಎಪಿಎಂಸಿ ಮಾಜಿ ಅಧ್ಯಕ್ಷ ರಘುರಾಮ್ , ಸಂಘದ ಅಧ್ಯಕ್ಷ ಎಚ್ .ಕೆ.ಯೋಗೇಶ್ , ಮಾಜಿ ಅಧ್ಯಕ್ಷ ತಾತೇಗೌಡ, ಮಾಜಿ ಉಪಾಧ್ಯಕ್ಷ ಕುಮಾರ್ , ನಿರ್ದೇಶಕರಾದ ಮಧು, ಮಲ್ಲೇಗೌಡ, ವೆಂಕಟೇಶ್ , ಬಾಲು, ತುಳಸಿ, ಪ್ರಮುಖರಾದ ಜೆ.ಎಸ್ .ಮಂಜುನಾಥ್ , ಜೆ.ಜೆ.ಧನಂಜಯ, ಜೆ.ಡಿ.ಮಂಜುನಾಥ್ , ಸಂಘದ ಕಾರ್ಯನಿರ್ವಹಣಾಧಿಕಾರಿ ನಿಂಗಮ್ಮ, ಸಿಬ್ಬಂದಿ ವರ್ಗ ಹಾಗೂ ಇತರರು ಹಾಜರಿದ್ದರು.

