ಗೋಣಿಕೊಪ್ಪ ಕಾವೇರಿ ಕಾಲೇಜಿಗೆ ಸಮಗ್ರ ಪ್ರಶಸ್ತಿ

Contributed byjagadishjodubeeti@gmail.com|Vijaya Karnataka

ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ಜಿಲ್ಲಾಮಟ್ಟದ ಭಾಷಣ ಸ್ಪರ್ಧೆ ನಡೆಯಿತು. ವಿರಾಜಪೇಟೆ ಕಾವೇರಿ ಪದವಿ ಕಾಲೇಜು ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು. ಪೊನ್ನಂಪೇಟೆ ಹಳ್ಳಿಗಟ್ಟು ಸಿಐಟಿ ಕಾಲೇಜು ದ್ವಿತೀಯ ಸ್ಥಾನ ಪಡೆಯಿತು. ಕನ್ನಡ ಮತ್ತು ಇಂಗ್ಲಿಷ್ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿದರು. ತೀರ್ಪುಗಾರರು ಸ್ಪರ್ಧೆಯನ್ನು ನಡೆಸಿಕೊಟ್ಟರು. ಹಿರಿಯ ಪತ್ರಕರ್ತರು ಭಾಷಣದ ಮಹತ್ವವನ್ನು ತಿಳಿಸಿದರು. ಪ್ರಾಂಶುಪಾಲರು ಅಧ್ಯಕ್ಷತೆ ವಹಿಸಿದ್ದರು. ಪ್ರಾಯೋಜಕರು ಮತ್ತು ಹಳೇ ವಿದ್ಯಾರ್ಥಿಗಳು ಬಹುಮಾನ ವಿತರಿಸಿದರು.

gonikoppa kaveri college wins speech competition

ಜಿಲ್ಲಾಮಟ್ಟದ ಭಾಷಣ ಸ್ಪರ್ಧೆ | ಹಳ್ಳಿಗಟ್ಟು ಸಿಐಟಿ ಕಾಲೇಜಿಗೆ ದ್ವಿತೀಯ ಸ್ಥಾನ

ವಿಕ ಸುದ್ದಿಲೋಕ ಗೋಣಿಕೊಪ್ಪ

ಇಲ್ಲಿನ ಕಾವೇರಿ ಕಾಲೇಜು ಸಭಾಂಗಣದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಜಿಲ್ಲಾಮಟ್ಟದ ಭಾಷಣ ಸ್ಪರ್ಧೆಯಲ್ಲಿವಿರಾಜಪೇಟೆ ಕಾವೇರಿ ಪದವಿ ಕಾಲೇಜು ಸಮಗ್ರ ಪ್ರಶಸ್ತಿ ಪಡೆದುಕೊಂಡರೆ, ಪೊನ್ನಂಪೇಟೆ ಹಳ್ಳಿಗಟ್ಟು ಸಿಐಟಿ ಕಾಲೇಜು ದ್ವಿತೀಯ ಸ್ಥಾನ ಪಡೆಯಿತು.

ಕಾವೇರಿ ಕಾಲೇಜು, ಕಾವೇರಿ ಕಾಲೇಜು ಅಲುಮ್ನಿ ಅಸೋಸಿಯೇಷನ್ ಸಹಯೋಗದಲ್ಲಿದಿ. ಪುಚ್ಚಿಮಾಡ ತಿಮ್ಮಯ್ಯ, ದಿ.ಪುಚ್ಚಿಮಾಡ ಚೋದಮ್ಮ ತಿಮ್ಮಯ್ಯ, ದಿ.ಪುಚ್ಚಿಮಾಡ ಮೀನಾ ಸುಬ್ಬಯ್ಯ ಅವರ ಜ್ಞಾಪಕಾರ್ಥವಾಗಿ ಹಮ್ಮಿಕೊಂಡಿದ್ದ ಸ್ಪರ್ಧೆಯ ಕನ್ನಡ ವಿಭಾಗದಲ್ಲಿವಿರಾಜಪೇಟೆ ಕಾವೇರಿ ಕಾಲೇಜಿನ ರಕ್ಷಿತಾ.ಬಿ.ಎಸ್ ಪ್ರಥಮ, ಗೋಣಿಕೊಪ್ಪ ಕಾವೇರಿ ಕಾಲೇಜಿನ ಮನ.ಕೆ.ಆರ್ ದ್ವಿತೀಯ, ಸಿಐಟಿ ಕಾಲೇಜಿನ ಅದ್ವಿಕಾ ತೃತೀಯ ಬಹುಮಾನ ಪಡೆದುಕೊಂಡರು.

ಇಂಗ್ಲಿಷ್ ವಿಭಾಗದಲ್ಲಿವಿರಾಜಪೇಟೆ ಸಂತ ಅನ್ನಮ್ಮ ಪದವಿ ಕಾಲೇಜಿನ ಮೊಹಮದ್ ಅಜ್ನಾಸ್ ಪ್ರಥಮ, ವಿರಾಜಪೇಟೆ ಕಾವೇರಿ ಪದವಿ ಕಾಲೇಜಿನ ಮುತ್ತಮ್ಮ.ಎನ್ .ಬಿ ದ್ವಿತೀಯ, ಸಿಐಟಿ ಕಾಲೇಜಿನ ರಚಲ್ ನೀಲಮ್ಮ ತೃತೀಯ ಸ್ಥಾನ ಪಡೆದುಕೊಂಡರು.

ಬಿಳುಗುಂದ ಸರಕಾರಿ ಪ್ರೌಢಶಾಲೆ ಶಿಕ್ಷಕರಾದ ಚೋಕಿರ ಅನಿತಾ, ಮಡಿಕೇರಿ ಆಕಾಶವಾಣಿ ಉದ್ಗೋಷಕಿ ಬಾಳೆಯಡ ದಿವ್ಯ ಮಂದಪ್ಪ, ಪತ್ರಕರ್ತ ಕಿಶೋರ್ ರೈ ಕತ್ತಲೆಕಾಡು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.

ಹಿರಿಯ ಪತ್ರಕರ್ತ ಬಿ.ಜಿ.ಅನಂತ ಶಯನ ಮಾತನಾಡಿ, ‘‘ಭಾಷಣ ಎಂದರೆ ಕೇವಲ ಪದಗಳನ್ನು ಉಚ್ಛರಿಸುವುದಲ್ಲ. ಶಬ್ಧಗಳಿಗೆ ಜೀವ ತುಂಬುವ ಕಲೆಯಾಗಿದೆ,’’ ಎಂದು ಅಭಿಪ್ರಾಯಪಟ್ಟರು.

ಪ್ರಾಂಶುಪಾಲ ಡಾ.ಎಂ.ಬಿ.ಕಾವೇರಿಯಪ್ಪ ಅಧ್ಯಕ್ಷತೆಯಲ್ಲಿನಡೆದ ಕಾರ್ಯಕ್ರಮದಲ್ಲಿಭಾಷಣ ಸ್ಪರ್ಧೆಯ ಪ್ರಾಯೋಜಕರು ಹಾಗೂ ಹಳೇ ವಿದ್ಯಾರ್ಥಿ ಪಿ.ಟಿ.ಸುಭಾಷ್ ಸುಬ್ಬಯ್ಯ, ಪುಚ್ಚಿಮಾಡ ಅಶೋಕ್ ಅಚ್ಚಪ್ಪ, ಪುಚ್ಚಿಮಾಡ ಲಾಲ ಪೂಣಚ್ಚ, ಕಾವೇರಿ ಅಲುಮೈ ್ನ ಅಸೋಸಿಯೇಷನ್ ಉಪಾಧ್ಯಕ್ಷ ಕೊಂಗಂಡ ಪಿ.ಅಚ್ಚಯ್ಯ, ಕಾರ್ಯದರ್ಶಿ ಪಳಂಗಂಡ ವಾಣಿ ಚಂಗಪ್ಪ ವಿಜೇತರಿಗೆ ಬಹುಮಾನ ವಿತರಿಸಿದರು.

ಕಾವೇರಿ ಎಜುಕೇಷನ್ ಸೊಸೈಟಿ ಉಪಾಧ್ಯಕ್ಷ ಕುಪ್ಪಂಡ ಬೆಳ್ಳಿಯಪ್ಪ, ಅಲುಮ್ನಿ ಅಸೋಸಿಯೇಷನ್ ಖಜಾಂಚಿ ಕಳ್ಳಿಚಂಡ ಮುತ್ತಪ್ಪ, ಪದಾಧಿ ಕಾರಿಗಳಾದ ಬಲ್ಯಮಿದೇರಿರ ಆಶಾ ಶಂಕರ್ , ಜಮ್ಮಡ ಜಯ ಜೋಯಪ್ಪ, ಜಮ್ಮಡ ಶಂಭು ಬಿದ್ದಪ್ಪ, ಉಪ ಪ್ರಾಂಶುಪಾಲೆ ಪ್ರೊ.ಎಂ.ಎಸ್ .ಭಾರತಿ, ಭಾಷಣ ಸ್ಪರ್ಧೆ ಸಂಚಾಲಕಿ ಡಾ.ಸಿ.ಎಂ.ರೇವತಿ, ಅಲುಮ್ನೈ ಅಸೋಸಿಯೇಷನ್ ಸಂಚಾಲಕಿ ಎಸ್ .ಎಂ.ರಜನಿ, ವಿದ್ಯಾರ್ಥಿನಿ ಕ್ರೀಷ್ಮ, ಡಾ.ರೇವತಿ, ಎನ್ .ಪಿ.ರೀತಾ, ಹೆಲನ್ , ಶಶಿಕಲಾ ಇದ್ದರು.

ಫೋಟೋ: 23 ಜಿ.ಕೆ.ಎಲ್ 01:

ಭಾಷಣ ಸ್ಪರ್ಧೆಯಲ್ಲಿವಿಜೇತರಾದ ವಿದ್ಯಾರ್ಥಿಗಳ ತಂಡ.