ಸೇತುವೆ ಕಾಮಗಾರಿ ಬಿರುಸು
ರಬಕವಿ-ಬನಹಟ್ಟಿ : ತೇರದಾಳ ಕ್ಷೇತ್ರದಲ್ಲಿಮುಖಂಡರ ರಾಜಕೀಯ ಕೆಸರೆರಚಾಟದ ನಡುವೆಯೂ ಮಹಿಷವಾಡಗಿ ಸೇತುವೆ ನಿರ್ಮಾಣ ಕಾಮಗಾರಿ ಬಿರುಸು ಪಡೆದುಕೊಂಡಿರುವುದು ಅವಳಿನಗರದ ಜನರಲ್ಲಿಸಂತಸ ತಂದಿದೆ.
50ಕ್ಕೂ ಅಧಿಕ ಕಾರ್ಮಿಕರು ನದಿಪಾತ್ರದಲ್ಲಿಪಿಲ್ಲರ್ ಗಳ ನಿರ್ಮಾಣ ಕಾರ್ಯದಲ್ಲಿತೊಡಗಿದ್ದಾರೆ. ಬೇಸಿಗೆ ಮುಗಿಯಲು 15 ದಿನಗಳ ಬಾಕಿ ಇದ್ದು, ಅಷ್ಟರೊಳಗಾಗಿ ಪಿಲ್ಲರ್ ನಂ.7 ಮತ್ತು 8ರ ಕಾರ್ಯಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ. ಮುಂದಿನ ಮಾರ್ಚ್ ತಿಂಗಳೊಳಗೆ ಸೇತುವೆ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಎಂಜಿನಿಯರ್ ಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಾಸಕ ಸಿದ್ದು ಸವದಿ ಹಾಗೂ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಅವರು ದಿನ ಬಿಟ್ಟು ದಿನ ಸೇತುವೆ ಕಾಮಗಾರಿ ವೀಕ್ಷಣೆಯಲ್ಲಿತೊಡಗಿದ್ದರೆ, ಮತ್ತೊಂದೆಡೆ ರಬಕವಿ ಹಾಗೂ ಬನಹಟ್ಟಿಯ ಹೋರಾಟಗಾರರು ಕಾಮಗಾರಿ ಸ್ಥಳದಲ್ಲಿಯೇ ಬಿಡಾರ ಹೂಡಿ ನಿರ್ಮಾಣ ವೇಗ ಪಡೆಯುವಂತೆ ಮಾಡಿದೆ.
ಬಿಎನ್ ಟಿ 23-4
ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಮಹಿಷವಾಡಗಿ ಸೇತುವೆ ಕಾಮಗಾರಿ ಬಿರುಸಿನಿಂದ ನಡೆದಿರುವುದು.

