** ಬಂಟ್ವಾಳ ಕ್ಷೇತ್ರದ ರೈಲ್ವೆ ಪ್ರಮುಖ ಬೇಡಿಕೆ ಈಡೇರಿಸಿ ರಾಜ್ಯ ಸಚಿವ ವಿ.ಸೋಮಣ್ಣ ರಿಗೆ ಶಾಸಕ ರಾಜೇಶ್ ನಾಯ್ ್ಕ ಮನವಿ

Contributed bymambadynews@gmail.com|Vijaya Karnataka

ಬಂಟ್ವಾಳ ವಿಧಾನಸಭಾ ಕ್ಷೇತ್ರದ ರೈಲ್ವೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಶಾಸಕ ರಾಜೇಶ್‌ ನಾಯ್‌್ಕ ಅವರು ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ಆರು ಪ್ರಮುಖ ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಅಜ್ಜಿಬೆಟ್ಟು, ಕುಂಭೋಧರಿ ದೇವಸ್ಥಾನ, ರೈಲು ನಿಲ್ದಾಣ ಬಳಿ ರಸ್ತೆ ಅಭಿವೃದ್ಧಿ, ಅಂಡರ್‌ಪಾಸ್‌ ಮತ್ತು ಪುಟ್‌ ಬ್ರಿಡ್ಜ್‌ ನಿರ್ಮಾಣ ಹಾಗೂ ನೇರಳಕಟ್ಟೆ ನಿಲ್ದಾಣದಲ್ಲಿ ರೈಲುಗಳ ನಿಲುಗಡೆಗೆ ಮನವಿ ಮಾಡಲಾಗಿದೆ. ಈ ಕಾಮಗಾರಿಗಳು ಸಾರ್ವಜನಿಕರ ಅನುಕೂಲಕ್ಕಾಗಿ ಕೈಗೊಳ್ಳಲು ಕೋರಲಾಗಿದೆ.

request to v somanna to fulfill railway demands of bantwal constituency by rajesh nayak

ವಿಕ ಸುದ್ದಿಲೋಕ ಬಂಟ್ವಾಳ

ರೈಲ್ವೆ ಇಲಾಖೆಗೆ ಸಂಬಂಧಿಸಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆರು ಆದ್ಯತೆಯ ಅಭಿವೃದ್ಧಿ ಕಾಮಗಾರಿಗಳ ಬೇಡಿಕೆಯನ್ನು ಶಾಸಕ ರಾಜೇಶ್ ನಾಯ್ ್ಕ ಉಳಿಪ್ಪಾಡಿ ಅವರು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಸಲ್ಲಿಸಿದ್ದಾರೆ.

ಖಾಸಗಿ ಭೇಟಿಗೆ ಸಂಬಂಧಿಸಿ ಶನಿವಾರ ತಮ್ಮ ನಿವಾಸಕ್ಕೆ ಆಗಮಿಸಿದ ವೇಳೆ ಶಾಸಕರು ಈ ಮನವಿ ನೀಡಿದ್ದಾರೆ. ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರೈಲ್ವೆ ಇಲಾಖೆಗೆ ಸಂಬಂಧಪಟ್ಟಂತೆ ಸಾರ್ವಜನಿಕರ ಅನೇಕ ಬೇಡಿಕೆಗಳಿದ್ದು, ಅವುಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕೆಂದು ಎಂದು ಮನವಿ ಮಾಡಿದರು. ಸಂಸದ ಕ್ಯಾ.ಬ್ರಿಜೇಶ್ ಚೌಟ, ಮಂಗಳೂರು ಉತ್ತರ ಶಾಸಕ ಡಾ.ವೈ. ಭರತ್ ಶೆಟ್ಟಿ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾಬಿಜೆಪಿ ಪ್ರಧಾನ ಕಾರ್ಯದರ್ಶಿ ಪೂಜಾ ಪೈ, ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ನಿತಿನ್ ಕುಮಾರ್ , ಮಾಜಿ ಮೇಯರ್ ಕವಿತಾ ಸನಿಲ್ , ಹಾಸನ ಜಿಲ್ಲೆಯ ಮಾಜಿ ಜಿ.ಪಂ.ಸದಸ್ಯ ಅಮಿತ್ ಶೆಟ್ಟಿ, ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ಚೆನ್ನಪ್ಪ ಆರ್ . ಕೋಟ್ಯಾನ್ , ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ, ಜಿಲ್ಲಾಕಾರ್ಯದರ್ಶಿ ದಿನೇಶ್ ಅಮ್ಟೂರು, ಸ್ಕ್ಯಾ ಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಜಿಲ್ಲಾಉಪಾಧ್ಯಕ್ಷ ದೇವಪ್ಪ ಪೂಜಾರಿ, ಕೆಎಂಎಫ್ ನಿರ್ದೇಶಕ ನಂದರಾಮ ರೈ, ಸೋಹನ ಅಧಿಕಾರಿ, ಬೂಡ ಮಾಜಿ ಅಧ್ಯಕ್ಷ ದೇವದಾಸ್ ಶೆಟ್ಟಿ ಬಂಟ್ವಾಳ, ಸಚಿನ್ ಅಡಪ, ಗ್ರಾ.ಪಂ.ಮಾಜಿ ಸದಸ್ಯ ಗಣೇಶ್ ರೈ ಮಾಣಿ, ಬಿಜೆಪಿ ಬಂಟ್ವಾಳ ಮಾಧ್ಯಮ ಪ್ರಮುಖ್ ಪುರುಷೋತ್ತಮ ಶೆಟ್ಟಿ ವಾಮದಪದವು, ಪ್ರಮುಖರಾದ ಪ್ರಭಾಕರ್ ಶೆಟ್ಟಿ, ಚಂದ್ರಹಾಸ ಶೆಟ್ಟಿ ನಾರ್ಲ, ಪ್ರಣಾಮ್ ರಾಜ್ ಅಜ್ಜಿಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.

ಆರು ಬೇಡಿಕೆಗಳು ಇವು:

1. ಬಂಟ್ವಾಳ ತಾಲೂಕು ಬಿ.ಮೂಡ ಗ್ರಾಮದ ಅಜ್ಜಿಬೆಟ್ಟು ಶಾಲಾ ಬಳಿಯಿಂದ ದೈಪಲ ಸಂಪರ್ಕ ರಸ್ತೆಗೆ ಆಜ್ಜಿಬೆಟ್ಟು ಶಾಲಾ ಬಳಿ ರೈಲ್ವೆ ಬ್ರಿಡ್ಜ್ ನಿರ್ಮಾಣ.

2. ಬಂಟ್ವಾಳ ತಾಲೂಕು ಬಿ.ಮೂಡ ಗ್ರಾಮದ ಕುಂಬೋಧರಿ ಮಠ ದೇವಸ್ಥಾನದಿಂದ ಕುಲಾಲ ಭವನದ ಸಂಪರ್ಕ ರಸ್ತೆಗೆ ಕುಂಭೋಧರಿ ದೇವಸ್ಥಾನ ಬಳಿ ಅಂಡರ್ ಪಾಸ್ ರಚನೆ.

3. ಬಂಟ್ವಾಳ ತಾಲೂಕು ಬಿ.ಮೂಡ ಗ್ರಾಮದ ರೈಲು ನಿಲ್ದಾಣ ಬಳಿ ಹಿಂದೂ ರುದ್ರ ಭೂಮಿ ಮತ್ತು ರೈಲ್ವೆ ವಸತಿ ನಿಲಯ ಸಂಪರ್ಕ ರಸ್ತೆ ಅಭಿವೃದ್ಧಿ

4. ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ ದೇವಸ್ಯ ಕುದ್ರೆಮಾರ್ -ತೋಟ ಭಾಗಕ್ಕೆ ಸಂಪರ್ಕಿಸಲು ದೇವಸ್ಯ ಕುದ್ರೆಮಾರ್ ಎಂಬಲ್ಲಿಅಂಡರ್ ಪಾಸ್ ನಿರ್ಮಾಣ.

5. ಬಂಟ್ವಾಳ ತಾಲೂಕು ನೆಟ್ಟಮುಡ್ನರು ಗ್ರಾಮದ ನೇರಳಕಟ್ಟೆ ರೈಲು ನಿಲ್ದಾಣದ ಬಳಿ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಸಂಚರಿಸಲು ಪುಟ್ ಬ್ರಿಡ್ಜ್ ನಿರ್ಮಾಣ.

6. ಮಂಗಳೂರು-ಬೆಂಗಳೂರು ಸಂಪರ್ಕ ರೈಲುಗಳಿಗೆ ನೇರಳಕಟ್ಟೆ ನಿಲ್ದಾಣದಲ್ಲಿನಿಲುಗಡೆ ನೀಡಬೇಕು.

ಚಿತ್ರ: 23ಬಿಎಚ್ ರೈಲ್ವೆ

ರೈಲ್ವೆ ಸಚಿವ ವಿ.ಸೋಮಣ್ಣ ಅವರಿಗೆ ಶಾಸಕ ರಾಜೇಶ್ ನಾಯ್ ್ಕ ಉಳಿಪ್ಪಾಡಿ ಮನವಿ ಸಲ್ಲಿಸಿದರು.