ಚೂರು ಪಾರು
ಫೋಟೋಕ್ಯಾಪ್ಷನ್ : ಕೇಂದ್ರ ಸರಕಾರ ಪ್ರಕಟಿಸಿದ್ದ 4 ಕಾರ್ಮಿಕ ಸಂಹಿತೆಗಳ ಕರಡು ನಿಯಮಾವಳಿಗಳಿಗೆ ಕಾರ್ಮಿಕ ಸಂಘಟನೆಗಳು ಸಲ್ಲಿಸಿದ ಆಕ್ಷೇಪಣೆಗಳನ್ನು ಪರಿಗಣಿಸದೆ, ಅಂತಿಮ ನಿಯಮಾವಳಿಗಳನ್ನು ಪ್ರಕಟಿಸಿ ನಾಲ್ಕು ಸಂಹಿತೆಗಳನ್ನು ಅನುಷ್ಠಾನಕ್ಕೆ ತರಲಾಗಿರುವುದನ್ನು ಕೂಡಲೇ ವಾಪಸು ಪಡೆಯಬೇಕೆಂದು ಸಿಐಟಿಯು ನೇತೃತ್ವದಲ್ಲಿಕೋಲಾರದ ಮೆಕ್ಕೆ ವೃತ್ತದಲ್ಲಿಪ್ರತಿಭಟನೆ ನಡೆಸಲಾಯಿತು. (12ಕೆಪಿಎಚ್ 5)
=
ಹುದ್ದೆಗಳಿಗೆ ಅರ್ಜಿ ಆಹ್ವಾನ
ಕೋಲಾರ : 2026-27 ಸಾಲಿನಲ್ಲಿಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯನಿರ್ವಹಿಸುತ್ತಿರುವ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ಶಾಲೆ, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಮತ್ತು ಮೌಲಾನಾ ಆಜಾದ್ ಮಾದರಿ ಶಾಲೆಗಳು ಹಾಗೂ ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜು ಮತ್ತು ಮೌಲಾನಾ ಆಜಾದ್ ಪದವಿ ಪೂರ್ವ ಕಾಲೇಜುಗಳಲ್ಲಿಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಖಾಲಿ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರು, ಶಿಕ್ಷಕರನ್ನು ನೇಮಿಸಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಸಂಬಂಧಪಟ್ಟ ವಿಷಯಗಳಲ್ಲಿಪದವಿ, ಸ್ನಾತಕೋತ್ತರ ಪದವಿಯೊಂದಿಗೆ ಬಿ.ಇಡಿ. ಪದವಿಯನ್ನು ಪಡೆದಿರಬೇಕು. ಅರ್ಜಿಗಳನ್ನು ಮೇ 25ರ ವರೆಗೆ ಜಿಲ್ಲಾಕಚೇರಿಯಲ್ಲಿನೇರವಾಗಿ ಪಡೆದು ಜಿಲ್ಲಾಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರಾವಾಣಿ ಸಂಖ್ಯೆ:08152-295257, ಅನ್ನು ಸಂಪರ್ಕಿಸಬಹುದೆಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಅಧಿಕಾರಿಗಳು ಪ್ರಟಕಣೆಯಲ್ಲಿತಿಳಿಸಿದ್ದಾರೆ.
=
ಮೇ 14ಕ್ಕೆ ಕಣ್ಣಿನ ಚಿಕಿತ್ಸಾ ಶಿಬಿರ
ಕೋಲಾರ : ಜಿಲ್ಲಾಅಂಗವಿಕಲರ ಕಲ್ಯಾಣಾಧಿಕಾರಿಗಳ ಇಲಾಖಾ ವತಿಯಿಂದ ಬೆಂಗಳೂರಿನ ಕುಂದಲಹಳ್ಳಿಯ ಶಂಕರ ಕಣ್ಣಿನ ಆಸ್ಪತ್ರೆಯವರು ಕೋಲಾರ ತಾಲೂಕಿನ ವಿಶೇಷಚೇತನರು, ಹಿರಿಯ ನಾಗರಿಕರಿಗೆ ಉಚಿತವಾಗಿ ಕಣ್ಣಿನ ಚಿಕಿತ್ಸಾ ಶಿಬಿರವನ್ನು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿಕಾರ್ಯಕ್ರಮವನ್ನು ಮೇ 14 ರಂದು ಬೆಳಗ್ಗೆ 11 ಗಂಟೆಗೆ ಹಮ್ಮಿಕೊಂಡಿದ್ದಾರೆ. ವಿಶೇಷಚೇತನರು, ಹಿರಿಯ ನಾಗರಿಕರು ಭಾಗವಹಿಸಬೇಕೆಂದು ಇಲಾಖೆಯ ಜಿಲ್ಲಾಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿತಿಳಿಸಿದ್ದಾರೆ.
=
ಆಹಾರ ಧಾನ್ಯ-ಮುಂಗಡ ವಿತರಣೆ
ಕೋಲಾರ : ರಾಷ್ಟ್ರೀಯ ಆಹಾರ ಭತ್ರದಾ ಕಾಯಿದೆಯಡಿ ದೇಶದಲ್ಲಿಮುಂಬರುವ ಖರೀದಿ ಋುತುವಿನ ಹಿನ್ನೆಲೆಯಲ್ಲಿಮತ್ತು ಪರಿಣಾಮಕಾರಿ ಲಾಜಿಸ್ಟಿಕ್ಸ್ ಹಾಗೂ ಸಂಗ್ರಹಣೆಗಾಗಿ ರಾಜ್ಯಗಳು ಎದರಿಸುತ್ತಿರುವ ಅಡಚಣೆಗಳಿಂದಾಗಿ ಎನ್ ಎಫ್ ಎಸ್ ಎ ಅಡಿಯಲ್ಲಿನೀಡಲಾಗುತ್ತಿರುವ ಆಹಾರಧಾನ್ಯಗಳನ್ನು ಎರಡು ತಿಂಗಳ ಹಂಚಿಕೆ ವಿತರಣೆ ಮಾಡುವಂತೆ ಸೂಚಿಸಲಾಗಿದೆ.
ಮೇ ಮತ್ತು ಜೂನ್ -2026ರಲ್ಲಿಜಿಲ್ಲೆಗೆ ಅಂತ್ಯೋದಯ ಮತ್ತು ಅದ್ಯತಾ ಪಡಿತರ ಚೀಟಿಗಳಿಗೆ 4398-000 ಎಂಟಿ ಅಕ್ಕಿ ಮತ್ತು 6816 ಎಂಟಿ ರಾಗಿ ಹಂಚಿಕೆಯನ್ನು ನೀಡಲಾಗಿದೆ. ಅನ್ನಭಾಗ್ಯ ಯೋಜನೆಯ ಅಡಿಯಲ್ಲಿಹೆಚ್ಚುವರಿ 5 ಕೆಜಿ ಅಕ್ಕಿಯನ್ನು ಮೇ ಮತ್ತು ಜೂನ್ -2026ರಲ್ಲಿ10 ಕೆಜಿಯಂತೆ ಅಕ್ಕಿಯನ್ನು ಆದ್ಯತಾ ಹಾಗೂ ಅಂತ್ಯೋದಯ ಪಡಿತರ ಚೀಟಿಯ ಫಲಾನುಭವಿಗಳಿಗೆ ಈಗಾಗಲೇ ವಿತರಿಸುವ ರೀತಿಯಲ್ಲಿಜೂನ್ -2026ರ ಮಾಹೆಯಲ್ಲಿಯೇ ವಿತರಿಸಬೇಕೆಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿತಿಳಿಸಿದ್ದಾರೆ.

