ವಿಕ ಸುದ್ದಿಲೋಕ ಶಿಗ್ಗಾವಿ
ವಿಶೇಷ ಮಕ್ಕಳ ಶಿಕ್ಷಣವು ಅವರ ಬದುಕಿನ ದಿಕ್ಕನ್ನೇ ಬದಲಾಯಿಸುವ ಶಕ್ತಿ ಹೊಂದಿದೆ. ಇಂತಹ ಮಕ್ಕಳಲ್ಲಿಆತ್ಮವಿಶ್ವಾಸ ಮತ್ತು ಸ್ವಾವಲಂಬನೆಯ ಮನೋಭಾವ ಬೆಳೆಸುವುದು ಅತ್ಯಂತ ಅಗತ್ಯ ಎಂದು ಮಾಜಿ ಸಂಸದ ಮಂಜುನಾಥ ಕುನ್ನೂರ ಹೇಳಿದರು.
ಸೋಮವಾರ ಪಟ್ಟಣದ ಶ್ರೀ ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿಗಳವರ ಕಿವುಡ ಮೂಕ ಮಕ್ಕಳ ವಸತಿ ಶಾಲೆಯಲ್ಲಿನಡೆದ ಜಿಲ್ಲಾಮಟ್ಟದ ಕಿವುಡ, ಮೂಕ ಮಕ್ಕಳ ಹಾಗೂ ಪಾಲಕರ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘‘ಪಾಲಕರು ಮಕ್ಕಳ ಸಾಮರ್ಥ್ಯ ಗುರುತಿಸಿ ಪ್ರೋತ್ಸಾಹ ನೀಡಿದಾಗ ಮಾತ್ರ ಅವರು ಸಮಾಜದಲ್ಲಿವಿಶಿಷ್ಟ ಸಾಧನೆ ಮಾಡಲು ಸಾಧ್ಯವಾಗುತ್ತದೆ’’ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸ್ಥೆ ಕಾರ್ಯದರ್ಶಿ ರಾಜು ಕುನ್ನೂರ, ‘‘ಕಿವುಡ, ಮೂಕ ಮಕ್ಕಳ ಸಮಗ್ರ ಬೆಳವಣಿಗೆಗಾಗಿ ಸಂಸ್ಥೆ ನಿರಂತರ ಸೇವಾ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಶಿಕ್ಷಣದ ಜತೆಗೆ ಸಾಂಸ್ಕೃತಿಕ, ವೃತ್ತಿಪರ ಹಾಗೂ ವ್ಯಕ್ತಿತ್ವ ವಿಕಸನ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುತ್ತಿದೆ’’ ಎಂದರು.
ಸಂಸ್ಥೆ ಅಧ್ಯಕ್ಷೆ ಸ್ನೇಹಲತಾ ಕುನ್ನೂರ ಮಾತನಾಡಿ, ‘‘ವಿಶೇಷ ಮಕ್ಕಳಿಗೆ ಪ್ರೀತಿ, ಸಹಾನುಭೂತಿ ಮತ್ತು ಸಮರ್ಪಕ ಶಿಕ್ಷಣ ದೊರೆತಾಗ ಅವರ ಭವಿಷ್ಯ ಉಜ್ವಲವಾಗುತ್ತದೆ’’ ಎಂದರು. ಪ್ರಾಚಾರ್ಯ ಡಾ.ನಾಗರಾಜ ದ್ಯಾಮನಕೊಪ್ಪ ಮಾತನಾಡಿ, ‘‘ಕಿವುಡ, ಮೂಕ ಮಕ್ಕಳಿಗೆ ಸಮಾಜದಲ್ಲಿಸಮಾನ ಅವಕಾಶಗಳು ದೊರಕಬೇಕಾದರೇ ಪಾಲಕರು, ಶಿಕ್ಷಕರು ಹಾಗೂ ಸಮಾಜ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು’’ ಎಂದರು.
ಕಿವುಡ, ಮೂಕ ಮಕ್ಕಳ ವ್ಯಕ್ತಿತ್ವ ವಿಕಸನ ಕುರಿತು ಉಪನ್ಯಾಸ ನೀಡಿದ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ನಾಗಪ್ಪ ಬೆಂತೂರ, ಮಕ್ಕಳಲ್ಲಿಆತ್ಮಸೈ್ಥರ್ಯ, ಶಿಸ್ತು ಹಾಗೂ ಸೃಜನಶೀಲತೆ ಬೆಳೆಸುವಲ್ಲಿಪಾಲಕರು ಮತ್ತು ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದರು. ಕಾರ್ಯಕ್ರಮದಲ್ಲಿಸಿದ್ದಪ್ಪ ಮಸಳಿ, ಮಂಜುಳಾ ಗೋಡಿ, ರೇಣುಕಾ ಮಾಗಿ, ಅರ್ಪಿತಾ ಅರೋರಾ, ವೈಷ್ಣವಿ ಕುನ್ನೂರ ಮುಖ್ಯೋಪಾಧ್ಯಾಯ ಎಂ.ಬಿ.ನೀರಲಗಿ ಸೇರಿದಂತೆ ಹಲುವು ಉಪಸ್ಥಿತರಿದ್ದರು. ಶಿವಕುಮಾರ ಹಿರೇಮಠ ಸ್ವಾಗತಿಸಿದರು. ಶಿಕ್ಷಕಿ ಶ್ವೇತಾ ಅತ್ತಿಗೇರಿ ನಿರೂಪಿಸಿದರು. ಶಿಕ್ಷಕಿ ಜ್ಯೋತಿ ನೀರಲಗಿ ವಂದಿಸಿದರು.
-
12ಎಸ್ .ಜಿ.ಎನ್ .2
ಶಿಗ್ಗಾವಿ ಪಟ್ಟಣದ ಶ್ರೀಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿಗಳವರ ಕಿವುಡ ಮೂಕ ಮಕ್ಕಳ ವಸತಿ ಶಾಲೆಯಲ್ಲಿನಡೆದ ಜಿಲ್ಲಾಮಟ್ಟದ ಕಿವುಡ, ಮೂಕ ಮಕ್ಕಳ ಹಾಗೂ ಪಾಲಕರ ಸಮಾವೇಶವನ್ನು ರಾಜು ಕುನ್ನೂರ ಉದ್ಘಾಟಿಸಿದರು.

