ಕೃಷಿಗೆ 7 ಗಂಟೆ ವಿದ್ಯುತ್ ನೀಡಲು ಸೂಚನೆ

Contributed byBASAVARAJU KG|Vijaya Karnataka

ರೈತರ ಪಂಪ್‌ಸೆಟ್‌ಗಳಿಗೆ 7 ಗಂಟೆ ನಿರಂತರ ವಿದ್ಯುತ್‌ ನೀಡಲು ಬೆಸ್ಕಾಂಗೆ ಸೂಚನೆ ನೀಡಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಅನುಮೋದನೆ ನೀಡಲಾಗಿದೆ. ಹೊಸ ವಿದ್ಯುತ್‌ ಸಂಪರ್ಕಕ್ಕೆ ವಿಳಂಬ ಮಾಡಬಾರದು ಎಂದು ತಿಳಿಸಲಾಗಿದೆ. ಸಣ್ಣ ನಿವೇಶನಗಳ ಮನೆಗಳಿಗೂ ಎನ್‌ಒಸಿ ಇಲ್ಲದೆ ವಿದ್ಯುತ್‌ ಸಂಪರ್ಕ ನೀಡಲು ಆದೇಶಿಸಲಾಗಿದೆ. ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಯಿತು.

government attention for 7 hours electricity to agriculture

ಕೃಷಿಗೆ 7 ಗಂಟೆ ವಿದ್ಯುತ್ ನೀಡಲು ಸೂಚನೆ

ವಿಕ ಸುದ್ದಿಲೋಕ ದಾವಣಗೆರೆ

ಜಿಲ್ಲೆಯಲ್ಲಿರೈತರ ಕೃಷಿ ಪಂಪ್ ಸೆಟ್ ಗಳಿಗೆ ಕೇವಲ 4ರಿಂದ 5 ಗಂಟೆ ವಿದ್ಯುತ್ ನೀಡುತ್ತಿದ್ದು, ಇದನ್ನು ಕೂಡಲೇ ಸರಿಪಡಿಸಿ ಕೃಷಿ ಪಂಪ್ ಸೆಟ್ ಗಳಿಗೆ ನಿರಂತರವಾಗಿ 7 ಗಂಟೆ ವಿದ್ಯುತ್ ಸರಬರಾಜು ಮಾಡಬೇಕು ಎಂದು ಜಿಲ್ಲಾಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಮನೂರು ಬಸವರಾಜಪ್ಪ ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಪಂ ಸಭಾಂಗಣದಲ್ಲಿಮಂಗಳವಾರ ನಡೆದ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರೈತರಿಗೆ ಸರತಿಯಂತೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಈ ವೇಳೆ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ 7 ಗಂಟೆ ನಿರಂತರ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಆದ್ಯತೆ ನೀಡಬೇಕು. ಎಲ್ಲಿಯೂ ಅಡಚಣೆ ಆಗಬಾರದು ಎಂದರು.

ಜಿಲ್ಲೆಯಲ್ಲಿಈವರೆಗೆ ಅನ್ನಭಾಗ್ಯ ಯೋಜನೆಯಡಿ 60,19,398 ಪಡಿತರ ಚೀಟಿಗಳ 2,17,70,105 ಫಲಾನುಭವಿಗಳಿಗೆ 34,63,34,790 ರೂ. ಮೊತ್ತ ಅನುಮೋದಿಸಲಾಗಿದೆ. 3,57,191 ಅಂತ್ಯೋದಯ ಪಡಿತರ ಚೀಟಿಗಳ, 1,73,8,979 ಸದಸ್ಯರಿಗೆ, 776737.53 ಕ್ವಿಂಟಲ್ ಆಹಾರ ಧಾನ್ಯ ಹಂಚಿಕೆ ಮಾಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಮಧುಸೂಧನ್ ಮಾಹಿತಿ ನೀಡಿದರು.

ಈ ವೇಳೇ ಗ್ಯಾರಂಟಿ ಸಮಿತಿ ಸದಸ್ಯರು ಮಾತನಾಡಿ, ‘ಹೊಸದಾಗಿ ವಿದ್ಯುತ್ ಸಂಪರ್ಕಕ್ಕೆ ಮನವಿ ಸಲ್ಲಿಸಿದರೆ ಬೆಸ್ಕಾಂ ಅಧಿಕಾರಿಗಳು ಸಂಪರ್ಕ ನೀಡಲು ವಿನಾಕರಣ ತಡ ಮಾಡುತ್ತಿದ್ದಾರೆ. ಸಾರ್ವಜನಿಕರಿಗೆ ತೊಂದರೆ ನೀಡಿದೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ತಿಳಿಸಿದರು.

ಸಮಿತಿ ಉಪಾಧ್ಯಕ್ಷರಾದ ಕುಕ್ಕವಾಡ ಮಂಜಣ್ಣ, ನಂಜಾ ನಾಯ್ಕ, ರಾಜೇಶ್ವರಿ, ಅನಿಸ್ ಪಾಷಾ, ಚಂದ್ರಶೇಖರ್ , ಸದಸ್ಯರಾದ ಡೋಲಿ ಚಂದ್ರು, ನಾಗರಾಜ್ , ಶ್ರೀನಿವಾಸ್ ಚನ್ನಗಿರಿ, ಬಾತಿ ಉಮೇಶ್ , ಶಿವಶಂಕರ್ ಕೈದಾಳೆ, ಜಗಳೂರು ಶಂಷಿರ್ ಅಹಮದ್ , ರಾಘವ ಗೌಡ, ಲಿಯಾಕತ್ ಅಲಿ, ಅಲಿ ರೆಹಮತ್ , ಶಿವರಾಂ ನಾಯ್ಕ, ನೀಲಗಿರಿಯಪ್ಪ ಇತರರಿದ್ದರು.

----

ಬಾಕ್ಸ್ ...

ವಿದ್ಯುತ್ ಸಂಪರ್ಕಕ್ಕೆ ಎನ್ ಒಸಿ ಬೇಕಿಲ್ಲ

ಜಗಳೂರು ತಾಲೂಕಿನಲ್ಲಿ30/40 ಮತ್ತು ಅದಕ್ಕಿಂತ ಕಡಿಮೆ ಅಳತೆಯ ನಿವೇಶನಗಳಲ್ಲಿನಿರ್ಮಿಸಿರುವ 156 ಮನೆಗಳಿಗೆ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ನೀಡುತ್ತಿಲ್ಲಎಂಬ ವಿಷಯವನ್ನು ಸಮಿತಿಯ ಸದಸ್ಯರು ಸಭೆ ಗಮನಕ್ಕೆ ತಂದರು. ಮಧ್ಯೆ ಪ್ರವೇಶಿಸಿದ ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್ , ‘‘30/40 ಹಾಗೂ ಅದಕ್ಕಿಂತ ಕಡಿಮೆ ಅಳತೆ ನಿವೇಶನದಲ್ಲಿನಿರ್ಮಿಸಿದ ಮನೆಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ನಿರಾಕ್ಷೇಪಣಾ ಪತ್ರದ (ಎನ್ ಒಸಿ) ಅಗತ್ಯವಿರುವುದಿಲ್ಲ. ಒಂದು ವೇಳೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅಧಿಕಾರಿಗಳು ವಿಳಂಬ ಮಾಡಿದರೆ, ತೊಂದರೆ ಕೊಟ್ಟರೆ ನೇರವಾಗಿ ಸಾರ್ವಜನಿಕರು ನನ್ನನ್ನು ಸಂಪರ್ಕಿಸಿ,’’ ಎಂದರು.

---

12 ಡಿವಿಜಿ ಗ್ಯಾರಂಟಿ

ದಾವಣಗೆರೆ ಜಿಪಂ ಸಭಾಂಗಣದಲ್ಲಿಮಂಗಳವಾರ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ ನಡೆಯಿತು.