ಬೆಳ್ತಂಗಡಿ: ಕೇರಳ ಭಾಷಿಗರ ಅನೇಕ ಕುಟುಂಬಗಳು ಬೆಳ್ತಂಗಡಿಯಲ್ಲಿವಾಸಿಸುತ್ತಿದ್ದು, ತವರು ರಾಜ್ಯದ ಭಾವನೆಯಲ್ಲಿರುವ ಕಲ್ಪನೆಯೊಂದಿಗೆ ಕಳೆದ ನಾಲ್ಕು ವರ್ಷಗಳ ಕಾಲ ವಿಷುಕಣಿ ಹಬ್ಬ ಅತ್ಯಂತ ಯಶಸ್ವಿಯಾಗಿ ತಾಲೂಕಿನಲ್ಲಿನಡೆಯುತ್ತಾ ಬಂದಿದೆ. ಕೇರಳದ ಸಾಂಪ್ರಾದಾಯಿಕ ಸಂಸ್ಕಾರ ಸಂಸ್ಕತಿಯನ್ನು ಪ್ರತಿಬಿಂಬಿಸುವ ಹಬ್ಬ ಇದಾಗಿದ್ದು, 5ನೇ ವರ್ಷದ ವಿಷುಕಣಿ ಆಚರಣೆ ಮೇ 17ರಂದು ಉಜಿರೆಯ ಕೃಷ್ಣಾನುಗ್ರಹ ಸಭಾಭವನದಲ್ಲಿನಡೆಯಲಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಮಂಗಳವಾರ ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿಪತ್ರಿಕಾಗೋಷ್ಠಿಯಲ್ಲಿಮಾತನಾಡಿದರು. ಕಳೆದ ಒಂದು ತಿಂಗಳಿನಿಂದ ಆಚರಣೆಯ ರೂಪುರೇಷೆæಗಳು ಸಿದ್ಧಗೊಂಡು ಪೂರ್ವ ತಯಾರಿ ನಡೆಸಲಾಗುತ್ತಿದೆ. ಬೆಳ್ತಂಗಡಿ, ಧರ್ಮಸ್ಥಳ, ಉಜಿರೆ , ಲಾಯಿಲ ಜಿ.ಪಂ. ವ್ಯಾಪ್ತಿಯಲ್ಲಿಅಧಿಕ ಕೇರಳ ಭಾಷಿಗರು ವಾಸವಿದ್ದಾರೆ ಎಂದರು.
ವಿಷು ಕಣಿ ಆಚರಣಾ ಸಮಿತಿಯ ಪದಾಧಿಕಾರಿಗಳಾದ ಅನಿಲ್ ಕುಮಾರ್ ಶಿಬಾಜೆ, ಪ್ರಸಾದ್ ಬಿ.ಎಸ್ ., ನೈಮಿಷಾ, ದಿವಿನೇಶ್ ಮತ್ತಿತರರು ಉಪಸ್ಥಿತರಿದ್ದರು.
ಕೋಟ್
ಕಾರ್ಯಕ್ರಮದಲ್ಲಿವಿಶೇಷವಾಗಿ ಕೇರಳ ಚೆಂಡೆ ಪ್ರದರ್ಶನ, ಪೂಕಳಂ, ಕೇರಳ ಹಾಗೂ ಅಂತಾರಾಜ್ಯ ಕಲಾವಿದರಿಂದ ಸಾಂಸ್ಕೃತಿಕ ವೈವಿಧ್ಯ, ಕೇರಳದ ಸಾಂಪ್ರದಾಯಿಕ ಶೈಲಿಯ 32 ಬಗೆಯ ಊಟೋಪಚಾರ ಇರಲಿದೆ. ಈ ಬಾರಿ ಐದನೇ ವರ್ಷದ ಆಚರಣೆ ನಡೆಯುತ್ತಿರುವುದರಿಂದ ಮೂರು ಸಾವಿರ ಜನ ಸೇರುವ ನಿರೀಕ್ಷೆ ಇದೆ
- ಹರೀಶ್ ಪೂಂಜ, ಶಾಸಕ
12ಎಂಜೆ ಎಚ್ ಪಿ ಪ್ರೆಸ್ ಮೀಟ್ .

