‘ಶಾಲೆ ಕಟ್ಟೋಣ’ ಸರಣಿ

Contributed byraviraj.galagali@timesgroup.com|Vijaya Karnataka

ಜೂನ್‌ನಲ್ಲಿ ಶಾಲೆಗಳು ಪುನರಾರಂಭಗೊಳ್ಳಲಿವೆ. ಆದರೆ ಮಳೆಗಾಲದಲ್ಲಿ ಮಕ್ಕಳ ಕಲಿಕೆಗೆ ತೊಂದರೆಯಾಗುವ ಸಾಧ್ಯತೆ ಇದೆ. ಹಲವು ಸರಕಾರಿ ಶಾಲೆಗಳ ಚಾವಣಿ ಸೋರುತ್ತಿದೆ. ದುರಸ್ತಿ ಕಾರ್ಯಕ್ಕೆ ಕ್ರಿಯಾಯೋಜನೆ ಸಿದ್ಧವಿದ್ದರೂ, ಅನುದಾನದ ಕೊರತೆಯಿಂದಾಗಿ ಕಾಮಗಾರಿ ವಿಳಂಬವಾಗುತ್ತಿದೆ. ಜಿಲ್ಲೆಯ 375 ಶಾಲೆಗಳ 1,217 ಕೊಠಡಿಗಳ ದುರಸ್ತಿಗೆ 14.96 ಕೋಟಿ ರೂ. ವೆಚ್ಚದ ಕ್ರಿಯಾಯೋಜನೆ ಇದೆ. ಇದರಲ್ಲಿ 87 ಶಾಲೆಗಳ ದುರಸ್ತಿ ನಡೆಯುತ್ತಿದೆ. ಇನ್ನೂ ಹಲವು ಶಾಲೆಗಳ ದುರಸ್ತಿ ಬಾಕಿ ಇದೆ. ಕಾಲೇಜುಗಳ ದುರಸ್ತಿಗೂ ಪ್ರಸ್ತಾವನೆ ಸಲ್ಲಿಸಲಾಗಿದೆ.

lets build schools series struggles for educational repair

ಬ್ಲರ್ಬ್

ಜೂನ್ ತಿಂಗಳಲ್ಲಿಹೊಸ ಶೈಕ್ಷಣಿಕ ವರ್ಷ ಆರಂಭವಾಗುವ ಮುನ್ನ ಸರಕಾರಿ ಶಾಲೆ-ಕಾಲೇಜ್ ಕಟ್ಟಡಗಳ ಸುಧಾರಣೆ ಹಾಗೂ ಮೂಲ ಸೌಲಭ್ಯ ಕಲ್ಪಿಸಲು ರಜೆ ಅವಧಿ ಒಂದು ಸುವರ್ಣಾವಕಾಶ. ಜಿಲ್ಲೆಯ ಸರಕಾರಿ ಶಾಲೆ-ಕಾಲೇಜ್ ಗಳ ಸ್ಥಿತಿಗತಿ ಕುರಿತು ಗಮನ ಸೆಳೆಯಲು ವಿಜಯ ಕರ್ನಾಟಕ ಬುಧವಾರದಿಂದ ‘ಶಾಲೆ ಕಟ್ಟೋಣ’ ಸರಣಿ ಆರಂಭಿಸಿದೆ. ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುತ್ತಿರುವ ಸರಕಾರಿ ಶಾಲೆ-ಕಾಲೇಜ್ ಕಟ್ಟಡಗಳ ಸುಧಾರಣೆಗೆ ಯಾವುದೇ ನೆಪ ಹೇಳದೆ ಸರಕಾರ ಮತ್ತು ಅಧಿಕಾರ ವರ್ಗ ಕೂಡಲೇ ಕ್ರಮ ಕೈಗೊಳ್ಳಲಿ ಎನ್ನುವುದು ಪತ್ರಿಕೆಯ ಕಳಕಳಿ.

ಢಣ..ಢಣ...ಘಂಟೆ ಬಾರಿಸುವ ಮುನ್ನ ಸುಸ್ಥಿತಿಯಲ್ಲಿರಲಿ ವಿದ್ಯಾ ಮಂದಿರಗಳು

ಸೋರುತಿಹುದು ಶಾಲೆಗಳ ಚಾವಣಿ

ರವಿರಾಜ್ ಆರ್ .ಗಲಗಲಿ ಬಾಗಲಕೋಟೆ

ಘ್ಕಿ್ಟavಜ್ಟಿa್ಜ.ಜa್ಝaಜa್ಝಜಿಃಠಿಜಿಞಛಿsಟ್ಛಜ್ಞಿdಜಿa.್ಚಟಞ

ಇನ್ನೇನು ಮಕ್ಕಳು ಬೇಸಿಗೆ ರಜೆ ಮುಗಿಸಿ ಶಾಲೆಗಳಿಗೆ ವಾಪಸ್ಸಾಗಲಿದ್ದಾರೆ. ಆದರೆ, ಮಕ್ಕಳ ಕಲಿಕೆಯ ಉತ್ಸಾಹಕ್ಕೆ ಮಳೆ ಅಡ್ಡಿಯಾಗಲಿದೆ !.

ಹೌದು, ಜೂನ್ ನಲ್ಲಿಸರಕಾರಿ ಶಾಲೆಗಳ ಬಾಗಿಲು ಮತ್ತೆ ತೆರೆಯಲಿದೆ. ಮಳೆಗಾಲದಲ್ಲಿಉತ್ಸಾಹದಿಂದ ಶಾಲೆಯತ್ತ ಹೆಜ್ಜೆ ಹಾಕುವ ಮಕ್ಕಳನ್ನು ಬರಮಾಡಿಕೊಳ್ಳಲು ವರುಣ ಹಾತೊರೆಯುತ್ತಿರುತ್ತಾನೆ. ಮಳೆಗೆ ಸೋರುವ ಕೋಣೆಗಳ ದುರಸ್ತಿಗೆ ಕ್ರಿಯಾಯೋಜನೆ ಸಿದ್ಧವಾಗಿ ಕಾಮಗಾರಿ ಆರಂಭಿಸಬೇಕು ಎನ್ನುವಷ್ಟರಲ್ಲಿಶಾಲೆಗಳಲ್ಲಿಆಟಪಾಠ ಜೋರಾಗಿ ನಡೆದಿರುತ್ತದೆ. ನೀರಡಿಸಿದಾಗ ಬಾವಿ ತೋಡುವ ಅಧಿಕಾರ ವರ್ಗದ ಧೋರಣೆಯಿಂದಾಗಿ ಮಕ್ಕಳ ಕಲಿಕೆಗೆ ಹಿನ್ನಡೆ ಉಂಟಾಗುತ್ತಿದೆ.

ಮುಗಿಯದ ಸಮಸ್ಯೆ

ಸರಕಾರಿ ಶಾಲೆಗಳಲ್ಲಿಚಾವಣಿ ದುಸ್ಥಿತಿ, ಸೋರುವ ಸಮಸ್ಯೆ ಇನ್ನೂ ಮುಗಿದಿಲ್ಲ. ಪ್ರತಿ ವರ್ಷ ಮಳೆ ಬಂದಾಗ ನೂರಾರು ಶಾಲೆಗಳಲ್ಲಿತಾರಸಿ ಸೋರುತ್ತದೆ. ಶಾಲಾ ಶಿಕ್ಷಣ ಇಲಾಖೆಯಿಂದ ಒಂದಿಷ್ಟು ಶಾಲೆಗಳ ದುರಸ್ತಿ ಮಾಡಿಸಲಾಗುತ್ತದೆ. ದುರಸ್ತಿ ಮಾಡಿಸಬೇಕಾದ ಶಾಲೆಗಳ ಸಂಖ್ಯೆ ಮತ್ತೆ ಹೆಚ್ಚಾಗುತ್ತದೆ. ಇದು ಪ್ರತಿ ವರ್ಷ ಮಕ್ಕಳನ್ನು ಕಾಡುವ ಸಮಸ್ಯೆ. ಜಿಲ್ಲೆಯ ಪ್ರಾಥಮಿಕ, ಪ್ರೌಢಶಾಲೆ ಸೇರಿದಂತೆ 375 ಶಾಲೆಗಳ 1, 217 ಕೊಠಡಿಗಳ ದುರಸ್ತಿಗೆ 14 ಕೋಟಿ 96 ಲಕ್ಷ ರೂ. ವೆಚ್ಚದ ಕ್ರಿಯಾಯೋಜನೆ ಕಳೆದ ವರ್ಷ ಸಿದ್ಧಪಡಿಸಲಾಗಿದೆ. ಈ ಪೈಕಿ 87 ಶಾಲೆಗಳ ಕೊಠಡಿಗಳ ದುರಸ್ತಿ ಕೈಗೊಳ್ಳಲಾಗುತ್ತಿದೆ. 2 ಕೋಟಿ 47 ಲಕ್ಷ ರೂ. ವೆಚ್ಚದಲ್ಲಿಕಾಮಗಾರಿ ನಡೆಯುತ್ತಿದೆ. ಇನ್ನುಳಿದ ಶಾಲೆಗಳ ಕೋಣೆಗಳ ದುರಸ್ತಿ ಇನ್ನೂ ಕೈಗೊಳ್ಳಬೇಕಿದೆ.

ನಾನಾ ಅನುದಾನ

ಶಾಲಾ ಕೋಣೆಗಳ ದುರಸ್ತಿಗೆ ನಾನಾ ಅನುದಾನ ಬಳಸಲಾಗುತ್ತದೆ. ಜಿಲ್ಲಾಪಂಚಾಯಿತಿ, ಗ್ರಾಮ ಪಂಚಾಯಿತಿ, ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಅನುದಾನ ಬಳಸಲಾಗುತ್ತದೆ. ಅನುದಾನ ಲಭ್ಯತೆ ಆಧಾರದಲ್ಲಿಆಯಾ ವರ್ಷ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಶಾಲೆಗಳ ನಿರ್ವಹಣೆಗಾಗಿ ಸರಕಾರ ಅನುದಾನ ನಿಗದಿಪಡಿಸದ ಕಾರಣ ಪ್ರತಿ ವರ್ಷವೂ ಅನುದಾನ ಹೊಂದಾಣಿಕೆಗಾಗಿ ಮೂಲ ಹುಡುಕಬೇಕಾಗುತ್ತಿದೆ. ನಾನಾ ಕಂಪನಿಗಳ ಸಿಎಸ್ ಆರ್ ನಿಧಿ ಬಳಸಿ ಕೋಣೆಗಳ ದುರಸ್ತಿ ಮಾಡುವ ಚಿಂತನೆ ಜಾರಿಯಾದರೆ ಸೋರುವ ಶಾಲೆಗಳ ಸಂಖ್ಯೆ ಕಡಿಮೆಯಾಗಲಿದೆ.

----

ಚಾವಣಿಯದ್ದೇ ಸಮಸ್ಯೆ

ಜಿಲ್ಲೆಯಲ್ಲಿಬಹುತೇಕ ಸರಕಾರಿ ಶಾಲೆಗಳು ಆರ್ ಸಿಸಿ ತಾರಸಿ ಹೊಂದಿವೆ. ಆದರೆ ಕಳಪೆ ಕಾಮಗಾರಿ, ನಿರ್ವಹಣೆ ಕೊರತೆಯಿಂದ ತಾರಸಿ ಸೋರುತ್ತವೆ. ಇಡೀ ಶಾಲೆಯ ಕೋಣೆಗಳೇ ಕುಸಿದುಬಿದ್ದ ಉದಾಹರಣೆಗಳೂ ಹೇರಳವಾಗಿವೆ. ಸರಕಾರದ ನಾನಾ ಏಜೆನ್ಸಿಗಳು ದುರಸ್ತಿ ಕೈಗೊಳ್ಳುತ್ತವೆ. ಸಣ್ಣ, ಪುಟ್ಟ ದುರಸ್ತಿ ಕಾಮಗಾರಿ ಸುಲಭವಾಗಿ ಮುಗಿಯುತ್ತದೆ. ಆದರೆ ತಾರಸಿ ಸೇರಿದಂತೆ ಕಟ್ಟಡದ ದುರಸ್ತಿಗೆ ಸಮಯಾವಕಾಶ ಬೇಕು. ಶಾಲೆಗಳು ಆರಂಭಗೊಳ್ಳುತ್ತಿದ್ದಂತೆ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಹಿಂದಿನ ವರ್ಷ ಸೋರುತ್ತಿದ್ದ ಶಾಲೆಯ ಕೋಣೆ ಮರು ವರ್ಷವೂ ನೀರು ಜಿನುಗುತ್ತದೆ. ತಾರಸಿ ಸೋರುವ ಸಮಸ್ಯೆ ಕಂಡ ತಕ್ಷಣ ರಿಪೇರಿ ಮಾಡದಿದ್ದರೆ ಕಟ್ಟಡ ಕುಸಿದುಬೀಳುವ ಸ್ಥಿತಿ ಎದುರಾಗುತ್ತದೆ. ನಾಲ್ಕು ವರ್ಷಗಳ ಹಿಂದೆ ಶಾಲೆಗಳು ಸೋರುತ್ತಿವೆ ಎನ್ನುವ ಕಾರಣಕ್ಕೆ ಒಂದು ವಾರ ರಜೆ ನೀಡಲಾಗಿತ್ತು. ಇದು ಶಾಲೆಗಳ ನಿರ್ವಹಣೆಯ ವಾಸ್ತವ.

----

ಕಾಲೇಜ್ ಗೂ ದುರಸ್ತಿ

ಜಿಲ್ಲೆಯ ಸರಕಾರಿ ಪಿಯು ಕಾಲೇಜ್ ಕಟ್ಟಡಗಳ ದುರಸ್ತಿಯೂ ಕೈಗೊಳ್ಳಬೇಕು. ಹುನಗುಂದ ತಾಲೂಕಿನ ಧನ್ನೂರ ಗ್ರಾಮದಲ್ಲಿ4 ಕೋಣೆ, ಬಾದಾಮಿ ತಾಲೂಕಿನ ಚೊಳಚಗುಡ್ಡದ ಕಾಲೇಜ್ ನ 6 ಕೋಣೆಗಳು ದುರಸ್ತಿ ಹಂತದಲ್ಲಿವೆ. ಈ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ ಎಂದು ಪಿಯು ಇಲಾಖೆ ಉಪನಿರ್ದೇಶಕ ಪುಂಡಲೀಕ ಕಾಂಬಳೆ ತಿಳಿಸಿದ್ದಾರೆ.

----

ಪ್ರತಿ ವರ್ಷ ಶಾಲೆಗಳ ಕೊಠಡಿಗಳ ದುರಸ್ತಿಗಾಗಿ ಇಲಾಖೆಗೆ ಕ್ರಿಯಾಯೋಜನೆ ಸಲ್ಲಿಸಲಾಗುತ್ತದೆ. ಶೈಕ್ಷಣಿಕ ವರ್ಷ ಶುರುವಾಗುವ ಮುನ್ನ ಸಾಧ್ಯವಾದಷ್ಟು ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತದೆ. ಅನುದಾನ ಲಭ್ಯತೆ ಆಧಾರದಲ್ಲಿಕಾಮಗಾರಿ ಕೈಗೊಳ್ಳಲಾಗುತ್ತದೆ.

-ಅಜಿತ್ ಮನ್ನಿಕೇರಿ, ಉಪನಿರ್ದೇಶಕ, ಶಾಲಾ ಶಿಕ್ಷಣ, ಸಾಕ್ಷರತೆ ಇಲಾಖೆ

----

ಬುದ್ನಿ ಸ್ಕೂಲ್ -ಬಿಜಿಕೆ-12

ಮುಧೋಳ ತಾಲೂಕಿನ ಪಿ.ಎಂ.ಬುದ್ನಿ ಸರಕಾರಿ ಶಾಲೆಯ ಶಿಥಿಲಗೊಂಡಿರುವ ಚಾವಣಿ.