ಗಾಳಿಗೆ ಹಾರಿದ ಶಾಲೆ ಚಾವಣಿ ಶೀಟ್

Contributed byhudemkrishnamurthy@gmail.com|Vijaya Karnataka

ಕೂಡ್ಲಿಗಿ ತಾಲೂಕಿನ ಯಂಬಳಿ ವಡ್ಡರಹಟ್ಟಿಯಲ್ಲಿ ಬಿರುಗಾಳಿಗೆ ಸರಕಾರಿ ಶಾಲೆಯ ಚಾವಣಿ ಶೀಟ್‌ಗಳು ಹಾರಿಹೋಗಿವೆ. ರೈತ ಚನ್ನಬಸಪ್ಪ ಅವರ ಕೋಳಿ ಫಾರಂ ಶೆಡ್‌ ಕೂಡ ನೆಲಕ್ಕುರುಳಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗ್ರಾಮದಲ್ಲಿ ಅಪಾರ ಹಾನಿ ಉಂಟಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

roof sheets of school blown away in the wind causing substantial damage

ಕೂಡ್ಲಿಗಿ ತಾಲೂಕಿನ ಯಂಬಳಿ ವಡ್ಡರಹಟ್ಟಿಯಲ್ಲಿಅಪಾರ ಹಾನಿ, ತಪ್ಪಿದ ದುರಂತ

ಗಾಳಿಗೆ ಹಾರಿದ ಶಾಲೆ ಚಾವಣಿ ಶೀಟ್

ವಿಕ ಸುದ್ದಿಲೋಕ ಕೂಡ್ಲಿಗಿ

ತಾಲೂಕಿನ ಕಾನಹೊಸಹಳ್ಳಿ ಭಾಗದಲ್ಲಿಮಂಗಳವಾರ ಸಂಜೆ ಬೀಸಿದ ಬಿರುಗಾಳಿ ಗೆ ಯಂಬಳಿ ವಡ್ಡರಹಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಚಾವಣಿ ಶೀಟ್ ಗಳು ಹಾರಿ ಹೋಗಿದ್ದರೆ, ಅದೇ ಗ್ರಾಮದ ರೈತ ಚನ್ನಬಸಪ್ಪ ಎಂಬುವವರಿಗೆ ಸೇರಿದ ಕೋಳಿ ಫಾರಂ ಶೆಡ್ ಸಂಪೂರ್ಣ ನೆಲಕ್ಕುರುಳಿದೆ. ಬಿರುಗಾಳಿ ಸಹಿತ ತಾಲೂಕಿನ ಅಲ್ಲಲ್ಲಿಮಳೆಯಾಗಿದ್ದು, ಯಂಬಳಿ ವಡ್ಡರಹಟ್ಟಿ ಗ್ರಾಮದಲ್ಲಿಅಪಾರ ಹಾನಿಯಾಗಿದೆ.

ಸರಕಾರಿ ಶಾಲೆಯ ಆರ್ ಸಿಸಿ ಕಟ್ಟಡದ ಚಾವಣಿ ಮಳೆಗೆ ಸೋರದಂತೆ ತಗಡಿನ ಶೀಟ್ ಗಳ ಟ್ರಸ್ ರೂಫಿಂಗ್ ಹಾಕಲಾಗಿತ್ತು. ಬೀಸಿದ ಬಿರುಗಾಳಿಯಿಂದ ಎರಡು ಕೊಠಡಿಗಳಿಗೆ ಹಾಕಿದ್ದ ತಗಡಿನ ಶೀಟ್ ಗಳೆಲ್ಲವೂ ಹಾರಿ ಬಿದ್ದಿದ್ದು, ಆ ಸಂದರ್ಭದಲ್ಲಿಯಾರೂ ಇರಲಿಲ್ಲವಾದ್ದರಿಂದ ಯಾವುದೇ ತೊಂದರೆಯಾಗಿಲ್ಲ. ಈಗ ಶಾಲೆಗೆ ರಜೆ ಇರುವುದರಿಂದ ಕೆಲ ವಿದ್ಯಾರ್ಥಿಗಳು, ಯುವಕರು ಶಾಲೆಯ ಬಳಿ ಆಗಾಗ ಆಟವಾಡುತ್ತಿದ್ದರು. ಆದರೆ, ಗಾಳಿಗೆ ಶೀಟ್ ಹಾರಿ ಬಿದ್ದಿರುವ ಸಂದರ್ಭದಲ್ಲಿಯಾರೂ ಇರಲಿಲ್ಲಎಂಬುದು ಸಮಾಧಾನ ತಂದಿದೆ ಎನ್ನುತ್ತಾರೆ ಯಂಬಳಿ ವಡ್ಡರಹಟ್ಟಿಯ ನಿವಾಸಿ ದಿನೇಶ್ ಅವರು. ಇನ್ನು, ರೈತ ಚನ್ನಬಸಪ್ಪ ಅವರಿಗೆ ಸೇರಿದ ಯಂಬಳಿ ವಡ್ಡರಹಟ್ಟಿ ಮತ್ತು ಸುಲ್ತಾನ್ ಪುರ ಮಧ್ಯೆ ಇರುವ ಕೋಳಿ ಸಾಕಣೆ ಶೆಡ್ ಸಂಪೂರ್ಣ ನೆಲಕ್ಕುರುಳಿ ಅಪಾರ ನಷ್ಟ ಸಂಭವಿಸಿದೆ. ಇದಲ್ಲದೆ, ಅದೇ ಗ್ರಾಮದ ಮಾರಪ್ಪ, ಗಂಗಪ್ಪ ಎಂಬುವವರ ಮನೆ ಮುಂಭಾಗದ ಶೀಟ್ ಗಳು ಹಾರಿ ಹೋಗಿವೆ. ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಧರ್ಮೇಂದ್ರ ನಾಯ್ಕ ಸೇರಿ ಗ್ರಾಪಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

ಫೋಟೋ

12 ಕೂಡ್ಲಿಗಿ 03: ಕೂಡ್ಲಿಗಿ ತಾಲೂಕಿನ ಯಂಬಳಿ ವಡ್ಡರಹಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಚಾವಣಿ ಶೀಟ್ ಗಳು ಬಿರುಗಾಳಿಗೆ ಬಿದ್ದಿರುವುದು.

12 ಕೂಡ್ಲಿಗಿ 03ಎ: ಕೂಡ್ಲಿಗಿ ತಾಲೂಕಿನ ಯಂಬಳಿ ವಡ್ಡರಹಟ್ಟಿ ಗ್ರಾಮದ ರೈತ ಚನ್ನಬಸಪ್ಪ ಅವರಿಗೆ ಸೇರಿ ಕೋಳಿಫಾರಂ ಶೆಡ್ ಬಿರುಗಾಳಿಗೆ ಬಿದ್ದಿರುವುದು.