(ಲೀಡ್ ) ಬೇಸಿಗೆಯಲ್ಲಿಹಸಿ ಮೇವಿನದ್ದೇ ಸಮಸ್ಯೆ

Contributed bychandregowda.n@timesofindia.com|Vijaya Karnataka

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೇಸಿಗೆಯ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಹಸಿ ಮೇವಿನ ಸಮಸ್ಯೆ ತೀವ್ರಗೊಳ್ಳುತ್ತಿದೆ. ಮಳೆಯ ಕೊರತೆಯಿಂದಾಗಿ ಮೇವಿನ ಸಂಗ್ರಹ ಕಡಿಮೆಯಾಗಿದೆ. ಜಾನುವಾರುಗಳಿಗೆ ಅಗತ್ಯವಿರುವ ಮೇವು ಲಭ್ಯತೆ ಸದ್ಯಕ್ಕೆ ಸಾಕಾಗಿದ್ದರೂ, ಮುಂಗಾರು ಮಳೆ ವಿಳಂಬವಾದರೆ ಪರಿಸ್ಥಿತಿ ಚಿಂತಾಜನಕವಾಗಲಿದೆ. ಮೇವಿನ ಬೀಜದ ಕಿಟ್‌ಗಳನ್ನು ವಿತರಿಸುವಲ್ಲಿ ವಿಳಂಬವಾಗುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

summer green fodder need for solutions to problems

ಜಿಲ್ಲೆಯಲ್ಲಿದಿನೇ ದಿನೆ ಹೆಚ್ಚಾಗುತ್ತಲೇ ಇದೆ ಬಿಸಿಲಾಘಾತ | ಖರೀದಿಸಲು ಸಿಗುತ್ತಿಲ್ಲಹಸಿ ಮೇವು

ಕಣಿತಹಳ್ಳಿ ಎನ್ .ಚಂದ್ರೇಗೌಡ ಚಿಕ್ಕಬಳ್ಳಾಪುರ

್ಚha್ಞd್ಟಛಿಜಟಡಿda.್ಞಃಠಿಜಿಞಛಿsಟ್ಛಜ್ಞಿdಜಿa.್ಚಟಞ

ಜಿಲ್ಲಾದ್ಯಂತ ಬೇಸಿಗೆ ಮಳೆ ಹೇಳಿಕೊಳ್ಳುವಂತಾಗಿಲ್ಲ. ಬಿಸಿಲಾರ್ಭಟ ದಿನೇ ದಿನೆ ಹೆಚ್ಚುತ್ತಲೇ ಇದೆ. ಹಿಂದಿನ ವರ್ಷಗಳಲ್ಲೂಸರಿಯಾದ ಮಳೆಯಾಗದ ಕಾರಣ ಹೆಚ್ಚಿನ ಮೇವು ಸಂಗ್ರಹವಾಗಿಲ್ಲ. ಇದರ ಬೆನ್ನಲ್ಲೇ ಜಿಲ್ಲೆಯಲ್ಲಿಮೇವಿನ ಸಮಸ್ಯೆ ಎದುರಾಗುವ ಆತಂಕವಿದೆ. ಒಣ ಮೇವಿಗಿಂತಲೂ ಹಸಿಮೇವಿನದ್ದೇ ಈಗ ಸಮಸ್ಯೆ.

ಜಿಲ್ಲೆಯಲ್ಲಿಒಟ್ಟು 10,41,797 ರಾಸುಗಳಿದ್ದು ಜಿಲ್ಲೆಯಲ್ಲಿರುವ ಜಾನುವಾರುಗಳಿಗೆ ಸದ್ಯಕ್ಕೆ 50 ಮೆಟ್ರಿಕ್ ಟನ್ ಮೇವು ಲಭ್ಯವಿದೆ. ಮುಂದಿನ 40 ವಾರಗಳವರೆಗೂ ಸಾಕಾಗಲಿದೆ. ಸದ್ಯಕ್ಕೆ ಇನ್ನು ಕೆಲವೇ ದಿನಗಳಲ್ಲಿಮುಂಗಾರು ಪ್ರವೇಶ ಎಂದು ಹೇಳಲಾಗುತ್ತಿದ್ದ ಮಳೆ ಬಂದರೆ ಪರವಾಗಿಲ್ಲ. ಆದರೆ ಈಗಿನ ಪರಿಸ್ಥಿತಿಯಲ್ಲಿಜಿಲ್ಲೆಯಲ್ಲಿಮೇವಿನ ವಿಚಾರದಲ್ಲಿಸಮಾಧಾನಕರವಂತೂ ಇಲ್ಲ.

ಮೇವಿನ ಕಿಟ್ ಯಾವಾಗ?: ಮುಂದೆ ಎದುರಾಗಲಿರುವ ಮೇವಿನ ಕೊರತೆ ನಿವಾರಣೆಗಾಗಿ ನೀರಾವರಿ ಹೊಂದಿರುವ ರೈತರಿಗೆ ಮೇವಿನ ಬೀಜದ ಕಿಟ್ ಗಳನ್ನು ಕೊಟ್ಟು ಅವರಿಂದ ಮೇವು ಉತ್ಪಾದನೆಗೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಆದರೆ ಇಷ್ಟೊತ್ತಿಗಾಗಲೇ ಮೇವಿನ ಕಿಟ್ ಗಳನ್ನು ವಿತರಿಸಬೇಕಿತ್ತು. ಹಸಿರು ಮೇವು ಈಗಾಗಲೇ ಲಭ್ಯವಾಗಬೇಕಿತ್ತು ಎಂಬುದು ರೈತರ ಆಗ್ರಹವಾಗಿದೆ.

ಕೈಕೊಡುತ್ತಿದೆ ಮಳೆ: ಕಳೆದ 2-3 ವರ್ಷಗಳಿಂದ ಮುಂಗಾರು ಮಳೆಗಳು ಕೈಕೊಡುತ್ತಲೇ ಇವೆ. ಈ ಬಾರಿ ಮಳೆಯೂ ನಿರೀಕ್ಷಿತ ಪ್ರಮಾಣದಲ್ಲಿಬರಲ್ಲಎನ್ನುವ ಮುನ್ಸೂಚನೆಯೂ ಇದೆ. ಹೀಗಾಗಿ ಹಸಿ ಮೇವಿನ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಲೇಬೇಕಿದೆ. ಇಷ್ಟೊತ್ತಿಗಾಗಲೇ ಮೇವಿನ ಕಿಟ್ ಗಳನ್ನು ವಿತರಿಸಿ ಮೇವು ಬಂದಿದ್ದರೆ ಬೇಸಿಗೆಯ ಹಸಿರು ಮೇವಿನ ಬರ ನೀಗುತ್ತಿತ್ತು. ಆದರೆ ಇನ್ನು ಮೇವಿನ ಕಿಟ್ ತರಿಸುವ ಪ್ರಯತ್ನವೇ ನಡೆದಿದೆ.

ಹಸಿ ಮೇವಿಗೆ ಬೇಡಿಕೆ : ಜಿಲ್ಲೆಯಲ್ಲಿಇತ್ತೀಚಿನ ವರ್ಷಗಳಲ್ಲಿಮುಂಗಾರಿಗಿಂತ ಹಿಂಗಾರು ಮಳೆಗಳು ಹೆಚ್ಚಾಗಿ ಬೀಳುತ್ತಿವೆ. ಕಳೆದ ಬಾರಿಯೂ ಹಿಂಗಾರು ಮಳೆಯನ್ನೇ ಜನರು ನಂಬಿಕೊಂಡಿದ್ದರು. ಆದರೆ ಹಿಂಗಾರು ಕೂಡಾ ನಿರೀಕ್ಷೆಯಂತೆ ಆಗಿರಲಿಲ್ಲ. ಹೀಗಾಗಿ ಧಾನ್ಯಗಳು ಇರಲಿ, ಕನಿಷ್ಠ ಪಕ್ಷ ಮೇವಾದರೂ ನಿರೀಕ್ಷಿತ ಪ್ರಮಾಣದಲ್ಲಿಸಿಕ್ಕಿಲ್ಲ. ಹೀಗಾಗಿ ಒಣ ಮೇವಿನ ಜತೆ ಹಸಿ ಮೇವಿನ ಸಮಸ್ಯೆಯೂ ಕಾಡುತ್ತಿದೆ. ಖರೀದಿಸಲು ಕೂಡಾ ಹಸಿ ಮೇವು ಸಿಗುತ್ತಿಲ್ಲ, ಸಿಕ್ಕರೂ ಬೆಲೆ ದುಬಾರಿಯಾಗಿದ್ದು, ಹೈನುಗಾರಿಕೆಯೇ ಕಷ್ಟ ಎನ್ನುವಂತಾಗಿದೆ.

ಮಳೆ ವಿಳಂಬವಾದರೆ ಕಷ್ಟ: ಸದ್ಯಕ್ಕೆ ಜಿಲ್ಲೆಯಲ್ಲಿಮುಂದೆ ಎದುರಾಗಲಿರುವ ಮೇವಿನ ಸಮಸ್ಯೆ ನಿವಾರಣೆಗೆ 12 ಸಾವಿರ ಮೇವಿನ ಬೀಜಗಳ ಕಿಟ್ ಗೆ ಬೇಡಿಕೆ ಸಲ್ಲಿಸಲಾಗಿದೆ. ಒಂದು ವೇಳೆ ಏನಾದರೂ ಮುಂಗಾರು ವಿಳಂಬವಾದರೆ ಮೇವಿಗೆ ಸಮಸ್ಯೆ ಎದುರಾಗಲಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಇನ್ನಷ್ಟು ಮೇವಿನ ಕಿಟ್ ಗಳನ್ನು ಕೊಟ್ಟು ಹಸಿರು ಮೇವು ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಿದರೆ ಮೇವಿನ ಸಮಸ್ಯೆ ನಿವಾರಣೆಗೆ ಅನುಕೂಲವಾಗಲಿದೆ.

ತುರ್ತು ಕ್ರಮ: ಜಿಲ್ಲಾದ್ಯಂತ ಈಗಾಗಲೇ ಕುಡಿಯುವ ನೀರು, ಕೃಷಿ ಚಟುವಟಿಕೆ ಸೇರಿದಂತೆ ಮೇವಿನ ಸಮಸ್ಯೆ ನಿವಾರಣೆ ಸಂಬಂಧ ಜಿಲ್ಲೆಯ 8 ತಾಲೂಕಿನ 26 ಹೋಬಳಿಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಪ್ರತಿ ವಾರ ಸಭೆಗಳನ್ನು ನಡೆಸಿ ಯಾವುದೇ ಸಮಸ್ಯೆಯಾಗದಂತೆ ನಿಗಾವಹಿಸಲು ಸೂಚನೆ ನೀಡಲಾಗಿದೆ. ಬಿಸಿಲಾಘಾತದ ನಡುವೆ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಯತ್ನಿಸಲಾಗುತ್ತಿದೆ.

ಸಾಕಷ್ಟು ಮಂದಿ ಹೈನುಗಾರರು ತಮ್ಮ ಪಶುಗಳಿಗೆ ಅಗತ್ಯವಾದ ಹಸಿರು ಹುಲ್ಲನ್ನು ಬೆಳೆದೇ ಸಾಕಣೆ ಮಾಡುತ್ತಿದ್ದಾರೆ. ಹಿಂದಿನ ವರ್ಷಗಳಲ್ಲಿಇದ್ದಂತೆ ಕೇವಲ ಒಣ ಹುಲ್ಲನ್ನು ಬಳಸಿ ಹೈನುಗಾರಿಕೆ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಮೇವಿನ ಸಮಸ್ಯೆ ಅಷ್ಟಾಗಿ ಕಾಡದು ಎಂಬ ಆಶಾಭಾವವಿದೆ. ಆದರೆ ಮುಂಗಾರು ಮಳೆ ಏನಾದರೂ ಬಾರದೇ ಹೋದರೆ ಮೇವಿನ ಜತೆಗೆ ನೀರಿನ ಸಮಸ್ಯೆಯೂ ಕಾಡಲಿದೆ.

ಕೋಟ್

ಜಿಲ್ಲೆಯಲ್ಲಿಇದುವರೆಗೂ ಎಲ್ಲೂಮೇವಿನ ಸಮಸ್ಯೆ ಎದುರಾಗಿಲ್ಲ. ಸದ್ಯ ಈಗಿರುವ ಮೇವಿನ ಲಭ್ಯತೆಯನ್ನು ಆಧರಿಸಿ ಇನ್ನು 40 ವಾರಗಳ ಕಾಲ ಮೇವಿಗೆ ಯಾವುದೇ ಸಮಸ್ಯೆಯಾಗದು. 12 ಸಾವಿರ ಮೇವಿನ ಕಿಟ್ ಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಬೋರ್ ವೆಲ್ ಹೊಂದಿರುವ ರೈತರಿಗೆ ಮೇವಿನ ಬೀಜದ ಕಿಟ್ ಗಳನ್ನು ಕೊಟ್ಟು ಹಸಿರು ಮೇವು ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗುವುದು.

-ಡಾ.ರಂಗಪ್ಪ, ಉಪ ನಿರ್ದೇಶಕರು, ಪಶು ಸಂಗೋಪನಾ ಇಲಾಖೆ

ಕೋಟ್

ಹಸಿ ಮೇವು ಇಲ್ಲ, ಒಣ ಮೇವು ಸಾಕಷ್ಟಿಲ್ಲ, ಮಳೆ ಕೂಡಾ ಬಂದಿಲ್ಲ. ಕೇವಲ ಒಣ ಮೇವು ಹಾಕಿ ಜಾನುವಾರುಗಳನ್ನು ಮೇಯಿಸಲು ಸಾಧ್ಯವಿಲ್ಲ. ಆದಷ್ಟು ಬೇಗ ಮಳೆ ಬಾರದಿದ್ದರೆ ಮುಂದಿನ ದಿನಗಳಲ್ಲಿದನಕರುಗಳಿಗೆ ಮೇವು ಹೊಂದಿಸುವುದು ಕಷ್ಟವಾಗಲಿದೆ.

-ವೆಂಕಟೇಶ್ , ಹಸು ಸಾಕಣೆದಾರರು

ಕೋಟ್ :

ಮೇವಿನ ಬೀಜದ ಕಿಟ್ ಗಳನ್ನು ಈಗಾಗಲೇ ವಿತರಿಸಬೇಕಿತ್ತು. ಇಷ್ಟೊತ್ತಿಗಾಗಲೇ ತೋಟಗಳಲ್ಲಿಹಸಿರು ಮೇವು ಬಂದಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ, ಆದರೆ ಇನ್ನೂ ಮೇವಿನ ಬೀಜ ಕಿಟ್ ವಿತರಿಸುವ ಕೆಲಸ ಆಗಿಲ್ಲ. ಮೇವಿನ ಬೀಜ ವಿತರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು.

-ಲೋಕೇಶ್ ಗೌಡ, ತಾಲೂಕು ಅಧ್ಯಕ್ಷ, ರೈತ ಸಂಘ

12ಸಿಬಿಪಿಫೋಟೋ01

ಹಸಿರು ಮೇವಿಗೆ ಭಾರಿ ಬೇಡಿಕೆ

12ಸಿಬಿಪಿಫೋಟೋ02

ಒಣ ಮೇವಿನ ಸಾಂದರ್ಭಿಕ ಚಿತ್ರ.