1955ರಲ್ಲಿಯಾವಾಗ ಎಲೆನ್ ನಿವೆಲ್ , ಹಬರ್ಟ್ ಸೈಮನ್ ಹಾಗೂ ಕ್ಲಿಫೋರ್ಡ್ ಶೊವ್ ತಾವು ಕೆಲಸ ಮಾಡುತ್ತಿದ್ದ ಕೇಂಬ್ರಿಜ್ ವಿಶ್ವವಿದ್ಯಾಲಯದ ಹಾಗೂ ರಾರ ಯಂಡ್ ಕಾರ್ಪೋರೇಷನ್ ಜಂಟಿ ಪ್ರಯೋಗಾಲಯದಲ್ಲಿಲಾಜಿಕ್ ಥಿಯರಿಸ್ವ್ ಎನ್ನುವ ಪ್ರೊಗ್ರಾಂ ಬರೆದರೋ ಅಂದೇ ಎಐ ಎನ್ನುವ ಮಾನವ ನಿರ್ಮಿತ ವಿಸ್ಮಯದ ಜನನವಾಯಿತು. ಅದರಲ್ಲಿಒಂದರಿಂದ ಎರಡು ಸಾವಿರಗಳಷ್ಟು ಸಾಲುಗಳಿವೆ ಎಂಬ ಅಂದಾಜಿದೆ, ಅಚ್ಚರಿಯ ವಿಷಯವೆಂದರೆ ಸಂಪೂರ್ಣವಾದ ಪ್ರೋಗ್ರಾಂ ಇನ್ನೂ ಸಿಕ್ಕಿಲ್ಲ. ಅದೇ ಮೊದಲ ಬಾರಿಗೆ ಮನುಷ್ಯನು ತನ್ನ ವಿಚಾರವನ್ನು ಮೆಷಿನ್ನುಗಳಿಗೆ ಕಲಿಸಬಲ್ಲೆಎಂಬುದನ್ನು ಕಂಡುಕೊಂಡ! ಇದನ್ನು ‘ಲಾಜಿಕ್ ಥಿಯರಿ ಮಷಿನ್ ’ ಎಂದೂ ಕರೆಯುವುದುಂಟು. ಮೂವರದ್ದು ಮನೋವಿಜ್ಞಾನ, ಗಣಕಶಾಸ್ತ್ರ , ಹಾಗೂ ಕಂಪ್ಯೂಟರ್ ತಂತ್ರಜ್ಞಾನದ ತ್ರಿವೇಣಿ ಸಂಗಮ. ಇವರಲ್ಲಿಹಬರ್ ್ರ್ಟ ಸೈಮನ್ ಅವರಿಗೆ 1978ರಲ್ಲಿನೊಬೆಲ್ ಪ್ರಶಸ್ತಿ ಸಿಕ್ಕಿತ್ತು. ಅದೇ ವರ್ಷ ಎಐ ಪಿತಾಮಹ ಜೆಫ್ರಿ ಹಿಂಟನ್ ಅವರು ನ್ಯೂರಲ್ ನೆಟ್ ವರ್ಕ್ ಕ್ಷೇತ್ರಕ್ಕೆ ಜನ್ಮನೀಡಿದ್ದು! ಲಾಜಿಕ್ ಥಿಯರಿ ಮೆಷಿನ್ ಅವಿಷ್ಕಾರದ ಹಿಂದೆ ಇದ್ದ ಒಂದೇ ಒಂದು ಪ್ರೇರಣೆ ಅಂದರೆ, ಮನುಷ್ಯನಂತೆ ಮೆಷಿನ್ ವಿಚಾರವನ್ನು ಮಾಡಲು ಸಾಧ್ಯವೇ? ಎನ್ನುವ ಪ್ರಶ್ನೆ. ಆ ಪ್ರಶ್ನೆಗೆ ಇನ್ನೂ ಉತ್ತರವು ಸಿಕ್ಕಿಲ್ಲ, ಆ ವಿಷಯವೇ ಬೇರೆ! ್ಞ ವಿಕ್ರಂ ಜೋಶಿ ಎಐ ವಿಶ್ಲೇಷಕರು

