ಮ್ಯಾಂಗೋ ರಬ್ಡಿ
ಉತ್ತರ ಭಾರತದ ಸುಪ್ರಸಿದ್ಧ ಬೇಸಿಗೆ ಖಾದ್ಯಗಳಲ್ಲಿಮ್ಯಾಂಗೋ ರಬ್ಡಿ ಒಂದು. ವಿಶೇಷವಾಗಿ ಮಾವಿನ ಋುತುವಿನಲ್ಲಿಸಾಂಪ್ರದಾಯಿಕವಾಗಿ ಘನೀಕರಿಸಿದ ಹಾಲಿನಕೆನೆ, ಮಾವಿನ ತಿರುಳಿನಿಂದ ತಯಾರಾಗುವ ಈ ಸಿಹಿ ಪೇಯ, ಮಾವು ಪ್ರಿಯರನ್ನು ಸುಲಭವಾಗಿ ಆಕರ್ಷಿಸುತ್ತದೆ.
ಸಾಮಗ್ರಿ : ಗಟ್ಟಿ ಹಾಲು(ಹೈ ಫ್ಯಾಟ್ ಮಿಲ್ ್ಕ) 1/2 ಲೀಟರ್ , ಮಾವಿನಹಣ್ಣು 1, ಸಕ್ಕರೆ 1/4 ಕಪ್ , ಬಾದಾಮಿ 2.
ವಿಧಾನ: ದಪ್ಪತಳದ ಪಾತ್ರೆಯಲ್ಲಿಹಾಲನ್ನು ಕಾಯಲು ಇಡಿ. ಹಾಲು ಉಕ್ಕುವಾಗ ಉರಿ ಸಣ್ಣಗೆ ಮಾಡಿ ಕೈಯಾಡುತ್ತಿರಿ. ಹಾಲು ಇಂಗಿ ಅರ್ಧ ಪ್ರಮಾಣಕ್ಕೆ ಬಂದಾಗ ಸಕ್ಕರೆ ಸೇರಿಸಿ ಐದು ನಿಮಿಷ ಕುದಿಸಿ, ಉರಿಯಾರಿಸಿ, ಕೆನೆಗಟ್ಟಿದ ಹಾಲನ್ನು ತಣಿಸಿ, ರಬ್ಡಿ ಅಣಿಮಾಡಿಕೊಳ್ಳಿ. ಮಾವಿನಹಣ್ಣನ್ನು ಚೆನ್ನಾಗಿ ತೊಳೆದು, ತಿರುಳನ್ನು ಸಿಪ್ಪೆ ಓಟೆಯಿಂದ ಬೇರ್ಪಡಿಸಿ, ಕಾಲು ಭಾಗದ ಹೋಳನ್ನು ಸಣ್ಣದಾಗಿ ಹೆಚ್ಚಿ ತಗೆದಿಟ್ಟುಕೊಳ್ಳಿ. ಉಳಿದ ತಿರುಳನ್ನು ಮಿಕ್ಸಿಯಲ್ಲಿ ಒಂದು ಸುತ್ತು ಅರೆದು, ರಬ್ಡಿಯೊಂದಿಗೆ ಮಿಶ್ರ ಮಾಡಿ, ಸರ್ವಿಂಗ್ ಬೌಲ್ ಗೆ ಸುರುವಿ, ಹೆಚ್ಚಿಟ್ಟ ಮಾವಿನ ತುಂಡುಗಳನ್ನು ಹಾಕಿ, ತುರಿದ ಬಾದಾಮಿ ಉದುರಿಸಿ ಅಲಂಕರಿಸಿದರೆ ರುಚಿಕರ ಮ್ಯಾಂಗೋ ರಬ್ಡಿ ರೆಡಿ.

