ಬೆಂಗಳೂರು: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು ಏಳು ಜನರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಜಗದೀಶ್ ಸರಕಾರಕ್ಕೆ ತನಿಖಾ ವರದಿ ಸಲ್ಲಿಸಿದ್ದಾರೆ.
ಅನಾಹುತಕ್ಕೆ ಆಸ್ಪತ್ರೆ ಆಡಳಿತ ಮಂಡಳಿ, ಆರೋಗ್ಯ ಇಲಾಖೆ ಇಂಜಿನಿಯರ್ ಮತ್ತು ಗುತ್ತಿಗೆದಾರರ ಬೇಜವಾಬ್ದಾರಿ, ನಿರ್ಲಕ್ಷ್ಯವೇ ಕಾರಣ ಎಂದು ವರದಿಯಲ್ಲಿಹೇಳಲಾಗಿದೆ.
ಕ್ರಿಕೆಟ್ ಆಡುವುದಕ್ಕೆ ಅನುಕೂಲವಾಗುವಂತೆ ನೆಟ್ ಅಳವಡಿಕೆಗಾಗಿ 8 ಅಡಿ ಗೋಡೆ ಪಕ್ಕ 6 ಅಡಿಯಷ್ಟು ಎತ್ತರ ಮಣ್ಣು ಸುರಿಯಲಾಗಿದೆ. ಗೋಡೆ ಪಕ್ಕದಲ್ಲಿಮಣ್ಣು ಸುರಿದಿರುವುದು ದುರಂತಕ್ಕೆ ಮೂಲ ಕಾರಣವಾಗಿದೆ. ಈ ಮಣ್ಣನ್ನು ಸೂಕ್ತ ಸಮಯಕ್ಕೆ ತೆರವು ಮಾಡುವಲ್ಲಿಗುತ್ತಿಗೆದಾರ ಮತ್ತು ಆರೋಗ್ಯ ಇಲಾಖೆ ಇಂಜಿನಿಯರ್ ನಿರ್ಲಕ್ಷ್ಯ ವಹಿಸಿದ್ದರು ಎಂದು ವರದಿಯಲ್ಲಿವಿವರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

