ವಿಕ ಸುದ್ದಿಲೋಕ ಪಳ್ಳಿ
ಕಾರ್ಕಳ ತಾಲೂಕಿನ ಪಳ್ಳಿಯ ಸಮಾನ ಮನಸ್ಕರ ತಂಡವು ತನ್ನ ಸಾಮಾಜಿಕ ಸೇವೆಯ ಭಾಗವಾಗಿ 37ನೇ ಗೃಹ ನಿರ್ಮಾಣ ಮಾಡಿದೆ.
ಈ ಯೋಜನೆಯಿಂದ ಪಳ್ಳಿ ಕನ್ನಡಿಬೈಲು ಸುಮಿತ್ರ ದಿನೇಶ ಆಚಾರ್ಯ ಏರ್ಮಾಳು ಮತ್ತು ಅವರ ಪುತ್ರ ನಿತೀಶ್ ಅವರಿಗಾಗಿ ನಿರ್ಮಿಸಿದ ಮನೆ ಶ್ರೀನಿಕೇತನವು ಸ್ಥಳೀಯ ದಾನಿಗಳೊಂದಿಗೆ ತಂಡದ ಸದಸ್ಯರ ಸಹಾಯ, ಸಹಕಾರ ಮತ್ತು ಪ್ರೋತ್ಸಾಹದಿಂದ ಶಶಿಧರ ಪುರೋಹಿತರ ಮುಖಂಡತ್ವ, ಪುತ್ತೂರು ಶಿಲ್ಪಿ ಮಾಧವ ಆಚಾರ್ಯರ ಮಾರ್ಗದರ್ಶನ, ಜಯಂತಿ ಆಚಾರ್ಯ ಪಳ್ಳಿ, ವೀಣಾ ಆಚಾರ್ಯ ಪಳ್ಳಿ, ಜಗದೀಶ್ ಆಚಾರ್ಯ ಪಳ್ಳಿ, ವೈ.ಎ. ಬಾಳ್ಳಟ್ಟ ಮೊದಲಾದವರ ನಿರ್ವಹಣೆಯಲ್ಲಿಪೂರ್ಣಗೊಂಡಿದೆ. ಪೂರ್ಣಗೊಂಡ ಮನೆಯನ್ನು ಸರಳ ಸಮಾರಂಭದಲ್ಲಿಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು.
ಸುಮಿತ್ರ ಅವರ ಪತಿ ದಿನೇಶ್ ಆಚಾರ್ಯ ಕ್ಯಾನ್ಸರ್ ನಿಂದ ಮೃತಪಟ್ಟಿದ್ದು, ಪತಿಯ ಅಗಲಿಕೆಯಿಂದ ಸುಮಿತ್ರ ಹಾಗೂ ಮಗ ಕಂಗಾಲಾಗಿದ್ದರು. ಸುಮಿತ್ರಾಳಿಗೆ ಆಕೆಯ ತಂದೆ ಶ್ರೀಧರ ಆಚಾರ್ಯ ಪಳ್ಳಿಯಲ್ಲಿಸಣ್ಣ ಜಾಗ ನೀಡಿದ್ದರು. ಆದರೆ ವಾಸಕ್ಕೆ ಮನೆ ಇರಲಿಲ್ಲ. ಅದನ್ನು ಮನಗಂಡ ಸಮಾನ ಮನಸ್ಕರ ತಂಡ ಮಾನವೀಯತೆ ನೆಲೆಯಲ್ಲಿದಾನಿಗಳ ಸಹಕಾರದಿಂದ ಸುಂದರ ಸೂರು ಕಟ್ಟಿಕೊಡುವ ಮೂಲಕ ಸುಮಿತ್ರ ಬದುಕಲ್ಲಿಬೆಳಕು ಮೂಡಿಸಿದೆ.
ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ಮಾತನಾಡಿ, ಸಮಾನ ಮನಸ್ಕರೆಂಬ ಸಮಾಜದ ಹೃದಯ ಶ್ರೀಮಂತರ ಮಾನವೀಯ ಕಾರ್ಯ ಹೀಗೆಯೇ ಮುಂದುವರೆಯಲಿ ಎಂದರು.
ಶಶಿಧರ್ ಪುರೋಹಿತ್ ಕಟಪಾಡಿ, ಯೋಗೀಶ್ವರ್ ಆಚಾರ್ಯ ಅತ್ರಾಡಿ, ನಿವೃತ್ತ ಅಧ್ಯಾಪಕ ಶ್ರೀನಿವಾಸ ರಾವ್ , ಬಾಲಾಜಿ ಜ್ಯುವೆಲ್ಲರ್ಸ್ ಮಾಲಕ ಯಶವಂತ್ ಆಚಾರ್ಯ, ವಿಶ್ವನಾಥ ಭಂಡಾರಿ ಪಳ್ಳಿ, ವಿಲ್ಸನ್ ಲೋಬೊ ಪಳ್ಳಿ, ವಿಜಯ ಎಂ. ಶೆಟ್ಟಿ, ಪ್ರಶಾಂತ್ ಶೆಟ್ಟಿ, ಜಯಂತಿ ಗಣೇಶ್ ಆಚಾರ್ಯ, ವೀಣಾ ಆಚಾರ್ಯ, ಅನುಷಾ ಆಚಾರ್ ಪಳ್ಳಿ ಮತ್ತಿತರರು ಉಪಸ್ಥಿತರಿದ್ದರು.
ಫೊಟೋಕ್ಯಾಪ್ಶನ್ -ಪಳ್ಳಿ ಕನ್ನಡಿಬೈಲು ಸುಮಿತ್ರ ದಿನೇಶ ಆಚಾರ್ಯ ಎರ್ಮಾಲು ಅವರಿಗೆ ಸಮಾನ ಮನಸ್ಕರ ತಂಡದಿಂದ ಮನೆಯನ್ನು ಹಸ್ತಾಂತರಿಸಲಾಯಿತು.
(ಫೊಟೋ:13ಕೆವಿ-ಎಸ್ ಎಂಟಿ)

