ಮನೆ ಕೀಲಿ ಮುರಿದು ಕಳ್ಳತನ
ಹುಬ್ಬಳ್ಳಿ: ಇಲ್ಲಿನ ಮಂಟೂರ ರಸ್ತೆಯ ವಿದ್ಯಾದರ್ಶನಿ ಶಾಲೆ ಬಳಿ ಮನೆಯೊಂದರ ಬಾಗಿಲಿಗೆ ಹಾಕಿದ ಬೀಗ ಮುರಿದು ಒಳನುಗ್ಗಿದ ಕಳ್ಳರು, ಮನೆಯಲ್ಲಿದ್ದ 2.51 ಲಕ್ಷ ರೂ. ಮೌಲ್ಯದ ಆಭರಣ, 45 ಸಾವಿರ ರೂ. ನಗದು ಕಳ್ಳತನ ಮಾಡಿದ ಘಟನೆ ನಡೆದಿದೆ.
ನಗರದ ಮುತ್ತುರಾಜ ಅಂಗಡಿ ಎಂಬವರ ಮನೆಯಲ್ಲಿಕಳ್ಳತನ ನಡೆದಿದೆ. ತಿಜೋರಿಯಲ್ಲಿಒಳ ಲಾಕರ್ ನಲ್ಲಿಟ್ಟಿದ್ದ 10 ಗ್ರಾಂ ತೂಕದ ಬಂಗಾರದ ಮಾಂಗಲ್ಯಸರ, 280 ಗ್ರಾಂ ತೂಕದ ಬೆಳ್ಳಿ ಆಭರಣ ಮತ್ತು 45 ಸಾವಿರ ನಗದು ಸೇರಿ ಒಟ್ಟು 2.51 ಲಕ್ಷ ರೂ. ಕಿಮ್ಮತ್ತಿನ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಲಾಗಿದೆ. ಈ ಕುರಿತು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

