ದಿನಭವಿಷ್ಯ 14 ಮೇ 2026
ಶ್ರೀಪತಿ ಭಟ್ | ಬೆಂಗಳೂರು
(ಮೇಷ, ತುಲಾ-ಈ ರಾಶಿಯವರಿಗೆ ಚಿನ್ನ ಖರೀದಿಸುವ ಯೋಗ)
ಧಿಧಿಧಿಧಿ------------------
ಮೇಷ: ವ್ಯವಹಾರದಲ್ಲಿಅಧಿಕ ಲಾಭ ಮಾಡುವ ಉದ್ದೇಶದಲ್ಲಿಕೈ ಸುಟ್ಟು ಕೊಳ್ಳಬೇಡಿ. ಮೌನ ವಹಿಸುವ ಬದಲಾಗಿ ಮದುವೆಯ ವಿಚಾರವಾಗಿ ನಿಮ್ಮ ನಿರ್ಧಾರವನ್ನು ಹಿರಿಯರಿಗೆ ತಿಳಿಸಿ.
(ಶುಭ ಸಂಖ್ಯೆ : 1, ಅದೃಷ್ಟ ಬಣ್ಣ : ಹಸಿರು)
-----
ವೃಷಭ : ಸೋಲು ನಿಮ್ಮನ್ನು ಬಾಧಿಸುತ್ತಿದ್ದರೂ ಹೊಸತನದಲ್ಲಿಜಯ ಕಾಣುವಿರಿ. ವಿವಿಧ ಮೂಲಗಳಿಂದ ದ್ರವಲಾಭ ಇರುವುದು. ಪೊಲೀಸ್ ಅಧಿಕಾರಿಗಳಿಗೆ ವರ್ಗಾವಣೆ ಸಾಧ್ಯತೆ.
(ಶುಭ ಸಂಖ್ಯೆ : 9, ಅದೃಷ್ಟ ಬಣ್ಣ : ನೀಲಿ)
---------
ಮಿಥುನ : ಸತಿ-ಪತಿಯರ ನಡುವೆ ಉಡುಗೊರೆ ವಿನಿಮಯದಿಂದ ಸಂಬಂಧಗಳು ಗಟ್ಟಿಯಾಗಲಿವೆ. ಉದ್ಯೋಗಿಗಳಿಗೆ ಸ್ವಲ್ಪ$್ಪಮಟ್ಟಿನ ಅನಿಶ್ಚಿತತೆ ಕಾಡಬಹುದು.
(ಶುಭ ಸಂಖ್ಯೆ : 3, ಅದೃಷ್ಟ ಬಣ್ಣ : ಗುಲಾಬಿ)
------------
ಕಟಕ : ವೃತ್ತಿಯಲ್ಲಿಸಂಚಾರವಿರುವುದರಿಂದ ದೈಹಿಕವಾಗಿ ತೊಂದರೆಗಳಾಗಬಹುದು. ಆರ್ಥಿಕವಾಗಿ ಅಧಿಕ ಲಾಭ. ರಾಜಕೀಯ ಚಟುವಟಿಕೆಗಳಲ್ಲಿಬಿರುಸಿನ ಓಡಾಟ ಅನಿವಾರ್ಯ.
(ಶುಭ ಸಂಖ್ಯೆ : 8, ಅದೃಷ್ಟ ಬಣ್ಣ : ಹಳದಿ)
-----------
ಸಿಂಹ : ಮಾತಿನ ಚತುರತೆಯಿಂದ ಕೆಲಸಗಳು ಸರಾಗವಾಗಿ ನೆರವೇರಲಿವೆ. ಪಾರಮಾರ್ಥಿಕ ವಿಷಯಗಳತ್ತ ಮನಸ್ಸು ಹರಿಯುವುದು. ಹಳೇ ಕಾಲದ ಪರಿಸ್ಥಿತಿಯನ್ನು ಉಳಿಸಿ.
(ಶುಭ ಸಂಖ್ಯೆ : 2, ಅದೃಷ್ಟ ಬಣ್ಣ : ಆಲೀವ್ )
-------------
ಕನ್ಯಾ : ಅಮೂಲ್ಯವಾದ ವಸ್ತು ವಿಚಾರದ ನಷ್ಟವು ಮನಸ್ಸಿಗೆ ನೋವು ಉಂಟು ಮಾಡಲಿದೆ. ಸಾಂಸ್ಕೃತಿಕ ರಂಗದಲ್ಲಿಮೇಲ್ಮಟ್ಟದ ಸಾಧನೆ ಮಾಡಬಹುದು. ಸಾಲ ಮಾಡಬೇಡಿ.
(ಶುಭ ಸಂಖ್ಯೆ : 4, ಅದೃಷ್ಟ ಬಣ್ಣ : ಕೇಸರಿ)
------------
ತುಲಾ : ಅನಗತ್ಯ ವಿಚಾರಗಳಲ್ಲಿಸುಮ್ಮನೆ ತಲೆ ಹಾಕುವುದನ್ನು ಬಿಡುವುದು ಒಳ್ಳೆಯದು. ಮಸಾಲೆ ಪದಾರ್ಥಗಳನ್ನು ಬೆಳೆಯುವವರಿಗೆ ಮತ್ತು ಮಾರಾಟಗಾರರಿಗೆ ಉತ್ತಮ ವ್ಯಾಪಾರ ಇರಲಿದೆ.
(ಶುಭ ಸಂಖ್ಯೆ : 7, ಅದೃಷ್ಟ ಬಣ್ಣ : ಕಪ್ಪು)
------------
ವೃಶ್ಚಿಕ : ವಿಶ್ವಾಸದಲ್ಲಿಯಾರಿಗೂ ಹಣವನ್ನು ನೀಡಬೇಡಿ. ಪರಿಶ್ರಮದಿಂದ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ. ವಾಣಿಜ್ಯ ವ್ಯವಹಾರಗಳು ಲಾಭವನ್ನು ತರಲಿವೆ. ಬಂಧುಗಳೊಡನೆ ವಿವಾದವನ್ನು ಮಾಡಬೇಡಿ.
(ಶುಭ ಸಂಖ್ಯೆ :5, ಅದೃಷ್ಟ ಬಣ್ಣ : ಕಿತ್ತಳೆ)
-------------------
ಧನು : ದಾಂಪತ್ಯ ಜೀವನದಲ್ಲಿಮಧುರ ಬಾಂಧವ್ಯ ವೃದ್ಧಿಯಾಗಲಿದೆ. ಬರವಣಿಗೆ ಕೆಲಸದವರು ಸಾಕ್ಷಿಗಳ ಅಧ್ಯಯನವನ್ನು ಸಮಂಜಸವಾಗಿ ಮಾಡುವುದು ಉತ್ತಮ. ಮನೆಯಲ್ಲಿಮಂಗಳ ಕಾರ್ಯಗಳು ನಡೆಯಲಿವೆ.
(ಶುಭ ಸಂಖ್ಯೆ :6, ಅದೃಷ್ಟ ಬಣ್ಣ : ಕೆಂಪು)
---------------
ಮಕರ : ವೃತ್ತಿ ವಿಷಯದಲ್ಲಿಒಪ್ಪಂದ ಏರ್ಪಡಿಸುವ ಬಗ್ಗೆ ಅಭಿಪ್ರಾಯ ಬರಲಿದೆ. ಸೂಕ್ಷತ್ರ್ಮವಾದ ಮತ್ತು ಮಹತ್ವದ ವಿಷಯವಾದ್ದರಿಂದ ಗಂಭೀರ ಚಿಂತನೆ ಅಗತ್ಯ. ಕಾರ್ಮಿಕ ವರ್ಗದವರಿಂದ ಕೆಲಸ-ಕಾರ್ಯದಲ್ಲಿಮೋಸ ಹೋಗುವಿರಿ.
(ಶುಭ ಸಂಖ್ಯೆ :2, ಅದೃಷ್ಟ ಬಣ್ಣ : ಕಂದು)
-----------
ಕುಂಭ : ಖಾದ್ಯ ತೈಲ ವ್ಯಾಪಾರಿಗಳಿಗೆ ಲಾಭ ನಿರೀಕ್ಷೆ ಇರುವುದು. ಯತ್ನ ಕಾರ್ಯಗಳು ವಿಳಂಬವಾಗುವ ಸಂಭವವಿದೆ. ರಫ್ತು ಮಾರಾಟಗಾರರು ಮತ್ತು ದಲ್ಲಾಳಿಗಳು ಅನುಕೂಲವನ್ನು ಪಡೆಯುವಿರಿ.
(ಶುಭ ಸಂಖ್ಯೆ : 9, ಅದೃಷ್ಟ ಬಣ್ಣ : ಬೆಳ್ಳಿ)
-------------
ಮೀನ : ಹಿರಿಯರ ಅನುಗ್ರಹದಿಂದ ಇಷ್ಟಸಿದ್ಧಿಯಾಗಿ ಕೃಷಿ ಉತ್ಪನ್ನಗಳ ಅಥವಾ ಪದಾರ್ಥಗಳ ಕ್ರಯ-ವಿಕ್ರಯದಲ್ಲಿಲಾಭ ತರಲಿದೆ. ಗುರುಗಳು ನೀಡಿದ ಉಪದೇಶ ದೈನಂದಿನ ಬದುಕಿಗೆ ದಾರಿದೀಪ.
(ಶುಭ ಸಂಖ್ಯೆ : 1, ಅದೃಷ್ಟ ಬಣ್ಣ : ಖಾಕಿ)

