-ಕೊಡಗು ವನ್ಯಜೀವಿ ಸಂಘದ ಕರ್ನಲ್ ಸಿ.ಪಿ.ಮುತ್ತಣ್ಣ ಮನವಿ
ವಿಕ ಸುದ್ದಿಲೋಕ ವಿರಾಜಪೇಟೆ
ಅಕ್ರಮ ಭೂ ಪರಿವರ್ತನೆಗೆ ಕೊಡಗಿನಲ್ಲಿಕಡಿವಾಣ ಹಾಕಬೇಕು ಎಂದು ಕೊಡಗು ವನ್ಯಜೀವಿ ಸಂಘದ ಪ್ರಮುಖ ಕರ್ನಲ್ ಸಿ.ಪಿ.ಮುತ್ತಣ್ಣ ತಿಳಿಸಿದ್ದಾರೆ.
ವಿರಾಜಪೇಟೆಯಲ್ಲಿಪತ್ರಿಕಾಗೋಷ್ಠಿಯಲ್ಲಿಮಾತನಾಡಿ, ‘‘ಕೊಡಗಿನಲ್ಲಿಅಕ್ರಮ ಭೂ ಪರಿವರ್ತನೆ ನಡೆಸಿ ಅಕ್ರಮ ಭೂ ಪರಿವರ್ತನೆಗೆ ಒತ್ತಾಸೆ ನೀಡಿದ್ದು, ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಮನವಿ ಮಾಡಲಾಗಿದೆ. ಸೋಮವಾರಪೇಟೆಯ ಕಿರಗಂದೂರು ಗ್ರಾ.ಪಂ. ವ್ಯಾಪ್ತಿಯಲ್ಲಿಸೀಬರ್ಡ್ ವಿಶ್ರಾಂತಿ ಮಂದಿರಕ್ಕಾಗಿ ಸುಮಾರು 40 ಎಕ್ರೆ ಭೂ ಪರಿವರ್ತನೆಗೆ ಅನುಮತಿ ನೀಡಿದ್ದಾರೆ. ಅನೇಕ ಕಡೆ ನಡೆದಿರುವ ಭೂ ಅಕ್ರಮ ಪರಿವರ್ತನೆಯನ್ನು ತಡೆಹಿಡಿಯುವ ನಿಟ್ಟಿನಲ್ಲಿಜಿಲ್ಲಾಧಿಕಾರಿಗೆ ಅನುಮತಿ ರದ್ದುಗೊಳಿಸುವಂತೆ ಮನವಿ ಸಲ್ಲಿಸಲಾಗಿದ್ದು, ಸ್ಪಂದಿಸುವ ಭರವಸೆ ನೀಡಿದ್ದಾರೆ,’’ ಎಂದು ತಿಳಿಸಿದರು.
‘‘ಭೂ ಪರಿವರ್ತನೆಯಿಂದ ಕೊಡಗಿನ ಹಸಿರು ವನ್ಯ ಸಂಪತ್ತುಗಳು ಕಡಿಮೆಯಾಗಿ ಕಾವೇರಿ ನೀರಿನ ಹರಿವಿನ ಪ್ರಮಾಣ ಕುಸಿಯುತ್ತಿದೆ. ಈ ರೀತಿ ಭೂ ಪರಿವರ್ತನೆಯಾಗುತ್ತಿದ್ದರೆ ಕೆಲವೇ ವರ್ಷಗಳಲ್ಲಿಗೊಣಿಕೊಪ್ಪ, ವಿರಾಜಪೇಟೆ ನಿಶ್ಚಿತವಾಗಿ ಮೈಸೂರಿನಂತಹ ಮಹಾನಗರವಾಗಲಿದೆ. ಇದೇರೀತಿ ಸೋಮವಾರಪೇಟೆ, ಮಡಿಕೇರಿ, ಕುಶಾಲನಗರಗಳೂ ಮಹಾನಗರವಾಗುತ್ತ ಹೋಗುತ್ತವೆ. ಕೊನೆಗೆ ಕಾವೇರಿ ನೀರು ಕೊಡಗಿನ ಜನರ ಆಂತರಿಕ ಬಳಕೆಗೆ ಮಾತ್ರ ಸಿಮೀತವಾಗಿ ಇದನ್ನು ಅವಲಂಬಿತ ಜಿಲ್ಲೆಗಳು ಹಾಗೂ ಬೆಂಗಳೂರಿಗೆ ನೀರು ಮರೀಚಿಕೆಯಾಗಲಿದೆ,’’ಎಂದು ಹೇಳಿದರು.
‘‘ಹಣದಾಸೆಯಿಂದ ಅನೇಕರು ವಾಣಿಜ್ಯ ಪರಿವರ್ತನೆಗಳಲ್ಲಿತೊಡಗಿರುವುದು ವಿಷಾದನೀಯ,’’ ಎಂದರು.
ಸುದ್ದಿಗೋಷ್ಠಿಯಲ್ಲಿಮಾಳೇಟಿರ ಕಾಳಯ್ಯ, ಮಾಳೇಟಿರ ಶ್ರೀನಿವಾಸ, ಮಾಳೇಟಿರ ನಂಜಪ್ಪ, ಮಡಿಕೇರಿಯ ಮೊದೂರಿನ ಶಿವಶಂಕರ್ ಉಪಸ್ಥಿತರಿದ್ದರು.

