**(ಸ್ಟೋರಿ) ಚಾರ್ಮಾಡಿ ತಿರುವುಗಳಲ್ಲಿಕಾನ್ವೆಕ್ಸ್ ಮಿರರ್ ಅಳವಡಿಕೆ ಉಜಿರೆ ಎಸ್ ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕೊಡುಗೆ * ಅಪಘಾತ ತಡೆಗೆ ಸಹಕಾರಿ

Contributed byaravindahebbar1971@gmail.com|Vijaya Karnataka

ಚಾರ್ಮಾಡಿ ಘಾಟಿ ರಸ್ತೆಯ 12 ಅಪಾಯಕಾರಿ ತಿರುವುಗಳಲ್ಲಿ ಉಜಿರೆಯ ಎಸ್‌ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಕಾನ್ವೆಕ್ಸ್‌ ಮಿರರ್‌ಗಳನ್ನು ಅಳವಡಿಸಲಾಗಿದೆ. ಇದರಿಂದ ವಾಹನ ಚಾಲಕರಿಗೆ ಮುಂಭಾಗದಿಂದ ಬರುವ ವಾಹನಗಳನ್ನು ದೂರದಿಂದಲೇ ಗುರುತಿಸಲು ಸಾಧ್ಯವಾಗುತ್ತದೆ. ಇದು ಅಪಘಾತಗಳನ್ನು ತಡೆಯಲು, ಸಂಚಾರ ಸುಗಮಗೊಳಿಸಲು ಸಹಕಾರಿಯಾಗಿದೆ. ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅನುಮತಿ ಪಡೆದು ಈ ಕಾರ್ಯ ಮಾಡಲಾಗಿದೆ. ಚಾಲಕರು ಸುರಕ್ಷಿತವಾಗಿ ವಾಹನ ಚಲಾಯಿಸಲು ಇದು ನೆರವಾಗಲಿದೆ.

installation of convex mirrors in charmadi ghat a new initiative by ujire sdm hospital to prevent accidents

ಅರವಿಂದ ಹೆಬ್ಬಾರ್ ಮುಂಡಾಜೆ ಬೆಳ್ತಂಗಡಿ(ದ.ಕ.)

್ಛಛಿಛಿdಚಿa್ಚkvkಞ್ಞಜಃಜಞaಜ್ಝಿ.್ಚಟಞ

ಚಾರ್ಮಾಡಿ ಘಾಟಿ ರಸ್ತೆಯ 12 ಕಡೆ ಉಜಿರೆಯ ಎಸ್ ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಕಾನ್ವೆಕ್ಸ್ ಮಿರರ್ (ಉಬ್ಬು ಕನ್ನಡಿ) ಅಳವಡಿಸಲಾಗಿದೆ.

ತಿರುವು-ಮುರುವುಗಳಿಂದ ಕೂಡಿದ ಚಾರ್ಮಾಡಿ ಘಾಟಿ ರಸ್ತೆಯ ಹಲವು ಸ್ಥಳಗಳು ಅಪಾಯಕಾರಿ ಹಾಗೂ ಅತ್ಯಂತ ಸೂಕ್ಷ್ಮವಾಗಿದ್ದು, ಇಲ್ಲಿವಾಹನಗಳನ್ನು ಚಲಾಯಿಸುವುದು ಸಾಹಸಮಯ ಕೆಲಸ. ಹೊಸ ಚಾಲಕರಿಗಂತೂ ಚಾರ್ಮಾಡಿ ಘಾಟಿ ರಸ್ತೆ ನಾನಾ ಸವಾಲುಗಳನ್ನು ಒಡ್ಡುತ್ತದೆ.

ಘಾಟಿ ಪ್ರದೇಶದಲ್ಲಿ12 ತಿರುವುಗಳಿದ್ದು, ಇಲ್ಲಿವಾಹನ ಹತ್ತುವಾಗ ಹಾಗೂ ಇಳಿಯುವ ಸಮಯ ಮುಂಭಾಗದಿಂದ ಬರುವ ವಾಹನಗಳು ಪರಸ್ಪರ ಹತ್ತಿರ ಬರುವವರೆಗೂ ಗಮನಕ್ಕೆ ಬಾರದೆ ಹಲವಾರು ಅಪಘಾತಗಳು ಸಂಭವಿಸುತ್ತವೆ. ತಿರುವು ಪ್ರದೇಶಗಳು ಕಿರಿದಾಗಿದ್ದು, ಹೇರ್ ಪಿನ್ ತಿರುವುಗಳಾಗಿರುವ ಕಾರಣ ರಸ್ತೆ ಎಡಬದಿಯಲ್ಲಿವಾಹನವನ್ನು ಚಲಾಯಿಸಿಕೊಂಡು ಹೋದರೂ ಕೆಲವು ಭಾಗಗಳಲ್ಲಿವಾಹನಗಳನ್ನು ಬಲಬದಿಗೆ ಚಲಾಯಿಸಿದರೆ ಮಾತ್ರ ತಿರುವು ಪಡೆದುಕೊಳ್ಳಲು ಸಾಧ್ಯವಾಗುವ ಸ್ಥಿತಿ ಇದೆ. ಮುಂಭಾಗದಿಂದ ಬರುವ ವಾಹನಗಳು ಇಂತಹ ಸಂದರ್ಭ ಗೋಚರಕ್ಕೆ ಬರುವುದಿಲ್ಲ. ಲಾರಿ, ಬಸ್ ನಂತಹ ಘನ ವಾಹನಗಳು ಮುಂಭಾಗದಿಂದ ಬಂದಾಗ ಅಪಾಯ ಕಟ್ಟಿಟ್ಟ ಬುತ್ತಿ.

ಕಾನ್ವೆಕ್ಸ್ ಮಿರರ್ ಅಳವಡಿಕೆ

ಉಜಿರೆ ಎಸ್ ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯವರು ಈ ತಿರುವುಗಳಲ್ಲಿಉಂಟಾಗುವ ಅಪಾಯಗಳ ಕುರಿತು ಪರಿಶೀಲನೆ ನಡೆಸಿ ಅಂತಹ 12 ಸ್ಥಳಗಳಲ್ಲಿರಾಷ್ಟ್ರೀಯ ಹೆದ್ದಾರಿ ಇಲಾಖೆಯ ಒಪ್ಪಿಗೆ ಪಡೆದು ಕಾನ್ವೆಕ್ಸ್ ಮಿರರ್ ಅಳವಡಿಸಿದ್ದಾರೆ. ಈ ಕನ್ನಡಿಗಳು ಹಲವು ಮೀಟರ್ ದೂರದಿಂದ ಬರುವ ವಾಹನಗಳನ್ನು ಚಾಲಕರು ಗುರುತಿಸಲು ಸಹಕಾರಿಯಾಗಿದ್ದು, ಮುಂಜಾಗ್ರತೆ ಕೈಗೊಳ್ಳಲು ಸಹಾಯಕವಾಗಿವೆ.

ಪ್ರಸ್ತುತ ಘಾಟಿ ಭಾಗದಿಂದ ಸಂಚರಿಸುವ ವಾಹನ ಚಾಲಕರು ತಿರುವು ಪ್ರದೇಶಗಳಲ್ಲಿಈ ಕನ್ನಡಿಗಳನ್ನು ಗಮನಿಸುತ್ತಾ ವಾಹನಗಳನ್ನು ಚಲಾಯಿಸುತ್ತಾರೆ. ಇದು ಅಪಘಾತಗಳಿಗೆ ಕಡಿವಾಣ ಹಾಕಲು, ಟ್ರಾಫಿಕ್ ಜಾಮ್ ಉಂಟಾಗದಂತೆ, ತಿರುವುಗಳಲ್ಲಿವನ್ಯಜೀವಿಗಳ ಸಂಚಾರ ಇದ್ದರೆ ಅದನ್ನು ಗಮನಿಸಲು ಅನುಕೂಲವಾಗಲಿದೆ.

ಬಾಕ್ಸ್

ಮಿರರ್ ಉಪಯೋಗ

ಕಾನ್ವೆಕ್ಸ್ ಮಿರರ್ ವಾಹನ ಸವಾರರಿಗೆ ದೂರದಿಂದ ರಸ್ತೆ ಗಮನಿಸಲು ಅನುಕೂಲವನ್ನುಂಟು ಮಾಡುತ್ತದೆ. ತಿರುವಿನಲ್ಲಿಬರುವ ವಾಹನಗಳು ಚಾಲಕನಿಗೆ ನೇರವಾಗಿ ಕಾಣಿಸುವುದಿಲ್ಲ. ಆದ್ದರಿಂದ ಈ ಕನ್ನಡಿಗಳು ಅಂತಹ ಸೂಕ್ಷ್ಮ ಸ್ಥಳಗಳ ಪ್ರತಿಬಿಂಬವನ್ನು ದೂರದಿಂದ ತೋರಿಸುತ್ತವೆ. ಈ ಕನ್ನಡಿಗಳು ಬಾಗಿದ ಮೇಲ್ಮೈಯನ್ನು ಹೊಂದಿದ್ದು, ವಿಶಾಲವಾದ ಕೋನಗಳಲ್ಲಿಮುಂಭಾಗದ ದೃಶ್ಯವನ್ನು ಪ್ರತಿಬಿಂಬಿಸುತ್ತವೆ. ರಸ್ತೆ ಸುರಕ್ಷತಾ ದೃಷ್ಟಿಯಿಂದ ಇವುಗಳನ್ನು ಇಕ್ಕಟ್ಟಾದ ಬೆಟ್ಟ ಪ್ರದೇಶದ ರಸ್ತೆ ಹಾಗೂ ತಿರುವುಗಳಿಂದ ಕೂಡಿದ ರಸ್ತೆಯಲ್ಲಿಅಳವಡಿಸಲಾಗುತ್ತದೆ.

ಕೋಟ್

ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ದಂಪತಿ ಹಾಗೂ ಹರ್ಷೇಂದ್ರ ಕುಮಾರ್ ಆದೇಶದಂತೆ ಚಾರ್ಮಾಡಿ ಘಾಟಿ ರಸ್ತೆಯ ಅಪಾಯಕಾರಿ ತಿರುವುಗಳಲ್ಲಿಇಲಾಖೆಯ ಅನುಮತಿ ಪಡೆದು ಆಸ್ಪತ್ರೆ ವತಿಯಿಂದ ಕಾನ್ವೆಕ್ಸ್ ಮಿರರ್ ಗಳನ್ನು ಅಳವಡಿಸಲಾಗಿದೆ. ಇಲ್ಲಿನ ಸೂಕ್ಷ್ಮ ಸ್ಥಳಗಳನ್ನು ಗುರುತಿಸಿ ಈ ಕೆಲಸ ನಿರ್ವಹಿಸಲು ಇಲಾಖೆಯೊಂದಿಗೆ ಸಿಬ್ಬಂದಿ ಕೈಜೋಡಿಸಿದ್ದಾರೆ.

-ಜನಾರ್ದನ್ , ಎಂಡಿ, ಎಸ್ ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಉಜಿರೆ

ಕೋಟ್

ಕಾನ್ವೆಕ್ಸ್ ಮಿರರ್ ಅಳವಡಿಸಿದ ಬಳಿಕ ತಿರುವುಗಳಲ್ಲಿಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ. ತಿರುವುಗಳಲ್ಲಿಕನ್ನಡಿಗಳನ್ನು ಅಳವಡಿಸಿರುವುದರಿಂದ ಚಾಲಕರಿಗೆ ಅನುಕೂಲವಾಗಿದೆ. ಘನ ವಾಹನಗಳನ್ನು ಗಮನಿಸಲು, ಸುರಕ್ಷತೆಯ ಚಾಲನೆಗೆ ಇವು ಸಹಕಾರಿಯಾಗಿವೆ.

-ನಾಗರಾಜ, ತರಕಾರಿ ಲಾರಿ ಚಾಲಕ, ಬೇಲೂರು

ಫೊಟೋ: 13ಎಂಜೆ ಕಾನ್ವೆಕ್ಸ್ ಮಿರರ್ 1, 2

ಚಾರ್ಮಾಡಿ ಘಾಟಿಯ ತಿರುವುಗಳಲ್ಲಿಕಾನ್ವೆಕ್ಸ್ ಮಿರರ್ ಅಳವಡಿಸಿರುವುದು.

ಫೊಟೋ: 13ಎಂಜೆ ಕಾನ್ವೆಕ್ಸ್ ಮಿರರ್ 3, 4

ಚಾರ್ಮಾಡಿ ಘಾಟಿಯ ಅಪಾಯಕಾರಿ ತಿರುವುಗಳು.