ಎಸ್ ಎಸ್ ಆರ್ ಚಿತ್ರಕಲಾ ಶಿಬಿರಕ್ಕೆ ಚಾಲನೆ

Contributed byVinayaka Naik P|Vijaya Karnataka

ದಾವಣಗೆರೆಯಲ್ಲಿ ವಿಜಯ ಕರ್ನಾಟಕ ವತಿಯಿಂದ ಚಿತ್ರಕಲಾ ಶಿಬಿರಕ್ಕೆ ಚಾಲನೆ ನೀಡಲಾಯಿತು. ವಿಕ ಸೂಪರ್‌ ಸ್ಟಾರ್‌ ರೈತ ಪ್ರಶಸ್ತಿ ಪ್ರದಾನ ಸಮಾರಂಭದ ಪೂರ್ವಭಾವಿಯಾಗಿ ಈ ಶಿಬಿರ ಆಯೋಜಿಸಲಾಗಿತ್ತು. ಹತ್ತು ವಿದ್ಯಾರ್ಥಿಗಳು ಕೃಷಿ ಸಂದೇಶ ಸಾರುವ ಚಿತ್ರಗಳನ್ನು ರಚಿಸಿದರು. ರೈತರ ಬದುಕಿನ ಚಿತ್ರಣವನ್ನು ಕಲಾತ್ಮಕವಾಗಿ ಕಟ್ಟಿಕೊಡಲು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಲಾಯಿತು. ಅತ್ಯುತ್ತಮ ಚಿತ್ರಕಲೆಗಳಿಗೆ ಪ್ರೋತ್ಸಾಹ ನೀಡಲಾಗುವುದು.

ssr art camp successfully launched

* ವಿಕ ಎಸ್ ಎಸ್ ಆರ್ ಲೋಗೋ ಬಳಸಿ//

ಕಿಕ್ಕರ್ : ವಿಕದಿಂದ ಕೃಷಿ ಸಂದೇಶ ಸಾರುವ ಚಿತ್ರಕಲೆಗಳ ಅನಾವರಣ | ಹತ್ತು ವಿದ್ಯಾರ್ಥಿ ಕೈಯಲ್ಲಿಅರಳಿದ ಒಕ್ಕಲುತನದ ದೃಶ್ಯಗಳು

---

ಎಸ್ ಎಸ್ ಆರ್ ಚಿತ್ರಕಲಾ ಶಿಬಿರಕ್ಕೆ ಚಾಲನೆ

ವಿಕ ಸುದ್ದಿಲೋಕ ದಾವಣಗೆರೆ

ಇದೇ ಮೇ 19ರಂದು ನಗರದಲ್ಲಿನಡೆಯಲಿರುವ ವಿಕ ಸೂಪರ್ ಸ್ಟಾರ್ ರೈತ ಪ್ರಶಸ್ತಿ ಪ್ರದಾನ ಸಮಾರಂಭದ ಪೂರ್ವ ತಯಾರಿಗಾಗಿ, ಇಲ್ಲಿನ ದೃಶ್ಯಕಲಾ ಮಹಾವಿದ್ಯಾಲಯದಲ್ಲಿಬುಧವಾರ ವಿಜಯ ಕರ್ನಾಟಕ ಏರ್ಪಡಿಸಿದ್ದ ಚಿತ್ರಕಲಾ ಶಿಬಿರಕ್ಕೆ ಗಣ್ಯರು ವಿದ್ಯಾರ್ಥಿಗಳಿಗೆ ಚಿತ್ರ ಬಿಡಿಸಲು ಕ್ಯಾನವಸ್ ಹಸ್ತಾಂತರಿಸಿ ಚಾಲನೆ ನೀಡಿದರು.

ಶಿಬಿರಕ್ಕೆ ಚಾಲನೆ ನೀಡಿದ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರಾಘವೇಂದ್ರ ಪ್ರಸಾದ್ ಮಾತನಾಡಿ, ‘‘ಮೊದಲಿನಿಂದಲೂ ರೈತನನ್ನ ದುಃಖ, ದುಮ್ಮಾನಗಳ ಮೂಲಕವೇ ಪರಿಚಯಿಸುವ ಪ್ರಯತ್ನ ನಡೆದಿದೆ. ಹಾಗಾಗಿ, ಈ ಶಿಬಿರದಲ್ಲಿಪಾಲ್ಗೊಂಡಿರುವ ವಿದ್ಯಾರ್ಥಿಗಳು ಬಿಡಿಸುವ ಚಿತ್ರ ನೋಡಿದರೆ, ವಿಕ ಸೂಪರ್ ಸ್ಟಾರ್ ರೈತ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬರುವ ರೈತರಿಗೇ ಪ್ರೇರಣೆ ನೀಡುವಂತೆ ಇರಬೇಕು. ಈ ನಿಟ್ಟಿನಲ್ಲಿಚಿತ್ರಕಲೆ ಬರೆಯಬೇಕು’’ ಎಂದು ಕಿವಿಮಾತು ಹೇಳಿದರು.

ಕೃಷಿ ಸಂದೇಶ ಚಿತ್ರಗಳಿರಲಿ:

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಧರಮೂರ್ತಿ ಮಾತನಾಡಿ, ‘‘ಉಳಿವಿಗಾಗಿ ಹೋರಾಟ ನಡೆಸುತ್ತಿರುವ ಹಿನ್ನೆಲೆ ಎಲ್ಲಾವಲಯಗಳಲ್ಲೂಸಮಸ್ಯೆಗಳು ಇದ್ದೇ ಇವೆ. ರೈತರ ಬಗ್ಗೆ ಬರೀ ಸಮಸ್ಯೆ ಅಥವಾ ತೊಂದರೆ ಬಗ್ಗೆ ವಿವರಿಸದೇ ಆಶಾದಾಯಕರನ್ನಾಗಿಸಿ, ಅವರನ್ನು ಹುರಿದುಂಬಿಸುವ ನಿಟ್ಟಿನಲ್ಲಿಕೃಷಿ ಸಂಬಂಧಿತ ಚಟುವಟಿಕೆ, ಬೆಳೆ, ಹೈನುಗಾರಿಕೆ, ಮೀನುಗಾರಿಕೆ, ಕುರಿ ಮತ್ತು ಕೋಳಿ ಸಾಕಣೆ ಒಳಗೊಂಡಂತೆ ಸಮಗ್ರ ಕೃಷಿ ಅಳವಡಿಸಿಕೊಳ್ಳುವ ಸಂದೇಶ ಸಾರುವ ನಿಟ್ಟಿನಲ್ಲಿಚಿತ್ರಗಳು ಮೂಡಿಬರಲಿ’’ ಎಂದು ಆಶಿಸಿದರು.

ಪ್ರಾಸ್ತಾವಿಕ ಮಾತನಾಡಿದ ವಿಕ ಸ್ಥಾನಿಕ ಸಂಪಾದಕ ಸದಾನಂದ ಹೆಗಡೆ ಮಾತನಾಡಿ, ‘‘ವಿಕ ಸೂಪರ್ ಸ್ಟಾರ್ ರೈತ ಪ್ರಶಸ್ತಿ ಪ್ರದಾನ ಸಮಾರಂಭದ ಅಂಗವಾಗಿ ಆಯೋಜಿಸಿದ ಚಿತ್ರಕಲಾ ಶಿಬಿರದಲ್ಲಿ10 ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದು, ರೈತರ ಚಿತ್ರಣವನ್ನು ಚಿತ್ರಕಲೆಯ ಮೂಲಕ ಕಟ್ಟಿಕೊಡಬೇಕಿದೆ. ಹಾಗಾಗಿ, ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಪ್ರೈಮರಿ ಕಲರ್ ನಲ್ಲಿಚಿತ್ರ ಬರೆಯದೇ, ಒಂದೇ ಪೇಂಟಿಂಗ್ ನಲ್ಲಿಹೊಲ, ಗದ್ದೆ, ಒಕ್ಕಲುತನ ಸೇರಿ ಕನಿಷ್ಠ ಮೂರು ಚಿತ್ರಗಳು ಸೆನ್ ಸಿಟಿವ್ ವರ್ಣಗಳ ಮೂಲಕ ಅರಳುವಂತೆ ನೋಡಿಕೊಳ್ಳಬೇಕು. ನೀವು ಬರೆದ ಚಿತ್ರಗಳನ್ನು ಪ್ರದರ್ಶನಕ್ಕೆ ಇಟ್ಟು, ಮೊದಲ ಮೂರು ಅತ್ಯುತ್ತಮ ಚಿತ್ರಕಲಾವಿದರನ್ನು ಗೌರವಿಸಲಾಗುವುದು’’ ಎಂದರು.

ಈ ವೇಳೆ ದೃಶ್ಯಕಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಜೈರಾಜ್ ಚಿಕ್ಕಪಾಟೀಲ್ , ಸುರೇಶ್ ಇತರರಿದ್ದರು.

-----

ಬಾಕ್ಸ್ ...

ಹೊಸತನಕ್ಕೆ ಪ್ರೇರಣೆ ನೀಡಲಿ

ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಸತೀಶ್ ಕುಮಾರ್ ವಲ್ಲೇಪುರ ಮಾತನಾಡಿ, ‘‘ನೀವು ಬರೆಯುವ ಚಿತ್ರಗಳು ಬದುಕು ಕಷ್ಟಕರ ಅನಿಸುವಂತೆ ಇರಬಾರದು. ಸರಳ ಎನಿಸುವಂತೆ ಅನಾವರಣಗೊಳಿಸಿ ರೈತರಲ್ಲಿಸಕಾರಾತ್ಮ ಚಿಂತನೆ ಬೆಳೆಸುವಂತಿರಬೇಕು. ಕೃಷಿಯಲ್ಲಿಹೊಸತನ ಮೈಗೂಡಿಸಿಕೊಳ್ಳಲು ಪ್ರೇರಣೆ ನೀಡಬೇಕು. ಆಲೋಚನೆಯಿಂದ ಕಲೆಯಲ್ಲಿಹೊಸತನ ಅಥವಾ ಸೃಜನಶೀಲತೆ ಬರಲು ಸಾಧ್ಯ. ಹಾಗಾಗಿ, ಯಾವುದೇ ಕಾರಣಕ್ಕೂ ಎಐ ತಂತ್ರಜ್ಞಾನ ಬಳಸದೇ ರೈತ ಅಥವಾ ಕೃಷಿಕ ನಿಮ್ಮ ಅನುಭವದ ಮೂಸೆಯಲ್ಲಿಮೂಡಿಬರಬೇಕು’’ ಎಂದು ಸಲಹೆ ನೀಡಿದರು.

-----

13ಡಿವಿಜಿ ಚಿತ್ರಕಲೆ1, ಚಿತ್ರಕಲೆ2

ದಾವಣಗೆರೆಯ ದೃಶ್ಯಕಲಾ ಕಾಲೇಜಿನಲ್ಲಿವಿಜಯ ಕರ್ನಾಟಕ ದಿನಪತ್ರಿಕೆಯಿಂದ ಬುಧವಾರ ಏರ್ಪಡಿಸಿದ್ದ ಚಿತ್ರಕಲಾ ಶಿಬಿರಕ್ಕೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರಾಘವೇಂದ್ರ ಪ್ರಸಾದ್ , ಕೃಷಿ ಸಹಾಯಕ ನಿರ್ದೇಶಕ ಶ್ರೀಧರ್ ಮೂರ್ತಿ ಹಾಗೂ ಕಾಲೇಜಿನ ಪ್ರಾಚಾರ್ಯ ಸತೀಶ್ ಕುಮಾರ್ ವಲ್ಲೇಪುರೆ ವಿದ್ಯಾರ್ಥಿಗಳಿಗೆ ಚಿತ್ರ ಬಿಡಿಸಲು ಕ್ಯಾನವಸ್ ಹಸ್ತಾಂತರಿಸಿ ಚಾಲನೆ ನೀಡಿದರು.