ಕಧಿಲಿತ ಕೌಧಿಶಲ ನಿಧಿರಂತರ ಅಧಿಳಧಿವಧಿಡಿಧಿಸಿಧಿಕೊಳ್ಳಿ
ವಿಕ ಸುದ್ದಿಲೋಕ ಬಳ್ಳಾರಿ
‘ಧಿ‘‘ ಮಕ್ಕಳು ತಾವು ಕಲಿತ ಕಲೆಗಳನ್ನು ಮರೆಯದೆ ನಿರಂತರವಾಗಿ ಅಭ್ಯಾಸ ಮಾಡುವ ಮೂಲಕ ತಮ್ಮ ಕೌಶಲಗಳನ್ನು ವೃದ್ಧಿಸಿಕೊಳ್ಳಬೇಕು,’ಧಿ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಸವಿತಾ ಸಿ. ಹೇಳಿದರು.
ಇಲ್ಲಿನ ಪಾರ್ವತಿ ನಗರದ 2ನೇ ಕ್ರಾಸ್ ನಲ್ಲಿರುವ ಸರಕಾರಿ ಕನ್ನಡ ಮಾಧ್ಯಮ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಜ್ಯ ಬಾಲಭವನ ಸೊಸೈಟಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ5 ರಿಂದ 16 ವರ್ಷದ ಮಕ್ಕಳಿಗೆ ಆಯೋಜಿಸಿದ್ದ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿಮಂಗಳವಾರ ಮಾತನಾಡಿದರು.
‘ಧಿ‘ಶಿಬಿರದಲ್ಲಿ15 ದಿನಗಳವಧಿರೆಗೆ ನಾನಾ ಸಂಪನ್ಮೂಲ ವ್ಯಕ್ತಿಗಳಿಂದ ಪಡೆದ ತರಬೇತಿಯನ್ನು ಕೇವಲ ಶಿಬಿರಕ್ಕೆ ಸೀಮಿತಗೊಳಿಸಬಾರದು. ಬದಲಾಗಿ ನಿರಂತರ ಅಭ್ಯಸಿಸುತ್ತಿರಬೇಕು,’ಧಿ’ ಎಂದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ತ್ರಿವೇಣಿ ಪತ್ತಾರ್ ಮಾತನಾಡಿದರು. ಶಿಬಿರದ ಅವಧಿಯಲ್ಲಿಚಿತ್ರಕಲೆ, ಕರಕುಶಲ, ಜೇಡಿಮಣ್ಣಿನ ಕಲೆ, ಸಮೂಹ ನೃತ್ಯ, ಸಂಗೀತ, ಯೋಗ ಹಾಗೂ ಕರಾಟೆ ಪ್ರದರ್ಶನ ಎಲ್ಲರ ಗಮನ ಸೆಳೆದವು. ಶಿಬಿರದಲ್ಲಿಅತ್ಯುತ್ತಮ ಪ್ರದರ್ಶನ ನೀಡಿದ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಿ ಗೌರವಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಕ್ಕಳಿಗೆ ಮಾರ್ಗದರ್ಶನ ನೀಡಿದ ಮಲ್ಲಿಕಾರ್ಜುನ (ಚಿತ್ರಕಲೆ/ಕರಕುಶಲೆ), ಕವಿತಾ (ಸಂಗೀತ), ನಾಗರಾಜ ಕೆ.(ಚದುರಂಗ), ಪ್ರಕಾಶ್ (ಯೋಗ) ಹಾಗೂ ಮನೋಜ್ (ಕರಾಟೆ) ಅವರಿಗೆ ಸನ್ಮಾನಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಎಳೆನಾಗಪ್ಪ, ಶಾಲಾ ಶಿಕ್ಷಣ ಇಲಾಖೆಯ ಕೋಟ್ರೇಶ್ , ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ವೆಂಕಟೇಶ್ , ಎಫ್ .ಗೌಸಿಯಾ, ಜಿಲ್ಲಾ ವ್ಯವಸ್ಥಾಪಕ ಜಗನ್ನಾಥ ಕೆ. ಇದ್ದರು.
---
13 ಬಿಎಲ್ ವೈ ಪೀರಾಸಾಬ್ 02
ಬಳ್ಳಾರಿ ಪಾರ್ವತಿ ನಗರದ 2ನೇ ಕ್ರಾಸ್ ನ ಸರಕಾರಿ ಕನ್ನಡ ಮಾಧ್ಯಮ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನಡೆದ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಧಿಲಾಧಿಯಿತು.

