ಉಗುರುಗಳ ಮೇಲೆ ತಿಳಿ ಬಣ್ಣಗಳ ಚಿತ್ತಾರ
ಸ್ಲಗ್ : ಬೇಸಿಗೆಯ ಬೆಡಗು
ಇಂಟ್ರೊ: ಬೇಸಿಗೆಯ ನೇಲ್ ಆರ್ಟ್ ನಲ್ಲಿಪಾಸ್ಟಲ್ ಬಣ್ಣಗಳಲ್ಲಿಅರಳಿದ ಹೂಗಳು ಆಕರ್ಷಣೆ ಹೆಚ್ಚಿಸಿಕೊಂಡಿವೆ.
ಪ್ರತಿ ವರ್ಷದ ಬೇಸಿಗೆಯಲ್ಲಿಹೂವಿನ ವಿನ್ಯಾಸಗಳು ಫ್ಯಾಷನ್ ಲೋಕದಲ್ಲಿಮರಳಿ ಬಂದು ಮೋಡಿ ಮಾಡುತ್ತವೆ. ಸದ್ಯ ಬೆರಳ ತುದಿಗೆ ಕುಳಿತ ಹೂಗಳು ಹೆಣ್ಣುಮಕ್ಕಳನ್ನು ಸೆಳೆಯುತ್ತಿವೆ.
ಹೂಗಳ ಚಿತ್ತಾರ ಒಳಗೊಂಡ ನೇಲ್ ಆರ್ಟ್ ಗಳು ಆಗಾಗ ಸೆಳೆಯುತ್ತವೆ. ಅದರಲ್ಲೂಸೀಸನ್ ಗೆ ತಕ್ಕಂತೆ ಹೂಗಳ ಬಣ್ಣ, ವಿನ್ಯಾಸವೂ ಬದಲಾಗುತ್ತದೆ. ಈ ವರ್ಷದ ಬೇಸಿಗೆಗೆ ನೇಟ್ ಆರ್ಟ್ ನಲ್ಲಿಪಾಸ್ಟೆಲ್ ಫ್ಲೋರಲ್ ಆರ್ಟ್ ಟ್ರೆಂಡಿಂಗ್ ನಲ್ಲಿದೆ. ಕಣ್ಣಿಗೆ ತಂಪೆನಿಸುವ ಪಾಸ್ಟೆಲ್ ಬಣ್ಣಗಳು ಮತ್ತು ಪಾರದರ್ಶಕ ಹೂವಿನ ವಿನ್ಯಾಸಗಳು ಈ ಬೇಸಿಗೆಗೆ ಫ್ಯಾಷನ್ ಪ್ರಿಯರ ಫೇವರಿಟ್ .
ಸೌಮ್ಯ ವಿನ್ಯಾಸ
ಹಿಂದಿನ ಕಾಲದಂತೆ ಉಗುರುಗಳ ತುಂಬಾ ದೊಡ್ಡ ಹೂವಿನ ಚಿತ್ರಗಳನ್ನು ಬಿಡಿಸುವ ಬದಲು, ಈ ಬಾರಿ ವಿಸ್ಪರ್ ಸಾ´್ಟ… ಶೈಲಿಗೆ ಮನ್ನಣೆ ಸಿಗುತ್ತಿದೆ. ಕೇವಲ ಒಂದು ಉಗುರಿನ ಮೇಲೆ ಹೂವಿನ ಚಿತ್ರ ಬಿಡಿಸುವುದು ಅಥವಾ ಫ್ರೆಂಚ್ ಟಿಫ್ಸ್ ಗಳಲ್ಲಿಸಣ್ಣ ಹೂವಿನ ವಿನ್ಯಾಸಗಳನ್ನು ಮೂಡಿಸುವುದು ಈಗಿನ ಟ್ರೆಂಡ್ . ಇವು ನೋಡಲು ಎಲೆಗಂಟ್ ಆಗಿ ಕಾಣಿಸುತ್ತವೆ.
ಬಣ್ಣಗಳ ಆಯ್ಕೆ
ಈ ಸೀಸನ್ ನಲ್ಲಿಬಳಸುವ ಬಣ್ಣಗಳು ಬೇಬಿ ಪಿಂಕ್ , ಮಿಂಟ್ ಗ್ರೀನ್ , ಬಟರ್ ಯೆಲ್ಲೋ ಮತ್ತು ಪಿಸ್ತಾ ಕ್ರೀಮ್ . ಈ ಬಣ್ಣಗಳು ಕೈಗಳಿಗೆ ಹೊಳಪನ್ನು ನೀಡುವುದಲ್ಲದೆ, ಯಾವುದೇ ಬಟ್ಟೆಗಳಿಗೂ ಸುಲಭವಾಗಿ ಒಪ್ಪುತ್ತವೆ.
ವಿಶೇಷತೆ
ಉಗುರುಗಳು ಗಾಜಿನಂತೆ ಪಾರದರ್ಶಕವಾಗಿ ಕಾಣುವುದರಲ್ಲೇ ಈ ಟ್ರೆಂಡ್ ನ ಸೌಂದರ್ಯ ಅಡಗಿದೆ. ಉಗುರಿನ ಮೇಲೆ ತಿಳಿಯಾದ ಜೆಲ್ಲಿಪಾಲಿಶ್ ಹಚ್ಚಿ, ಅದರ ಮೇಲೆ ಒಣಗಿದ ಪುಟ್ಟ ಹೂವುಗಳನ್ನು ಮೂಡಿಸಿದರೆ ಅವು ನೀರಿನೊಳಗೆ ತೇಲುತ್ತಿರುವಂತೆ ಭಾಸವಾಗುತ್ತವೆ. ಉಗುರಿನ ಮಧ್ಯಭಾಗದಲ್ಲಿತಿಳಿ ಗುಲಾಬಿ ಅಥವಾ ಪೀಚ್ ಬಣ್ಣವನ್ನು ಹರಡಿ ಅದರ ಅಂಚಿನಲ್ಲಿಬಿಳಿ ಬಣ್ಣದ ಪುಟ್ಟ ಹೂವುಗಳನ್ನು ಬಿಡಿಸುವುದು ಈಗಿನ ಲೇಟೆಸ್ವ್ ಕ್ರೇಜ್ . ಇದು ಉಗುರುಗಳಿಗೆ ಒಂದು ರೀತಿಯ ನೈಸರ್ಗಿಕ ಮತ್ತು ತಾಜಾ ನೋಟವನ್ನು ನೀಡುತ್ತದೆ. ಹೂವಿನ ದಳಗಳು ಸ್ವಲ್ಪ ಉಬ್ಬಿದಂತೆ ಕಾಣುವ ತ್ರಿ ಡಿ ಶೈಲಿ ಈ ಸಮ್ಮರ್ ನ ಸ್ಪೆಷಲ್ . ವೆಲ್ವೆಟ್ ಶೈಲಿಯ ಮ್ಯಾಟ್ ಫಿನಿಶ್ ಮತ್ತು ಮೈಕ್ರೋ ಶಿಮ್ಮರ್ ಬಳಸಿ ಉಗುರುಗಳಿಗೆ ಒಂದು ವಿಭಿನ್ನ ಆಯಾಮ ನೀಡಲಾಗುತ್ತಿದೆ. ಇನ್ನೂ ಹಲವು ಬಗೆಯ ತಂತ್ರಜ್ಞಾನ ಒಳಗೊಂಡ ಈ ನೇಲ್ ಆರ್ಟ್ ಕೇವಲ ರಜೆ ಅಥವಾ ಪ್ರವಾಸಗಳಿಗೆ ಮಾತ್ರವಲ್ಲದೆ, ಮದುವೆ ಸಮಾರಂಭಗಳಲ್ಲೂಮೋಡಿ ಮಾಡಿವೆ. ಅತಿಯಾದ ಅಲಂಕಾರವಿಲ್ಲದೆ ಸರಳ ಲುಕ್ ಗೆ ಈ ಶೈಲಿ ಸೂಕ್ತ.
////////////////

