(ವಿಕ ಇಂಪ್ಯಾಕ್ಟ್)
ವಿಠಲಕುಂಟೆ ಪುಷ್ಕರಣಿಗೆ ನಗರಸಭಾ ಆಯುಕ್ತರ ಭæೕಟಿ
ವಿಕ ಸುದ್ದಿಲೋಕ ಮುಳಬಾಗಲು
ನಗರದ ಅಗ್ರಹಾರದಲ್ಲಿರುವ ವಿಠಲಕುಂಟೆ ಪುಷ್ಕರಣಿಗೆ ನಗರಸಭಾ ಆಯುಕ್ತ ಆಂಜನೇಯಲು ಭæೕಟಿ ನೀಡಿ ಪರಿಶೀಲಿಸಿದರು.
ಕಣ್ಣಿಗೆ ರಾಚುತ್ತಿರುವ ಪುಷ್ಕರಣಿ ಪಾಚಿ ಎಂಬ ಶೀರ್ಷಿಕೆಯಡಿ ವಿಕದಲ್ಲಿಪ್ರಕಟವಾದ ಲೇಖನವನ್ನು ಓದಿದ ನಂತರ ವಿಠಲಕುಂಟೆಗೆ ಭæೕಟಿ ನೀಡಿ ಪರಿಶೀಲಿಸಿದ ನಂತರ ಅವರು ಮಾತನಾಡಿ, ವಿಠಲಕುಂಟೆ ತನ್ನದೇ ಆದ ವæೖಶಿಷ್ಟ್ಯದಿಂದ ಕೂಡಿದæ. ಇದರ ಸುತ್ತ ಮುತ್ತ ದೇವಾಲಯಗಳು ಇರುವ ಕಾರಣ ತ್ವರಿತವಾಗಿ ಕುಂಟೆಯಲ್ಲಿಇರುವ ಪಾಚಿ ಹಾಗೂ ಗಲೀಜನ್ನು ತೆರವುಗೊಳಿಸಿ, ಬೇಲಿಗೆ ಗೇಟ್ ಅಳವಡಿಸಿ ಬೀಗ ಹಾಕಲಾಗುವುದು. ವಿಠಲ ಕುಂಟೆಗೆ ಯಾರಾದರೂ ತ್ಯಾಜ್ಯ ವಸ್ತುಗಳನ್ನು ಬಿಸಾಡಿರುವ ಬಗ್ಗೆ ಮಾಹಿತಿ ಬಂದ ತಕ್ಷಣ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ವಿಠಲ ಕುಂಟೆ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿನಗರಸಭೆ ಎಲ್ಲಾರೀತಿಯ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ತಿಳಿಸಿದರು.
ಕಂದಾಯ ಅಧಿಕಾರಿ ನಾರಾಯಣ್ , ನಗರಸಭಾ ಮಾಜಿ ಸದಸ್ಯ ಹೆಚ್ .ಎಸ್ . ಹರೀಶ್ ಇದ್ದರು.
13 ಎಂ.ಬಿ.ಎಲ್ ಪೋಟೋ 2 ಮುಳಬಾಗಲು ನಗರದ ಅಗ್ರಹಾರದಲ್ಲಿರುವ ವಿಠಲಕುಂಟೆಗೆ ನಗರಸಭಾ ಆಯುಕ್ತ ಆಂಜನೇಯಲು ಬೇಟಿ ನೀಡಿ ಪರಿಶೀಲಿಸಿದರು

