ಅನಾರು ಶಾಲೆಯಲ್ಲಿಚಿಣ್ಣರ ಚಿತ್ತಾರ

Contributed byprashantha.n17@gmail.com|Vijaya Karnataka

ಕೊಕ್ಕಡಪಟ್ರಮೆಯ ಅನಾರು ಶಾಲೆಯಲ್ಲಿ ಎರಡು ದಿನಗಳ ಚಿಣ್ಣರ ಚಿತ್ತಾರ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಮಕ್ಕಳು ಹಾಡು, ನೃತ್ಯ, ಚಿತ್ರಕಲೆ, ಕಾಗದದ ಕ್ರಾಫ್ಟ್ ಸೇರಿದಂತೆ ಹಲವು ಸೃಜನಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಂಡರು. ಸುಮಾರು 75ಕ್ಕೂ ಅಧಿಕ ಮಕ್ಕಳು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದರು. ಡಿವೈಎಫ್‌ಐ, ಎಸ್‌ಎಫ್‌ಐ ಹಾಗೂ ಬಾಲಸಂಘದ ವತಿಯಿಂದ ಮಕ್ಕಳಿಗೆ ಪುಸ್ತಕ ಮತ್ತು ಪೆನ್‌ಗಳನ್ನು ವಿತರಿಸಲಾಯಿತು.

exciting childrens art event captivates at anaru school

ವಿಕ ಸುದ್ದಿಲೋಕ ಕೊಕ್ಕಡ

ಪಟ್ರಮೆಯ ಅನಾರು ಶಾಲೆಯಲ್ಲಿಎರಡು ದಿನಗಳ ಕಾಲ ನಡೆದ ಚಿಣ್ಣರ ಚಿತ್ತಾರ ಕಾರ್ಯಕ್ರಮ ಮಕ್ಕಳ ಕಲರವ, ಸೃಜನಶೀಲತೆ ಹಾಗೂ ಪೋಷಕರ ಸಂಭ್ರಮದ ನಡುವೆ ಯಶಸ್ವಿಯಾಗಿ ಸಮಾರೋಪಗೊಂಡಿತು.

ಸಂಪನ್ಮೂಲ ವ್ಯಕ್ತಿಗಳು ಮಕ್ಕಳಿಗೆ ಹಾಡು, ನೃತ್ಯ, ಚಿತ್ರಕಲೆ, ಕಾಗದದ ಕ್ರಾಫ್ಟ್ , ಮಕ್ಕಳ ಕಥೆಗಳು ಸೇರಿದಂತೆ ಹಲವು ಸೃಜನಾತ್ಮಕ ಚಟುವಟಿಕೆಗಳನ್ನು ನಡೆಸಿಕೊಟ್ಟು ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತಂದರು. ಸುಮಾರು 75ಕ್ಕೂ ಅಧಿಕ ಮಕ್ಕಳು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಯಂತ ಪಾದೇಜಾಲು ವಹಿಸಿದ್ದರು. ಸಂಪನ್ಮೂಲ ಗುರುಗಳಾದ ನ್ಯಾಯವಾದಿ ಮನೋಜ್ ವಾಮಂಜೂರು, ಅಭಿಷೇಕ್ ಪದ್ಮುಂಜ, ನ್ಯಾಯವಾದಿ ಬಿ.ಎಂ. ಭಟ್ , ಅನಾರು ಚಂದ್ರಶೇಖರ ಗೌಡ, ಆನಂದ ನಾಯ್ಕ ಎಲಿಕ್ಕಳ, ಕಾರ್ಯಕ್ರಮದ ಆಯೋಜನೆಯಲ್ಲಿಶ್ರಮ ವಹಿಸಿದ್ದ ವಿನುಶರಮಣ ಬೋಳೋಡಿ ಹಾಗೂ ಶಾಲಾ ಶಿಕ್ಷಕ ಜಯಂತ ಉಪಸ್ಥಿತರಿದ್ದರು.

ಶ್ರೇಯ ಸ್ವಾಗತಿಸಿದರು. ಸಾಕ್ಷಿ ಬೋಳೋಡಿ ಕಾರ್ಯಕ್ರಮ ನಿರೂಪಿಸಿದರು. .ಚಿರಾಕ್ಷಿ ವಂದಿಸಿದರು. ಸಭಾ ಕಾರ್ಯಕ್ರಮವನ್ನು ಪುಟಾಣಿ ಮಕ್ಕಳೇ ನಿರ್ವಹಿಸಿದ್ದು ವಿಶೇಷ ಆಕರ್ಷಣೆಯಾಯಿತು.

ಚಿಣ್ಣರ ಚಿತ್ತಾರ ಪ್ರಾಯೋಜಕರಾದ ಡಿವೈಎಫ್ ಐ, ಎಸ್ ಎಫ್ ಐ ಹಾಗೂ ಬಾಲಸಂಘದ ವತಿಯಿಂದ ಮಕ್ಕಳಿಗೆ ಪುಸ್ತಕ ಮತ್ತು ಪೆನ್ ಗಳನ್ನು ವಿತರಿಸಲಾಯಿತು.

ಫೋಟೋ :25ಕೆಎನ್ ಅನಾರು

ಅನಾರು ಶಾಲೆಯಲ್ಲಿಎರಡು ದಿನಗಳ ಚಿಣ್ಣರ ಚಿತ್ತಾರ ಕಾರ್ಯಕ್ರಮ ನಡೆಯಿತು.