ನಾನ್ ಸಿನಿಮಾ 2

Contributed bybabitha.salian@timesgroup.com|Vijaya Karnataka

ನಟಿ ಜೀನತ್‌ ಅಮಾನ್‌ ತಮ್ಮ ವೈವಾಹಿಕ ಜೀವನದ ಕಷ್ಟಗಳನ್ನು ಹಂಚಿಕೊಂಡಿದ್ದಾರೆ. 1988ರಲ್ಲಿ 'ಗವಾಹಿ' ಚಿತ್ರದ ಚಿತ್ರೀಕರಣದ ವೇಳೆ, ಮದುವೆ ಮತ್ತು ಮಾತೃತ್ವದ ನಂತರ ವೈಯಕ್ತಿಕ ಜೀವನದಲ್ಲಿ ಸಮಸ್ಯೆ ಎದುರಾಗಿತ್ತು. ತಾಯಿಯ ಬೆಂಬಲದಿಂದಾಗಿ ಅವರು ಮತ್ತೆ ಚಿತ್ರರಂಗಕ್ಕೆ ಮರಳಲು ಸಾಧ್ಯವಾಯಿತು. ತಮ್ಮ ಮಗ ಅಜಾನ್‌ಗೆ ತಾಯಿ ನೋಡಿಕೊಳ್ಳುವುದಾಗಿ ಹೇಳಿ, ವೃತ್ತಿ ಮುಂದುವರಿಸಲು ಪ್ರೋತ್ಸಾಹ ನೀಡಿದರು.

zeenat aman challenges of gawah and maternal support

ಅಮ್ಮನ ಆಸರೆ (ಸ್ಲಗ್ )

ಬೋಲ್ಡ್ ಜೀನತ್ ಗೂ ತಪ್ಪದ ಸಾಂಸಾರಿಕ ಬವಣೆ

ಲವಲವಿಕೆ ಸುದ್ದಿಲೋಕ

ಎಂಬತ್ತರ ದಶಕದಲ್ಲಿತೆರೆಯ ಮೇಲೆ ‘ದಮ್ ಮಾರೋ ದಮ್ ’ ಹಾಡಿನಲ್ಲಿಬೋಲ್ಡ್ ಆಗಿ ನರ್ತಿಸಿ ಯುವಜನತೆಯಲ್ಲಿಕಿಚ್ಚು ಹಚ್ಚಿಸಿದ್ದ, ‘ಸತ್ಯಂ ಶಿವಂ ಸುಂದರಂ’ನಲ್ಲಿಸಿನಿಮಾದಲ್ಲಿಸಾಂಪ್ರದಾಯಿಕ ಲುಕ್ ನಲ್ಲಿಯೂ ಮಾದಕವಾಗಿ ಕಾಣಿಸಿ ಸಂಪ್ರದಾಯಸ್ಥರ ಕೆಂಗಣ್ಣಿಗೆ ಗುರಿಯಾಗಿದ್ದ, ಪಾಶ್ಚಿಮಾತ್ಯ ನಡೆ, ನುಡಿ, ಪೋಷಾಕು, ಸ್ಟೈಲ್ ಮೂಲಕ ಹಿಂದಿ ಚಿತ್ರರಂಗದಲ್ಲಿಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದ್ದ ನಟಿ, ಮಾಡೆಲ್ ಜೀನತ್ ಅಮಾನ್ ರಿಗೂ ಸಾಂಸಾರಿಕ ಸಮಸ್ಯೆಗಳು ತಪ್ಪಿಲ್ಲವಂತೆ.

ಇತ್ತೀಚೆಗೆ ಈ ಹಿರಿಯ ನಟಿಯು ಇನ್ ಸ್ಟಾದಲ್ಲಿಹಳೆಯ ಸಂದರ್ಶನದ ವಿಡಿಯೊ ತುಣುಕೊಂದನ್ನು ಶೇರ್ ಮಾಡಿ ತಮ್ಮ ಮೊದಲ ಮಗ ಅಜಾನ್ ಹುಟ್ಟಿದ ನಂತರ ತಾವು ಮತ್ತೆ ಚಿತ್ರರಂಗಕ್ಕೆ ಮರಳಲು ತಮ್ಮ ತಾಯಿಯ ಬೆಂಬಲವೇ ಕಾರಣ ಎಂದು ಕೃತಜ್ಞತೆ ಸಲ್ಲಿಸಿ 1988ರಲ್ಲಿತೆರೆಕಂಡ ‘ಗವಾಹಿ’ ಚಿತ್ರದ ಶೂಟಿಂಗ್ ಸಮಯದಲ್ಲಿತಾವು ವೈವಾಹಿಕ ಜೀವನದಲ್ಲಿಎದುರಿಸುತ್ತಿದ್ದ ಕಷ್ಟಗಳು ಮತ್ತು ವೈಯಕ್ತಿಕ ಜೀವನದಿಂದ ಕೆಲಕಾಲ ದೂರವಿರಲು ಬಯಸಿದ್ದರ ಬಗ್ಗೆ ಮುಕ್ತವಾಗಿ ಬರೆದುಕೊಂಡಿದ್ದಾರೆ.

‘ಗವಾಹಿ ಚಿತ್ರೀಕರಣ ನಡೆದಿದ್ದು 1988ರಲ್ಲಿ. ಅಂದರೆ ನನ್ನ ಮೊದಲ ಮಗ ಅಜಾನ್ ಹುಟ್ಟಿದ ಎರಡು ವರ್ಷಗಳ ನಂತರ ಮತ್ತು ನನ್ನ ಎರಡನೇ ಮಗ ಜಹಾನ್ ಹುಟ್ಟುವುದಕ್ಕಿಂತ ಸ್ವಲ್ಪ ಮುಂಚೆ. ನನ್ನ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ನಾನು ಕಲ್ಪಿಸಿಕೊಂಡಿದ್ದ ಗೃಹಸ್ಥ ಜೀವನದ ಸುಂದರ ಚಿತ್ರಣವು ಈ ಹಂತದಲ್ಲಿಮಸುಕಾಗಲು ಪ್ರಾರಂಭಿಸಿತ್ತು. ಮದುವೆ ಮತ್ತು ಮಾತೃತ್ವ ಎರಡೂ ಒಟ್ಟಿಗೇ ಬಂದಿದ್ದವು, ವೈವಾಹಿಕ ಜೀವನದಲ್ಲಿಬಿರುಕುಗಳು ಕಾಣಿಸಿಕೊಳ್ಳಲು ಶುರುವಾಗಿದ್ದವು. ನಾನು ನನ್ನ ಪುಟ್ಟ ಮಗ ಅಜಾನ್ ನನ್ನು ಕರೆದುಕೊಂಡು ದಕ್ಷಿಣ ಮುಂಬಯಿಯಲ್ಲಿದ್ದ ನನ್ನ ತಾಯಿಯ ಮನೆಗೆ ಹೋಗಿ ಅವರ ಜೊತೆ ವಾಸಿಸುತ್ತಿದ್ದೆ. ಆಗ ಅನಿರೀಕ್ಷಿತವಾಗಿ ಒಂದು ಉತ್ತಮ ಚಿತ್ರಕಥೆ ನನ್ನ ಮನೆ ಬಾಗಿಲಿಗೆ ಬಂತು. ಒಂದು ಕಾಲದಲ್ಲಿನನ್ನ ವೃತ್ತಿ ಜೀವನದಿಂದ ದೂರ ಓಡಲು ಬಯಸಿದ್ದ ನಾನು ಆ ಸಮಯದಲ್ಲಿನನ್ನ ವೈಯಕ್ತಿಕ ಜೀವನದಿಂದ ತಪ್ಪಿಸಿಕೊಳ್ಳಲು ಬಯಸಿದ್ದೆ! ಮಗಳು, ತಾಯಿ, ಹೆಂಡತಿ ಎಂಬ ಗುರುತಿನ ಆಚೆಗೂ ನನಗೊಂದು ಸ್ವಂತ ಅಸ್ತಿತ್ವವಿದೆ ಎಂಬುದನ್ನು ನೆನಪಿಸಿಕೊಳ್ಳಬೇಕಿತ್ತು. ಆಗ ನನ್ನ ಅದ್ಭುತ ಅಮ್ಮ ನನ್ನ ನೆರವಿಗೆ ನಿಂತರು. ಅಜಾನ್ ನನ್ನು ನಾನು ನೋಡಿಕೊಳ್ಳುತ್ತೇನೆ, ನೀನು ವೃತ್ತಿ ಮುಂದುವರಿಸು ಎಂದರು. ಇದರಿಂದಾಗಿ ನನಗೆ ‘ಗವಾಹಿ’ ಚಿತ್ರದಲ್ಲಿನಟಿಸಲು ಸಾಧ್ಯವಾಯಿತು’ ಎಂದಿದ್ದಾರೆ ಜೀನತ್ ಅಮಾನ್ .