(ಈ ಸುದ್ದಿಗೆ 500 ಸ್ಪಾನ್ಸರ್ ಕಾಪಿಗಳು ಬುಕ್ ಆಗಿವೆ)
ಜಲಸಿದ್ದೇಶ್ವರನ ಪ್ರಾರ್ಥನೆಗೆ ಸಿಕ್ಕಿತು ಫಲ
ಡಿಕೆಶಿ ಸಿಎಂ ಆಗಲಿ ಎಂದು 6 ತಿಂಗಳ ಹಿಂದೆಯೇ ವಿಶೇಷ ಪೂಜೆ ಸಲ್ಲಿಸಿದ್ದ ಯುವ ಕಾಂಗ್ರೆಸ್ ಮುಖಂಡರು
ವಿಕ ಸುದ್ದಿಲೋಕ, ರಾಮನಗರ: ಕಳೆದ ಆರು ತಿಂಗಳ ಹಿಂದೆಯೇ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಎಂದು ತಾಲೂಕಿನ ಬಿಳಗುಂಬ ಗ್ರಾಮದ ಜಲಸಿದ್ದೇಶ್ವರ ಸ್ವಾಮಿ ದೇವಾಲಯದಲ್ಲಿಯುವ ಕಾಂಗ್ರೆಸ್ ಮುಖಂಡರು ಸಲ್ಲಿಸಿದ್ದ ಪ್ರಾರ್ಥನೆಗೆ ಫಲ ದೊರೆತಿದೆ ಎಂದು ಯುವ ಕಾಂಗ್ರೆಸ್ ಜಿಲ್ಲಾಪ್ರಧಾನ ಕಾರ್ಯದರ್ಶಿ ಸಂತೋಷ್ ಆರ್ . ಬಿಳಗುಂಬ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ವಿಕದೊಂದಿಗೆ ಮಾತನಾಡಿದ ಅವರು, 40 ವರ್ಷದಿಂದ ಪಕ್ಷಕ್ಕಾಗಿ ನಿಸ್ವಾರ್ಥವಾಗಿ ದುಡಿದ ನೆಚ್ಚಿನ ನಾಯಕ ಡಿ.ಕೆ.ಶಿವಕುಮಾರ್ ಅವರ ದುಡಿಮೆಗೆ ತಕ್ಕ ಪ್ರತಿಫಲವನ್ನು ನಮ್ಮ ಹೈಕಮಾಂಡ್ ನೀಡಿದೆ. ಶೀಘ್ರದಲ್ಲೇ ನಮ್ಮ ನಾಯಕರು ಮುಖ್ಯಮಂತ್ರಿ ಹುದ್ದೆ ಅಲಂಕರಿಸಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂದರು.
ನಾಯಕತ್ವ ಗೊಂದಲ ಏರ್ಪಟ್ಟ ಸಮಯದಲ್ಲಿಮೊದಲ ಬಾರಿಗೆ ರಾಮನಗರದಲ್ಲಿಡಿ.ಕೆ. ಶಿವಕುಮಾರ್ ಅವರ ಪರ ಯುವ ಕಾಂಗ್ರೆಸ್ ಕಾರ್ಯಕರ್ತರು ಧ್ವನಿ ಎತ್ತಿದ್ದರು. ಶಿವಕುಮಾರ್ ಅವರ ಕಾರ್ಯವೈಖರಿ ಯುವ ಕಾರ್ಯಕರ್ತರಿಗೆ ಪ್ರೇರಣೆಯಾಗಿದೆ. 2025ರ ನವೆಂಬರ್ ನಲ್ಲಿನಾವು ಬಿಳಗುಂಬ ಗ್ರಾಮದ ಶಕ್ತಿ ದೈವ ಜಲಸಿದ್ದೇಶ್ವರ ಸ್ವಾಮಿ ದೇವಾಲಯದಲ್ಲಿವಿಶೇಷ ಪೂಜೆ ಏರ್ಪಡಿಸಿದ್ದೆವು. ನಮ್ಮ ನಾಯಕರಿಗೆ ಮುಖ್ಯಮಂತ್ರಿ ಹುದ್ದೆ ದೊರೆಯಲಿ ಎಂದು ದೇವರಲ್ಲಿಪ್ರಾರ್ಥನೆ ಸಲ್ಲಿಸಿದ್ದೆವು.
ಪಕ್ಷವನ್ನು ಮುನ್ನಡೆಸಿದ ರೀತಿಯಲ್ಲಿಮುಂದೆ 10 ವರ್ಷ ರಾಜ್ಯವನ್ನು ಯಶಸ್ವಿಯಾಗಿ ಮುನ್ನಡೆಸಲಿದ್ದಾರೆ. ಬಡ ಮತ್ತು ಮಧ್ಯಮ ವರ್ಗದ ಆರ್ಥಿಕ ಬೆನ್ನೆಲುಬಾಗಿರುವ ಗ್ಯಾರಂಟಿ ಯೋಜನೆಗಳನ್ನು ಮುನ್ನಡೆಸುವುದರ ಜತೆಗೆ ಯಶಸ್ವಿಯಾಗಿ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಅಭಿವೃದ್ಧಿಗೆ ಈಗ ಮತ್ತಷ್ಟು ವೇಗ ದೊರೆಯಲಿದೆ. ಜನ ನಮ್ಮ ನಾಯಕರ ಮೇಲೆ ಇಟ್ಟಿರುವ ಎಲ್ಲಭರವಸೆಗಳನ್ನು ಈಡೇರಿಸಲಿದ್ದಾರೆ. ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿವಸತಿ, ನಿವೇಶನ ರಹಿತ ಬಡವರಿಗೆ ಶೀಘ್ರದಲ್ಲೇ ನಿವೇಶನ ದೊರೆಯಲಿದೆ. ಜಿಲ್ಲೆಗೆ ಇನ್ನೂ ಹೆಚ್ಚಿನ ಅನುದಾನ ದೊರೆಯಲಿದೆ ಎಂದರು.
ಯುವ ಮುಖಂಡರಾದ ಸುನೀಲ್ , ಬಿಳಗುಂಬದ ವಿಥುನ್ , ಶ್ರೀಧರ್ (ಸಿದ್ದು), ರಾಮು, ಸುದೀಪ್ , ಗ್ರಾಪಂ ಮಾಜಿ ಸದಸ್ಯ ಕೆಂಚೇಗೌಡ, ಬಿಳಗುಂಬ ಗ್ರಾಮದ ಮಾಜಿ
ಅಧ್ಯಕ್ಷರಾದ ನವೀನ್ ಗೌಡ, ಸದಸ್ಯ ಶಿವಲಿಂಗ, ಹಿರಿಯ ಮುಖಂಡರಾದ ಪ್ರಾಣೇಶ್ , ಪ್ರಭಣ್ಣ, ಚನ್ನೇನಹಳ್ಳಿ ನಾಗಣ್ಣ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ , ಗುರುಪ್ರಸಾದ್ , ಯೋಗರಾಜ್ , ಜಯಚಂದ್ರ, ಲಕ್ಕಸಂದ್ರ ಮೋಹನ್ , ಗುಂಡಣ್ಣ, ಪರಿಸರ ಪ್ರೇಮಿ ರಾಜೇಂದ್ರ, ಬಿಳಗುಂಬ ದಿನೇಶ್ , ಸುಗ್ಗನಹಳ್ಳಿ ವಸಂತ್ , ಮಲ್ಲೇಗೌಡ, ಕಿರಣ್ , ಚೇತನ್ , ಮಹೇಂದ್ರ, ಉಮೇಶ್ , ನವೀನ್ , ರಂಜನ್ ಕುಮಾರ್ ಮತ್ತಿತರರು ಸಂತಸ ವ್ಯಕ್ತಪಡಿಸಿದರು.
ಕೋಟ್ :
ನಮ್ಮ ಪ್ರಾರ್ಥನೆಗೆ ಬಿಳಗುಂಬ ಗ್ರಾಮದ ಶಕ್ತಿದೈವ ಜಲಸಿದ್ದೇಶ್ವರಸ್ವಾಮಿ ಫಲ ನೀಡಿದ್ದಾರೆ. ಯಾವುದೇ ಗೊಂದಲ ಇರದೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಡಿ.ಕೆ. ಶಿವಕುಮಾರ್ ಅವರು ಆಡಳಿತ ನಡೆಸಲಿದ್ದಾರೆ. ಮೇಕೆದಾಟು ಯೋಜನೆಗೆ ಶಿವಕುಮಾರ್ ಅವರೇ ಶಂಕುಸ್ಥಾಪನೆ ನೆರವೇರಿಸಬೇಕು ಎಂಬುದು ನಮ್ಮ ಬಯಕೆ. ಬೆಂಗಳೂರು ದಕ್ಷಿಣ ಜಿಲ್ಲೆ
ಇಂದೆಂದೂ ಕಾಣದ ಅಭಿವೃದ್ಧಿ ಕಾಣಲಿದೆ.
- ಸಂತೋಷ್ ಆರ್ . ಬಿಳಗುಂಬ, ಜಿಲ್ಲಾಪ್ರಧಾನ ಕಾರ್ಯದರ್ಶಿ. ಯುವ ಕಾಂಗ್ರೆಸ್ ಘಟಕ
ಫೋಟೊ:
30ಆರ್ ಎನ್ ಆರ್ ಎಂ1 ಮತ್ತು 3:
ಯುವ ಕಾಂಗ್ರೆಸ್ ಮುಖಂಡರು ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲೆಂದು ತಾಲೂಕಿನ ಬಿಳಗುಂಬ ಗ್ರಾಮದ ಜಲಸಿದ್ದೇಶ್ವರ ಸ್ವಾಮಿ ದೇವಾಲಯದಲ್ಲಿಪ್ರಾರ್ಥನೆ ಸಲ್ಲಿಸಿದ್ದರು.
30ಆರ್ ಎನ್ ಆರ್ ಎಂ2:
ಸಂತೋಷ್ ಆರ್ . ಬಿಳಗುಂಬ.

