ದೇಶದಲ್ಲಿಹಿಂದೂಗಳ ಸಂಖ್ಯೆ ಕ್ಷೀಣ

Contributed bypurnima.muni@gmail.com|Vijaya Karnataka

ದೇಶದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ಯುವಜನತೆ ಬದಲಾಗುತ್ತಿದ್ದಾರೆ. ಲವ್‌ ಜಿಹಾದ್‌ ಮತ್ತು ಮತಾಂತರದಂತಹ ಸಮಸ್ಯೆಗಳ ವಿರುದ್ಧ ಹಿಂದೂ ಸಮಾಜ ಒಗ್ಗಟ್ಟಾಗಬೇಕು. ಹಿಂದೂ ಸಮಾಜವನ್ನು ಬಲಪಡಿಸಿ, ಪ್ರತಿಯೊಬ್ಬರಲ್ಲೂ ಹಿಂದೂ ಎಂಬ ಭಾವನೆ ಮೂಡಿಸಬೇಕು. ವಿಶ್ವ ಹಿಂದೂ ಪರಿಷತ್‌ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

severe concern over the declining hindu population in the country possibility of being victimized

ದೇಶದಲ್ಲಿಹಿಂದೂಗಳ ಸಂಖ್ಯೆ ಕ್ಷೀಣ

((ಸಂವಾದ, ಧರ್ಮ ರಕ್ಷಾ ನಿಧಿಧಿ ಕಾರ್ಯಕ್ರಮದಲ್ಲಿಸಂಜಯ್ ಧವಳೇಕರ್ ಹೇಳಿಕೆ))

ವಿಕ ಸುದ್ದಿಲೋಕ ವಿಜಯಪುರ

ದೇಶದಲ್ಲಿಹಿಂದೂಗಳ ಸಂಖ್ಯೆ ಕ್ಷೀಣಿಸುತ್ತಿದೆ. ಈ ಬಗ್ಗೆ ಎಚ್ಚೆತ್ತು ಜಾಗೃತರಾಗದಿದ್ದರೆ ಮುಂದಿನ ದಿನಗಳಲ್ಲಿಸಂಕಷ್ಟಕ್ಕೆ ಸಿಲುಕುವ ಅನಿವಾರ್ಯತೆ ಎದುರಾಗಲಿದೆ ಎಂದು ಅಖಿಲ ಭಾರತೀಯ ವಿಶೇಷ ಸಂಪರ್ಕ ಪ್ರಮುಖ್ ಸಂಜಯ್ ಧವಳೇಕರ್ ಹೇಳಿದರು.

ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿವಿಶ್ವ ಹಿಂದೂ ಪರಿಷತ್ ವತಿಯಿಂದ ಆಯೋಜಿಸಿದ್ದ ಗಣ್ಯರೊಂದಿಗೆ ಸಂವಾದ ಮತ್ತು ಧರ್ಮ ರಕ್ಷಾ ನಿಧಿಧಿ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ಪಾಶ್ಚಿಮಾತ್ಯ ಸಂಸ್ಕೃತಿಗೆ ಮರುಳಾಗಿ ಇಂದು ಯುವಜನತೆ ವಿಭಿನ್ನ ಜೀವನ ಶೈಲಿಯಲ್ಲಿಬದುಕುತ್ತಿದ್ದಾರೆ. ಇದು ಮುಂದೊಂದು ದಿನ ಹಿಂದೂಗಳ ಸಂಖ್ಯೆ ಕ್ಷೀಣಿಸಿ, ದಬ್ಬಾಳಿಕೆಗೆ ಒಳಗಾಗುವ ಅನಿವಾರ್ಯತೆ ಎದುರಾಗಲಿದೆ. ‘ಲವ್ ಜಿಹಾದ್ , ಮತಾಂತರ ವಿರುದ್ಧ ಹಿಂದೂ ಸಮಾಜವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು. ಹಿಂದೂಗಳು ಒಗ್ಗಟ್ಟಾಗಬೇಕು ಹಾಗೂ ಹಿಂದೂ ಸಮಾಜ ಜಾಗೃತಗೊಂಡು ದೇಶದ ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನಲ್ಲಿಹಿಂದೂ ಎಂಬ ಭಾವನೆ ಮೂಡಿಸುವಂತಹ ಕೆಲಸ ಮಾಡಬೇಕು ಎಂದರು.

ವಿಶ್ವ ಹಿಂದೂ ಪರಿಷತ್ ಪ್ರಾಂತ ವಿಶೇಷ ಸಂಪರ್ಕ ವಿಭಾಗದ ಪ್ರಮುಖ್ ಮಂಜುನಾಥ ಸ್ವಾಮಿ ಮಾತನಾಡಿ, ಸಂಘಟನೆಗಳು ಬಲಗೊಳ್ಳಲು ಧ್ಯೇಯ, ನೇತೃತ್ವ, ಪ್ರಾಮಾಣಿಕತೆ, ಕಾರ್ಯಬದ್ಧತೆ, ಕಾರ್ಯಕರ್ತರ ತಂಡ ಇದ್ದರೆ ಮಾತ್ರವೇ ಸಾಧ್ಯ. ಹಿಂದೂ ಸಮಾಜದ ಅಭಿವೃದ್ಧಿಗಾಗಿ ಅನೇಕ ಯೋಜನೆ, ಉದ್ದೇಶಗಳನ್ನು ಇಟ್ಟುಕೊಂಡು ಸರ್ವವಾಪ್ಯಿ ಸರ್ವಸ್ಪರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಾ ವಿಶ್ವ ಹಿಂದೂ ಪರಿಷತ್ ಬಂದಿದೆ ಎಂದು ಹೇಳಿದರು.

ವಿಶ್ವ ಹಿಂದೂ ಪರಿಷತ… ಪ್ರಾಂತ ಸಹ ವಿಶೇಷ ಪ್ರಮುಖ್ ಮುನಿರಾಜ್ , ಕೋಲಾರ ವಿಭಾಗ ಕಾರ್ಯದರ್ಶಿ ಗೌರಿಶಂಕರ್ , ಬಜರಂಗದಳ ಕೋಲಾರ ವಿಭಾಗ ಸಂಯೋಜಕ್ ವಿ.ಕೃಷ್ಣಮೂರ್ತಿ, ಮತ್ತಿತರರು ಹಾಜರಿದ್ದರು.

30.ವಿಜಯಪುರ.01: ವಿಜಯಪುರದ ಶ್ರೀ ಸೌಮ್ಯಚನ್ನಕೇಶವಸ್ವಾಮಿ ದೇವಾಲಯದಲ್ಲಿಆಯೋಜಿಸಿದ್ದ ಸಂವಾದ ಮತ್ತು ಧರ್ಮ ರಕ್ಷಾ ನಿಧಿಧಿ ಕಾರ್ಯಕ್ರಮದಲ್ಲಿಅಖಿಲ ಭಾರತೀಯ ವಿಶೇಷ ಸಂಪರ್ಕ ಪ್ರಮುಖ್ ಸಂಜಯ್ ಧವಳೇಕರ್ ಮಾತನಾಡಿದರು.