ಬಳ್ಳಾರಿ--ದೈಹಿಕ, ಮಾನಸಿಕ ಸದೃಢತೆಗೆ ಕ್ರೀಡೆ ಸಹಕಾರಿ

Contributed bymaruthi.sunagar@timesofindia.com|Vijaya Karnataka

ಬಳ್ಳಾರಿಯಲ್ಲಿ ನಡೆದ ಬೇಸಿಗೆ ಅಥ್ಲೆಟಿಕ್ ಶಿಬಿರ ಸಮಾರಂಭದಲ್ಲಿ ಮಕ್ಕಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ದೈಹಿಕ, ಮಾನಸಿಕ ಸದೃಢತೆಗೆ ಕ್ರೀಡೆ ಸಹಕಾರಿ ಎಂದು ಪಾಲಿಕೆ ಸದಸ್ಯ ಎಂ.ಗೋವಿಂದರಾಜುಲು ಹೇಳಿದರು. ಪೋಷಕರು ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು. ಶಿಬಿರದಲ್ಲಿ 560 ಮಕ್ಕಳು ನೋಂದಣಿಯಾಗಿದ್ದು, 400ಕ್ಕೂ ಅಧಿಕ ಸಕ್ರಿಯವಾಗಿ ಪಾಲ್ಗೊಂಡಿದ್ದರು. 70 ಮಕ್ಕಳು ಅಡ್ವಾನ್ಸ್ ತರಬೇತಿಗೆ ಆಯ್ಕೆಯಾಗಿದ್ದಾರೆ. ಶಿಬಿರವನ್ನು ವರ್ಷಪೂರ್ತಿ ನಡೆಸುವ ಬಗ್ಗೆ ನಿರ್ಧರಿಸಲಾಗುವುದು.

ballari childrens sports camp aiding physical and mental wellness

‘ದೈಹಿಕ, ಮಾನಸಿಕ ಸದೃಢತೆಗೆ ಕ್ರೀಡೆ ಸಹಕಾರಿ’

ವಿಕ ಸುದ್ದಿಲೋಕ ಬಳ್ಳಾರಿ

‘‘ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ಕ್ರೀಡಾ ಚಟುವಟಿಕೆಗಳು ಸಹಕಾರಿಯಾಗಿದ್ದು, ಮಕ್ಕಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಲ್ಲೂಪಾಲ್ಗೊಳ್ಳಬೇಕು,’’ ಎಂದು ಪಾಲಿಕೆ ಸದಸ್ಯ ಎಂ.ಗೋವಿಂದರಾಜುಲು ಹೇಳಿದರು.

ನಗರದ ಜಿಲ್ಲಾಕ್ರೀಡಾಂಗಣದಲ್ಲಿಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್ ನಿಂದ ಶನಿವಾರ ಆಯೋಜಿಸಿದ್ದ ‘ಬೇಸಿಗೆ ಅಥ್ಲೆಟಿಕ್ ಶಿಬಿರ’ದ ಸಮಾರೋಪದಲ್ಲಿಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

‘‘ಪೋಷಕರು ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು. ಶಿಬಿರದಲ್ಲಿಪಾಲ್ಗೊಂಡ ಮಕ್ಕಳು ನಿರಂತರ ಕ್ರೀಡಾ ಅಭ್ಯಾಸದಲ್ಲಿತೊಡಗಿಸಿಕೊಂಡು ರಾಜ್ಯ, ರಾಷ್ಟ್ರ ಮಟ್ಟದಲ್ಲೂಸಾಧನೆ ಮೆರೆಯಬೇಕು,’’ ಎಂದರು.

ಜಿಲ್ಲಾ ಅಥ್ಲೆಟಿಕ್ ಅಸೋಸಿಯೇÍನ್ ಅಧ್ಯಕ್ಷ ಡಾ.ರವಿಶಂಕರ್ ಸಜ್ಜಲ್ ಅವರು ಮಾತನಾಡಿ, ‘‘ಬೇಸಿಗೆ ಅಥ್ಲೆಟಿಕ್ ಶಿಬಿರಲ್ಲಿ560 ಮಕ್ಕಳು ತರಬೇತಿಗೆ ನೋಂದಣಿಯಾಗಿದ್ದರಿಲ್ಲಿ400ಕ್ಕೂ ಅಧಿಕ ಮಕ್ಕಳು ಶಿಬಿರದಲ್ಲಿಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಈ ಪೈಕಿ 70 ಮಕ್ಕಳು ಅಡ್ವಾನ್ಸಡ್ ಅಥ್ಲೆಟಿಕ್ ತರಬೇತಿಗೆ ಆಯ್ಕೆಯಾಗಿದ್ದು, ಇವರಿಗೆ ಪೂರ್ಣ ಪ್ರಮಾಣದಲ್ಲಿತರಬೇತಿ ನೀಡಿದ್ದಲ್ಲಿಮುಂದಿನ ದಿನಗಳಲ್ಲಿರಾಜ್ಯ, ರಾಷ್ಟ್ರ ಮಟ್ಟದಲ್ಲಿಕ್ರೀಡೆಗಳಲ್ಲಿಚಿನ್ನದ ಪದಕ ಗೆಲ್ಲಲು ಸಹಾಯವಾಗುತ್ತದೆ. ಶಿಬಿರ ಮುಂದುವರಿಸುವ ಬಗ್ಗೆ ಪೋಷಕರು, ಮಕ್ಕಳು ಆಸಕ್ತಿ ತೋರಿದ್ದು, ವರ್ಷಪೂರ್ತಿ ಶಿಬಿರ ನಡೆಸುವ ಬಗ್ಗೆ ನಿರ್ಧರಿಸಲಾಗುವುದು,’’ ಎಂದರು.

ಶಿಬಿರದಲ್ಲಿರಾಮಸ್ವಾಮಿ, ಶ್ರೀಕಾಂತ್ , ವಿಕ್ರಮ…, ಕೃಷ್ಣ ರೆಡ್ಡಿ, ಜಗನ್ , ಡಾ.ಸುರೇಶ್ , ತರಬೇತುದಾರರಾದ ಬಾಲಕೃಷ್ಣ, ಎನ್ .ಸಂತೋಷ್ ಇದ್ದರು.

* 30 ಮಾರುತಿ 01

ಬಳ್ಳಾರಿಯ ಜಿಲ್ಲಾಕ್ರೀಡಾಂಗಣದಲ್ಲಿಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್ ನಿಂದ ಆಯೋಜಿಸಿದ್ದ ‘ಬೇಸಿಗೆ ಅಥ್ಲೆಟಿಕ್ ಶಿಬಿರ’ದ ಸಮಾರೋಪದಲ್ಲಿಮಕ್ಕಳಿಗೆ ಪಾಲಿಕೆ ಸದಸ್ಯ ಎಂ.ಗೋವಿಂದರಾಜುಲು ಪ್ರಮಾಣ ಪತ್ರ ವಿತರಿಸಿದರು.