ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪುರಸ್ಕಾರ ಪ್ರದಾನ

Contributed bybkyashas2010@gmail.com|Vijaya Karnataka

ಆಲಂಕಾರು ಜೇಸಿಐ ಘಟಕವು ಮೇ ತಿಂಗಳಿನಲ್ಲಿ 'ಸೆಲ್ಯೂಟ್‌ ದಿ ಸೈಲೆಂಟ್‌ ಸ್ಟಾರ್‌' ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ವೇಳೆ, ರಾಮಕುಂಜದ ಸೀತಾರಾಮ ಗೌಡ ಅರ್ಬಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಅವರು ಬಿಎಸ್‌ಎನ್‌ಎಲ್‌ ಮತ್ತು ಪ್ರಿನಿಟಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಈ ಪುರಸ್ಕಾರವು ಅವರ ಸೇವಾ ಮನೋಭಾವವನ್ನು ಗುರುತಿಸಿದೆ. ಕಾರ್ಯಕ್ರಮದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು.

recognizing sitaram gowda with the salute the silent star award 2023 by jci alankara

ವಿಕ ಸುದ್ದಿಲೋಕ ಕಡಬ

ಜೇಸಿಐ ಆಲಂಕಾರು ಘಟಕ ವತಿಯಿಂದ ಮೇ ತಿಂಗಳ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಕಾರ್ಯಕ್ರಮ ಆಲಂಕಾರಿನ ಶ್ರೀ ದುಗಾಂರ್ ಬಾ ಪದವಿಪೂರ್ವ ಕಾಲೇಜಿನಲ್ಲಿನಡೆಯಿತು.

ಜೇಸಿಐ ಆಲಂಕಾರು ಘಟಕದ ಅಧ್ಯಕ್ಷ ಜೇಸಿ ಮಹೇಶ್ ಪಾಟಾಳಿ ಅಧ್ಯಕ್ಷತೆ ವಹಿಸಿದ್ದರು. ಘಟಕದ ನಿಕಟ ಪೂರ್ವಾಧ್ಯಕ್ಷ ಜೇಸಿ ಗುರುರಾಜ್ ರೈ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ10 ವರ್ಷಗಳ ಕಾಲ ಆತೂರಿನ ಬಿಎಸ್ ಎನ್ ಎಲ್ ಕಚೇರಿಯಲ್ಲಿ ಪವರ್ ಮ್ಯಾನ್ ಆಗಿ ಸೇವೆ ಸಲ್ಲಿಸಿ, ಪ್ರಸ್ತುತ ಪ್ರಿನಿಟಿ ಸಂಸ್ಥೆಯಲ್ಲಿಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸೇವಾ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿರುವ ರಾಮಕುಂಜದ ಸೀತಾರಾಮ ಗೌಡ ಅರ್ಬಿ ಅವರಿಗೆ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪುರಸ್ಕಾರ ಪ್ರದಾನ ಮಾಡಿ ಗೌರವಿಸಲಾಯಿತು. ಘಟಕದ ಮಹಿಳಾ ಜೇಸಿ ಅಧ್ಯಕ್ಷೆ ಕೃತಿಕಾ ಟಿ.ರೈ, ಜೆಜೇಸಿ ಅಧ್ಯಕ್ಷೆ ಕೀರ್ತಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಮಹೇಶ್ ಪಾಟಾಳಿ ಸ್ವಾಗತಿಸಿದರು. ಕಾರ್ಯದರ್ಶಿ ಜನಾರ್ದನ್ ಸುರ್ಯ ವಂದಿಸಿದರು. ಪೂರ್ವಾಧ್ಯಕ್ಷ ಗಣೇಶ್ ಕಟ್ಟಪುಣಿ ಸನ್ಮಾನಿತರ ಪರಿಚಯ ಮಾಡಿದರು. ಗುರುಕಿರಣ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

(ಸೀತಾರಾಮ ಗೌಡ ಅರ್ಬಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಫೊಟೋ.......30ಕೆಡಿಬಿ ಎಬಿ)