ದಿನ ಭವಿಷ್ಯ 31 ಮೇ 2026

Contributed bynetravati.krishnamurthy@timesgroup.com|Vijaya Karnataka

ಮೇ 31, 2026ರ ದಿನಭವಿಷ್ಯ ಪ್ರಕಟವಾಗಿದೆ. ಸಿಂಹ, ತುಲಾ, ಕುಂಭ ರಾಶಿಯವರಿಗೆ ಹಂಸ ರಾಜ ಯೋಗ ಫಲಿಸಲಿದೆ. ಮೇಷ ರಾಶಿಯವರಿಗೆ ಕುಟುಂಬದಿಂದ ಶುಭ ಸುದ್ದಿ ಬರಲಿದೆ. ವೃಷಭ ರಾಶಿಯವರು ವ್ಯಾಪಾರದಲ್ಲಿ ಎಚ್ಚರಿಕೆ ವಹಿಸಬೇಕು. ಮಿಥುನ ರಾಶಿಯವರಿಗೆ ಯಶಸ್ಸು ಕಾದಿದೆ. ಕಟಕ ರಾಶಿಯವರು ಒತ್ತಡದಿಂದ ದೂರವಿರಬೇಕು. ಸಿಂಹ ರಾಶಿಯವರಿಗೆ ಅಭಿವೃದ್ಧಿ ಇದೆ. ಕನ್ಯಾ ರಾಶಿಯವರಿಗೆ ಸಮಾಧಾನ ಸಿಗಲಿದೆ. ತುಲಾ ರಾಶಿಯವರು ಲಾಭ ಪಡೆಯುವರು. ವೃಶ್ಚಿಕ ರಾಶಿಯವರು ಜಾಣ್ಮೆಯಿಂದ ವ್ಯವಹರಿಸಬೇಕು. ಧನು ರಾಶಿಯವರು ಕೆಲಸ ಪೂರ್ಣಗೊಳಿಸಬೇಕು. ಮಕರ ರಾಶಿಯವರಿಗೆ ಅಚ್ಚರಿ ಸುದ್ದಿ ಇದೆ.

daily horoscope 2026 how can you achieve success

ದಿನಭವಿಷ್ಯ 31 ಮೇ 2026

ಶ್ರೀಪತಿ ಭಟ್ | ಬೆಂಗಳೂರು

(ಸಿಂಹ, ತುಲಾ, ಕುಂಭ-ಈ ರಾಶಿಯವರಿಗೆ ಹಂಸ ರಾಜ ಯೋಗ)

-------------

ಮೇಷ : ಕುಟುಂಬಕ್ಕೆ ಸಂಬಂಧಿಸಿದಂತೆ ಶುಭ ವಾರ್ತೆ ಕೇಳುವಿರಿ. ಅಣ್ಣ-ತಮ್ಮಂದಿರ, ಅಕ್ಕ-ತಂಗಿಯರ ಸಂಬಂಧಗಳಲ್ಲಿಸಾಮರಸ್ಯ ಕಾಯ್ದು ಕೊಳ್ಳಿ. ಗುರಿ ತಲುಪಲು ಶ್ರೀ ಆಂಜನೇಯನನ್ನು ಅರಾಧಿಸಿ.

(ಶುಭ ಸಂಖ್ಯೆ : 4, ಅದೃಷ್ಟ ಬಣ್ಣ : ಹಳದಿ)

-----------

ವೃಷಭ : ವ್ಯಾಪಾರದಲ್ಲಿಪರಿಸ್ಥಿತಿ ಅವಲೋಕಿಸಿಕೊಂಡು ಮುಂದಿನ ಹೆಜ್ಜೆ ಇರಿಸಿ. ಗೃಹ ಬಳಕೆಯ ಅಲಂಕಾರಿಕ ಸಾಮಗ್ರಿಗಳ ಖರೀದಿ ಮಾಡುವಿರಿ. ಕರ್ತವ್ಯ ನಿಷ್ಠೆಯಿಂದ ಕಾರ್ಯ ಸಾಧಿಸುವಿರಿ.

(ಶುಭ ಸಂಖ್ಯೆ : 9, ಅದೃಷ್ಟ ಬಣ್ಣ : ಆಕಾಶನೀಲಿ)

-----------------

ಮಿಥುನ : ಉತ್ತಮ ಸಮಾಚಾರಗಳನ್ನು ಕೇಳುವುದಲ್ಲದೇ ಪ್ರಯತ್ನಿಸಿದ ಎಲ್ಲಾಕಾರ್ಯಗಳಲ್ಲಿಯೂ ಯಶಸ್ಸು ಪಡೆಯುವಿರಿ. ಅರ್ಧಕ್ಕೆ ನಿಂತಿದ್ದ ಗೃಹ ನಿರ್ಮಾಣ ಕೆಲಸಗಳು ಮುಂದುವರಿಯಲಿದೆ. ಶತ್ರು ಬಾಧೆ ನಿವಾರಣೆ ಆಗಲಿದೆ.

(ಶುಭ ಸಂಖ್ಯೆ :, ಅದೃಷ್ಟ ಬಣ್ಣ : )

------------------

ಕಟಕ : ಒತ್ತಡ ತರುವ ಕೆಲಸಗಳಿಂದ ದೂರು ಉಳಿಯಿರಿ. ಹಣ ಹೂಡಿಕೆಯ ವಿಷಯದಲ್ಲಿಅವರಿವರ ಮಾತುಗಳನ್ನು ಕೇಳುವ ಬದಲಾಗಿ ಅನಿಸಿಕೆಯಂತೆ ನಡೆಯಿರಿ.

(ಶುಭ ಸಂಖ್ಯೆ :, ಅದೃಷ್ಟ ಬಣ್ಣ :)

------

ಸಿಂಹ : ಲೋಹಗಳ ಕೈಗಾರಿಕೆ ಉದ್ಯಮದವರಿಗೆ ಶ್ರಮದಿಂದ ಅಭಿವೃದ್ಧಿ ಇರಲಿದೆ. ಧ್ಯಾನ ಮಾಡುವ ಮೂಲಕ ಏಕಾಗ್ರತೆ ವೃದ್ಧಿಸಿಕೊಳ್ಳಲು ಪ್ರಯತ್ನ ಮಾಡಿ. ಗೋ ಸೇವೆಯಿಂದ ನೆಮ್ಮದಿ ಸಂಪಾದಿಸಬಹುದು.

(ಶುಭ ಸಂಖ್ಯೆ : , ಅದೃಷ್ಟ ಬಣ್ಣ : )

--------------

ಕನ್ಯಾ : ಜೀವನದಲ್ಲಿಸವಾಲಾಗಿ ಬಂದ ಜವಾಬ್ದಾರಿಯಲ್ಲಿಜಯ ಸಾಧಿಸಲಿದ್ದೀರಿ. ಬಹಳ ದಿನಗಳ ನಂತರ ಜೀವನದಲ್ಲಿಸಮಾಧಾನವನ್ನು ಹೊಂದುವಿರಿ. ಹೊಸ ಉದ್ಯೋಗಕ್ಕೆ ಹೊಂದಿಕೊಳ್ಳಲು ಕಷ್ಟವಾಗಬಹುದು.

(ಶುಭ ಸಂಖ್ಯೆ :, ಅದೃಷ್ಟ ಬಣ್ಣ : )

------------

ತುಲಾ : ವ್ಯಾಪಾರ ಸ್ಥಳವನ್ನು ಅಲಂಕಾರಯುತವಾಗಿ ವಿನ್ಯಾಸ ಮಾಡಿದರೆ ಹೆಚ್ಚಿನ ಲಾಭ ಪಡೆಯುವಿರಿ. ನಿಮ್ಮ ಪರವಾಗಿರುವ ಪರಿಸ್ಥಿತಿಯ ಲಾಭ ಪಡೆಯಲು ವಿಫಲರಾಗಬೇಡಿ.

(ಶುಭ ಸಂಖ್ಯೆ : , ಅದೃಷ್ಟ ಬಣ್ಣ :)

-------------

ವೃಶ್ಚಿಕ : ಅಸೂಯೆ ಪಡುವ ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳೊಂದಿಗೆ ಜಾಣ್ಮೆಯಿಂದ ವ್ಯವಹರಿಸಿ. ಪರಿಣಿತರ ಸಲಹೆ-ಸೂಚನೆಗಳೊಂದಿಗೆ ಮುಂದುವರಿದರೆ ಪರಿಸ್ಥಿತಿ ತಿಳಿಯಾಗುತ್ತದೆ.

(ಶುಭ ಸಂಖ್ಯೆ :, ಅದೃಷ್ಟ ಬಣ್ಣ : )

-------------------

ಧನು : ಮಗನ ಉನ್ನತ ವಿದ್ಯಾಭ್ಯಾಸ ವಿಷಯಗಳನ್ನು ಮತ್ತು ಅದರಿಂದಾಗುವ ಲಾಭ-ನಷ್ಟಗಳ ಬಗ್ಗೆ ಪುನರಾವಲೋಕನ ಮಾಡಿ. ಆಲಸ್ಯದಿಂದಾಗಿ ಕೆಲಸಗಳನ್ನು ಮುಂದೆ ಹಾಕದೆ ಪೂರ್ಣಗೊಳಿಸಿ.

(ಶುಭ ಸಂಖ್ಯೆ : , ಅದೃಷ್ಟ ಬಣ್ಣ : )

-----------------

ಮಕರ : ಹಲವು ದಿನಗಳಿಂದ ಮುಂದೂಡಿದ್ದ ವಿದೇಶಿ ಪ್ರಯಾಣ ಕೈಗೊಳ್ಳುವ ಬಗ್ಗೆ ಯೋಚನೆ ಬರುವುದು. ಹಣಕಾಸಿನ ಬಗ್ಗೆ ಚಿಂತಿಸಬೇಕಿಲ್ಲ. ದಿನದ ಮಧ್ಯದಲ್ಲಿಅಚ್ಚರಿ ಸುದ್ದಿ ಕೇಳಲಿರುವಿರಿ.

(ಶುಭ ಸಂಖ್ಯೆ :, ಅದೃಷ್ಟ ಬಣ್ಣ : )

-------------

ಕುಂಭ : ಗಿಡಗಳ ನರ್ಸರಿ ಮಾಡುವವರಿಗೆ ಕೀಟ ಬಾಧೆ ಉಂಟಾಗುವುದು. ಆಧ್ಯಾತ್ಮಕ ವಿಚಾರಗಳ ಪುಸಕ್ತಗಳನ್ನು ಕೊಳ್ಳಲು ಧನ ವಿನಿಯೋಗ ಆಗುವುದು. ಸಹವರ್ತಿಗಳೊಡನೆ ಸಂಯಮದಿಂದ ವರ್ತಿಸಿ.

(ಶುಭ ಸಂಖ್ಯೆ :, ಅದೃಷ್ಟ ಬಣ್ಣ : )

---------------

ಮೀನ : ಸುಪ್ತವಾಗಿ ಅಡಗಿರುವ ಪ್ರತಿಭೆಗಳ ಕೌಶಲಗಳನ್ನು ಹೊರ ತೆಗೆಯಲು ವೇದಿಕೆ ಸಿಗುವುದು. ನಿಮ್ಮ ಮಾತು ವಿರುದ್ಧ ಮಾತನ್ನು ಮಕ್ಕಳಿಂದ ಕೇಳಬೇಕಾಗಲಿದೆ. ಒತ್ತಡ ತರುವಂತಹ ಕೆಲಸಗಳಿಂದ ದೂರವಿರಿ.

(ಶುಭ ಸಂಖ್ಯೆ :, ಅದೃಷ್ಟ ಬಣ್ಣ : )