ಕೆ.ಎಚ್ .ಮುನಿಯಪ್ಪಗೆ ಡಿಸಿಎಂ ಸ್ಥಾನ ನೀಡಿ

Contributed bygvittalslb@gmail.com|Vijaya Karnataka

ಮಾದಿಗ ಸಮುದಾಯದ ಅಭಿವೃದ್ಧಿಗಾಗಿ ಕೆ.ಎಚ್‌.ಮುನಿಯಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಜಿಲ್ಲಾ ಮುಖಂಡ ಮಲ್ಲಿಕಾರ್ಜುನ ಪೂಜಾರಿ ಒತ್ತಾಯಿಸಿದ್ದಾರೆ. ಐದು ದಶಕಗಳ ಕಾಲ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆ, ಶಿಸ್ತು ಹಾಗೂ ಬದ್ಧತೆಯಿಂದ ಸೇವೆ ಸಲ್ಲಿಸಿರುವ ಮುನಿಯಪ್ಪ ಅವರು ಏಳು ಬಾರಿ ಸಂಸದರಾಗಿ, ಹತ್ತು ವರ್ಷ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಅಪಾರ ರಾಜಕೀಯ ಜ್ಞಾನ ಮತ್ತು ಸಮುದಾಯದ ಕಾಳಜಿ ಹೊಂದಿರುವ ಅವರಿಗೆ ನೂತನ ಸಂಪುಟದಲ್ಲಿ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಲಾಗಿದೆ.

demand for muniyappa to be appointed as deputy chief minister

ಡಿಸಿಎಂ ಸ್ಥಾನ ನೀಡಿ

ವಿಕ ಸುದ್ದಿಲೋಕ ಕೊಪ್ಪಳ

‘‘ಮಾದಿಗ ಸಮುದಾಯದ ಅಭಿವೃದ್ಧಿಯ ದೃಷ್ಟಿಯಿಂದ ಕೆ.ಎಚ್ .ಮುನಿಯಪ್ಪ ಅವರಿಗೆ ಡಿಸಿಎಂ ಸ್ಥಾನ ನೀಡಬೇಕು,’’ ಎಂದು ಮಾದಿಗ ಸಮುದಾಯದ ಜಿಲ್ಲಾಮುಖಂಡ ಮಲ್ಲಿಕಾರ್ಜುನ ಪೂಜಾರಿ

ಒತ್ತಾಯಿಸಿದರು.

ನಗರದಲ್ಲಿಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘‘ಮುನಿಯಪ್ಪ ಅವರು 5 ದಶಕಗಳಿಂದ ಕಾಂಗ್ರೆಸ್ ಗೆ ನಿಷ್ಠೆ, ಶಿಸ್ತು ಹಾಗೂ ಬದ್ಧತೆಯಿಂದ ಸೇವೆ ಸಲ್ಲಿಸಿದ್ದಾರೆ. ಏಳು ಸಲ ಸಂಸದ ಸದಸ್ಯರಾಗಿರುವ ಅವರು 3 ದಶಕಗಳ ಕಾಲ ಸಂಸತ್ತಿನಲ್ಲಿಸೇವೆ ಸಲ್ಲಿಸಿದ್ದಾರೆ. 10 ವರ್ಷ ಕೇಂದ್ರ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅಪಾರ ರಾಜಕೀಯ ಜ್ಞಾನ ಹಾಗೂ ಸಮುದಾಯದ ಮೇಲೆ ಕಾಳಜಿ ಇರುವ ಅವರು ಡಿಸಿಎಂ ಸ್ಥಾನಕ್ಕೆ ಅರ್ಹರಾಗಿದ್ದಾರೆ. ಹೀಗಾಗಿ, ಅವರಿಗೆ ನೂತನ ಸಂಪುಟದಲ್ಲಿಡಿಸಿಎಂ ಸ್ಥಾನ ನೀಡಬೇಕು,’’ ಎಂದು ಆಗ್ರಹಿಸಿದರು. ಮಾದಿಗ ಮಹಾಸಭಾದ ಜಿಲ್ಲಾಮುಖಂಡರಾದ ಪ್ರಕಾಶ, ಜಯರಾಜ, ರಮೇಶ ಗಾಯಕ್ ವಾಡ, ಡಿ.ಎಂ.ಪೂಜಾರ ಇದ್ದರು.