***ಅಗತ್ಯ ವಸ್ತುಗಳ ಬೆಲೆಯೇರಿಕೆ: ಕುಂಬಳೆ ವಲಯ ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟನೆ

Contributed byshreemolu.93@gmail.com|Vijaya Karnataka

ಕುಂಬಳೆ ವಲಯ ಕಾಂಗ್ರೆಸ್ ಸಮಿತಿಯು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿತು. ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದಾಗಿ ಜನಸಾಮಾನ್ಯರ ಜೀವನ ದುಸ್ತರವಾಗಿದೆ ಎಂದು ಡಿಸಿಸಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಪ್ರಭು ತಿಳಿಸಿದರು. ಪಶ್ಚಿಮ ಏಷ್ಯಾ ಯುದ್ಧದ ಸಂದರ್ಭದಲ್ಲಿ ಪ್ರಧಾನಿ ಮೋದಿ ಸರಕಾರದ ವಿದೇಶಾಂಗ ನೀತಿಯಿಂದ ದೂರ ಸರಿದ ಪರಿಣಾಮ ಇದು ಎಂದು ಅವರು ಅಭಿಪ್ರಾಯಪಟ್ಟರು. ಪ್ರತಿಭಟನೆಯಲ್ಲಿ ಹಲವು ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.

congress organization protests against rise in essential goods prices

ವಿಕ ಸುದ್ದಿಲೋಕ ಕುಂಬಳೆ

ಪಶ್ಚಿಮ ಏಷ್ಯಾ ರಾಷ್ಟ್ರಗಳ ಯುದ್ಧದ ವೇಳೆಯಲ್ಲಿಟ್ರಂಪ್ ಪರವಾಗಿ ನಿಂತಿರುವ ಪ್ರಧಾನಿ ಮೋದಿ ಸರಕಾರ ಹಾಗೂ ಹಿಂದಿನ ಕಾಂಗ್ರೆಸ್ ಸರಕಾರ ರೂಪಿಸಿದ್ದ ಬಲವಾದ ವಿದೇಶಾಂಗ ನೀತಿಯಿಂದ ದೂರ ಸರಿದುದರ ಪರಿಣಾಮವಾಗಿ ದೇಶದಲ್ಲಿಇಂಧನ ಬೆಲೆ ಏರಿಕೆ ತೀವ್ರಗೊಂಡಿದ್ದು, ಇದರ ಪಶ್ಚಾತ್ ಪರಿಣಾಮವೆಂಬಂತೆ ಅಗತ್ಯ ವಸ್ತುಗಳಲ್ಲೂಬೆಲೆಯೇರಿಕೆ ಕಂಡು ಬರುತ್ತಿರುವುದು ಜನ ಸಾಮಾನ್ಯರ ಜೀವನ ದುಸ್ತರವಾಗಿದೆ ಎಂದು ಡಿಸಿಸಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಪ್ರಭು ಅಭಿಪ್ರಾಯಪಟ್ಟಿದ್ದಾರೆ.

ಪೆಟ್ರೋಲ್ -ಡೀಸಲ್ ದರ ಏರಿಕೆಯನ್ನು ಪ್ರತಿಭಟಿಸಿ ಕುಂಬಳೆ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿಕುಂಬಳೆಯಲ್ಲಿನಡೆದ ಪ್ರತಿಭಟನಾ ಮೆರವಣಿಗೆಯನ್ನು ಉದ್ಘಾಟಿಸಿ ಲಕ್ಷ್ಮಣ ಪ್ರಭು ಮಾತನಾಡುತ್ತಿದ್ದರು. ಕೃಷಿಕ ಕಾಂಗ್ರೆಸ್ ಬ್ಲಾಕ್ ಕಾರ್ಯದರ್ಶಿ ಲೋಕನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪೃಥ್ವಿರಾಜ್ ಶೆಟ್ಟಿ, ನಾಸರ್ ಮೊಗ್ರಾಲ್ , ರಿಯಾಸ್ ಮೊಗ್ರಾಲ್ , ಸಿ.ಎಂ. ಹಂಸ, ರಮೇಶ್ ಗಾಂಧೀನಗರ, ಕೆ.ಎಸ್ . ಇಬ್ರಾಹಿಂ, ಲತೀಫ್ ಆರಿಕ್ಕಾಡಿ, ಡಾಲ್ಫಿನ್ ಡಿಸೋಜ, ಉಮೇಶ್ , ಕೇಶವ ದರ್ಬಾರ್ ಕಟ್ಟೆ, ಚಂದ್ರ, ಪದ್ಮನಾಭ ಬಂಬ್ರಾಣ, ಥಾಮಸ್ ಡಿಸೋಜ ಭಾಗವಹಿಸಿದರು. ಮಂಡಲ ಕಾಂಗ್ರೆಸ್ ಅಧ್ಯಕ್ಷ ರವಿ ಪೂಜಾರಿ ಸ್ವಾಗತಿಸಿದರು. ರವಿರಾಜ್ ತುಂಬೆ ವಂದಿಸಿದರು.

29ಕೆಯು ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ.