ಬಂಟ್ವಾಳ ತಾಲೂಕಿನ ದೇವಶ್ಯಮೂಡೂರು ಪ್ರಾಥಮಿಕ ಶಾಲೆಯಲ್ಲಿವಿನೂತನ ಪ್ರಯೋಗ
(ವಿಕ ಪಾಸಿಟಿವ್ ಸ್ಟೋರಿ)
ಹರೀಶ ಮಾಂಬಾಡಿ ಬಂಟ್ವಾಳ
್ಛಛಿಛಿdಚಿa್ಚkvkಞ್ಞಜಃಜಞaಜ್ಝಿ.್ಚಟಞ
ನಾಟಕ, ಯಕ್ಷಗಾನ, ದರ ಕಡಿತದ ಮಾರಾಟದ ಬಗ್ಗೆ ಜೀಪು, ಆಟೊಗಳಲ್ಲಿಮೈಕ್ ಕಟ್ಟಿ ಊರಿಡೀ ತಿರುಗಿ ಬನ್ನಿ ಎಂದು ಘೋಷಣೆ ಕೂಗುವುದು ಗೊತ್ತು, ಆದರೆ ಸರಕಾರಿ ಶಾಲೆಯಲ್ಲಿಉತ್ತಮ ಶಿಕ್ಷಕರು, ವ್ಯವಸ್ಥೆಗಳೆಲ್ಲವೂ ಇದೆ, ಬನ್ನಿ ಎಂದು ಮೈಕ್ ನಲ್ಲಿಕೂಗಿ ಕರೆಯುವುದನ್ನು ನೋಡಿದ್ದೀರಾ ?
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಣಿನಾಲ್ಕೂರಿನ ದೇವಶ್ಯಮೂಡೂರು ಶಾಲೆಯ ಹಿರಿಯ ವಿದ್ಯಾರ್ಥಿಗಳು, ಎಸ್ ಡಿಎಂಸಿ ಸೇರಿಕೊಂಡು ಶಾಲಾ ದಾಖಲಾತಿ ಆಂದೋಲನದ ಭಾಗವಾಗಿ ಊರಿಡೀ ವಾಹನವೊಂದರಲ್ಲಿತಿರುಗಿ, ಶಾಲೆಗೆ ಬನ್ನಿ, ಏನೇನು ಸೌಲಭ್ಯಗಳಿವೆ ಎಂಬ ಕುರಿತು ಹಾಡು, ಸಂದೇಶಗಳನ್ನು ಬಿತ್ತರಿಸುತ್ತಿದ್ದಾರೆ. ಇದರ ಫಲವಾಗಿ ದಾಖಲಾತಿಯೂ ಹೆಚ್ಚಳವಾಗಿದೆ.
‘ವಿದ್ಯಾ ದೇಗುಲ ಕರೆದಿದೆ ನನ್ನನು ಪ್ರೀತಿಯ ಕೈಚಾಚಿ, ಹೊರಡುವೆ ನಾನು ಶಾಲೆಗೆ ಇಂದು ಗೆಳೆಯರ ಜತೆಗೂಡಿ’ ಎಂಬ ಹಾಡಿನೊಂದಿಗೆ ಪೋಷಕರೇ ಮತ್ತು ವಿದ್ಯಾರ್ಥಿಗಳೇ ಕಿವಿ ಅರಳಿಸಿ ಇಲ್ಲಿಕೇಳಿ, ಸ್ಮಾರ್ಟ್ ಕ್ಲಾಸ್ , ಯೋಗ ಸಹಿತ ಹಲವು ವೈಶಿಷ್ಟ್ಯಗಳೊಂದಿಗೆ ಮಾದರಿಯಾಗಿರುವ ನಮ್ಮ ಶಾಲೆಗೆ ಸೇರ್ಪಡೆಗೊಳಿಸಿ. ಮಕ್ಕಳ ಭವ್ಯ ಭವಿಷ್ಯಕ್ಕೆ ಭದ್ರ ಅಡಿಪಾಯ ನಮ್ಮ ಶಾಲೆ ಎಂಬ ಸ್ಲೋಗನ್ ಜತೆಗೆ ಸರಕಾರಿ ಶಾಲೆಯಲ್ಲಿದೊರಕುವ ಸೌಲಭ್ಯಗಳ ಪಟ್ಟಿಯನ್ನು ತುಳು ಮತ್ತು ಕನ್ನಡದಲ್ಲಿಹೇಳುವ ಅನೌನ್ಸ್ ಮೆಂಟ್ ಗೆ ಊರವರು ಕಿವಿಯಾಗಿದ್ದಷ್ಟೇ ಅಲ್ಲ, ಸ್ಪಂದಿಸಿದ್ದಾರೆ.
ಶಾರ್ದೂಲ ವೇಷ ಹಾಕಿದ್ದರು: ಗ್ರಾಮೀಣ ಜನರ ಶಿಕ್ಷಣ ದೇಗುಲವಾಗಿರುವ ಈ ಶಾಲೆ ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂಬ ನಿಟ್ಟಿನಲ್ಲಿಕಳೆದ ನವರಾತ್ರಿ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಸಂತ ಮುದಿಮಾರು ಶಾರ್ದೂಲ ವೇಷ ಧರಿಸಿ ಗಮನ ಸೆಳೆದಿದ್ದರು. ಅವರಿಗೆ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಹಾಗೂ ಶಾಲಾಭಿವೃದ್ಧಿ ಸಂಘದವರು ಸಾಥ್ ನೀಡಿದ್ದರು. ಈ ಸಂದರ್ಭ ಸರಕಾರಿ ಶಾಲೆ ಉಳಿಸಲು ಹಾಗೂ ಅಭಿವೃದ್ಧಿಯ ಕುರಿತು ಗಮನ ಸೆಳೆಯುವ ಹಾಗೂ ಸಮಸ್ಯೆಗಳ ಕುರಿತು ಬ್ಯಾನರ್ ಹಿಡಿಯಲಾಗಿತ್ತು. ಸಹಾಯ ಮಾಡಿ ಎಂದು ಪೆಟ್ಟಿಗೆ ಹಿಡಿದು ಮನವಿ ಮಾಡಿದ್ದರು. ಹಾಗೆ ವೇಷ ಧರಿಸಿ ಸುಮಾರು 40 ಸಾವಿರ ರೂ.ಸಂಗ್ರಹಿಸಲಾಗಿತ್ತು ಎಂದು ವಸಂತ ಮುದಿಮಾರು ಹೇಳುತ್ತಾರೆ.
ಬಾಕ್ಸ್
ಮಕ್ಕಳ ಸಂಖ್ಯೆ ಹೆಚ್ಚಳ
1955ರಲ್ಲಿಆರಂಭಗೊಂಡ ದೇವಶ್ಯಮೂಡೂರು ಶಾಲೆಯಲ್ಲಿಒಂದರಿಂದ ಏಳನೇ ತರಗತಿವರೆಗೆ ಕಳೆದ ಶೈಕ್ಷಣಿಕ ವರ್ಷದಲ್ಲಿ93, ಎಲ್ ಕೆಜಿ, ಯುಕೆಜಿ ಸೇರಿ 108 ಮಕ್ಕಳು ಇದ್ದರು. ಇದೀಗ ಸುಮಾರು 30ರಷ್ಟು ಸಂಖ್ಯೆ ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ಮುಖ್ಯ ಶಿಕ್ಷಕಿ ವಿಲ್ಮಾ ಸಿಕ್ವೇರ ತಿಳಿಸಿದ್ದಾರೆ. ಈ ಬಾರಿ 1ರಿಂದ ಏಳನೇ ತರಗತಿ ವರೆಗಿನ ಮಕ್ಕಳ ಸಂಖ್ಯೆ ಶತಕ ದಾಟಿದರೆ, ಎಲ್ ಕೆಜಿ, ಯುಕೆಜಿಗೆ 20ಕ್ಕೂ ಅಧಿಕ ಮಕ್ಕಳು ಸೇರ್ಪಡೆ ಆಗುತ್ತಿದ್ದಾರೆ. ಮುಖ್ಯ ಶಿಕ್ಷಕರೂ ಸೇರಿ ನಾಲ್ವರು ಶಿಕ್ಷಕರು ಸರಕಾರದ ವತಿಯಿಂದ ಇದ್ದಾರೆ ಎಂದು ಹೇಳಿದರು.
ಕೋಟ್
ನಮ್ಮ ಶಾಲೆಯ ಮೂಲಸೌಕರ್ಯ ಅಭಿವೃದ್ಧಿ ಆಗಬೇಕಿದೆ. ವಿಶೇಷವಾಗಿ ಶೌಚಗೃಹವನ್ನು ಎಲ್ಲಮಕ್ಕಳಿಗೂ ಅನುಕೂಲವಾಗುವ ನಿಟ್ಟಿನಲ್ಲಿದುರಸ್ತಿಗೊಳಿಸಿ, ಮಾರ್ಪಾಟು ಮಾಡಬೇಕು. ಇನ್ನಷ್ಟು ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿಪ್ರಯತ್ನಗಳು ಸಾಗಿವೆ.
- ವಸಂತ ಮುದಿಮಾರು, ಎಸ್ ಡಿಎಂಸಿ ಅಧ್ಯಕ್ಷ.
ಚಿತ್ರ: 29ಬಿಎಚ್ ದೇವಶ್ಯ ಮೂಡೂರು
ದೇವಶ್ಯಮುಡೂರು ಶಾಲೆಯಲ್ಲಿವಿದ್ಯಾರ್ಥಿಗಳ ಸೆಳೆಯಲು ಮೈಕ್ ಪ್ರಚಾರಾಭಿಯಾನ.
ಚಿತ್ರ: 29ಬಿಎಚ್ ಸ್ಟುಡೆಂಟ್ಸ್
ವಿದ್ಯಾರ್ಥಿಗಳನ್ನು ಸೆಳೆಯಲು ಅಭಿಯಾನಕ್ಕೆ ಸಾಥ್ ನೀಡಿದ ಪೋಷಕರು, ಊರವರು.

