**‘ಸಮಾಜಕ್ಕೆ ಮಲ್ಲವ ಸಮುದಾಯದ ಕೊಡುಗೆ ಅಪಾರ’

Contributed byaravindahebbar1971@gmail.com|Vijaya Karnataka

ಬೆಳ್ತಂಗಡಿಯಲ್ಲಿ ನಡೆದ ಮಾಳವ ಯಾನೆ ಮಲ್ಲವ ಸಮಾಜದ ವಾರ್ಷಿಕೋತ್ಸವದಲ್ಲಿ ಸಮಾಜದ ಸಾಧನೆಗಳನ್ನು ಸ್ಮರಿಸಲಾಯಿತು. ಕೆಳದಿ ಸಂಸ್ಥಾನದ ರಾಜಗುರುಗಳು ಮಲ್ಲವ ಸಮುದಾಯದ ಕೊಡುಗೆ ಅಪಾರ ಎಂದು ಶ್ಲಾಘಿಸಿದರು. ದೇಹದಾನ, ಮಾಧ್ಯಮ, ಆಂಬ್ಯುಲೆನ್ಸ್ ಸೇವೆ ಮತ್ತು ಶೈಕ್ಷಣಿಕ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಯುವಕರು ಹಾಗೂ ಮಹಿಳಾ ಸಂಘಟನೆಯಿಂದ ಕಾರ್ಯಕ್ರಮಗಳು ನಡೆದವು. ಸಮಾಜದ ಅಭ್ಯುದಯಕ್ಕೆ ಎಲ್ಲರೂ ದುಡಿಯಬೇಕು ಎಂದು ಕರೆ ನೀಡಲಾಯಿತು.

mallu community annual festival the communitys huge contribution

ಮಾಳವ ಯಾನೆ ಮಲ್ಲವ ಸಮಾಜಾಭ್ಯುದಯ ಸಂಘ ವಾರ್ಷಿಕೋತ್ಸವ

ವಿಕ ಸುದ್ದಿಲೋಕ ಬೆಳ್ತಂಗಡಿ

ಕೆಳದಿ ಮಹಾಸಂಸ್ಥಾನದ ಶಿವಪ್ಪ ನಾಯಕ ಹಾಗೂ ಕೆಳದಿ ರಾಣಿ ಚೆನ್ನಮ್ಮಾಜಿ ಕಾಲದಲ್ಲಿಮಲೆನಾಡು, ಕರಾವಳಿ ಹಾಗೂ ಕೇರಳದ ಭಾಗದಲ್ಲಿಹಲವಾರು ಧಾರ್ಮಿಕ, ಸಾಮಾಜಿಕ, ಕೃಷಿ ವಿಚಾರಗಳಿಗೆ ಒತ್ತು ನೀಡಲಾಗಿತ್ತು. ಈಗ ಅದೇ ಸಮಾಜ ಬಾಂಧವರು ಕೂಡ ನಾನಾ ಕ್ಷೇತ್ರದಲ್ಲಿಗಣನೀಯ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ತೀರ್ಥಹಳ್ಳಿ ಕವಲೇದುರ್ಗ ಮಠದ ಕೆಳದಿ ಸಂಸ್ಥಾನದ ರಾಜಗುರು ಶ್ರೀ ಷ.ಬ್ರ. ಮರಳಸಿದ್ಧ ಶಿವಾಚಾರ್ಯ ಮಹಾಸ್ವಾಮಿ ಹೇಳಿದರು.

ಅವರು ಭಾನುವಾರ ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನ ಅವರಣದ ಬಯಲು ಮಂದಿರದಲ್ಲಿಮಾಳವ ಯಾನೆ ಮಲ್ಲವ ಸಮಾಜಾಭ್ಯುದಯ ಸಂಘ ಬೆಳ್ತಂಗಡಿ, ಮಾಳವ ಯಾನೆ ಮಲ್ಲವರ ಯುವಕರ ಸಂಘ ಮತ್ತು ಮಹಿಳಾ ಸಂಘ ಬೆಳ್ತಂಗಡಿ ಆಶ್ರಯದಲ್ಲಿನಡೆದ 30ನೇ ವರ್ಷದ ವಾರ್ಷಿಕೋತ್ಸವ ಮತ್ತು ಶಿವ ಪೂಜೆ, ರುದ್ರಾಭಿಷೇಕ, ಲಲಿತಾಸಹಸ್ರನಾಮ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿಭಾಗವಹಿಸಿ ಆಶೀರ್ವಚನ ನೀಡಿದರು.

ಇಡೀ ಸಮಾಜಕ್ಕೆ ಮಲ್ಲವ ಸಮಾಜದ ಕೊಡುಗೆ ಇದೆ. ದ.ಕ., ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ಮಲ್ಲವ ಸಮಾಜದವರು ಹಲವಾರು ವರ್ಷಗಳಿಂದ ಸಮಾಜದ ಅಭ್ಯುದಯಕ್ಕೆ ಶ್ರಮಿಸುತ್ತಿದ್ದಾರೆ. ಹಿರಿಯರ ಮಾರ್ಗದರ್ಶನದಲ್ಲಿಯುವ ಜನತೆ ಇದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದು, ಮುಂದೆಯೂ ಸಮಾಜದ ಅಭ್ಯುದಯಕ್ಕೆ ಎಲ್ಲರೂ ಅಹಂ ತೊರೆದು ದುಡಿಯಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾಳವ ಯಾನೆ ಮಲ್ಲವ ಸಮಾಜ ಅಧ್ಯಕ್ಷ ಶಿವಶಂಕರ ಮಾತಾನಾಡಿ, ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿಮುನ್ನಡೆಸಿಕೊಂಡು ಬರುತ್ತಿದ್ದೇವೆ. ಮುಂದಿನ ದಿನದಲ್ಲಿಯುವಜನಾಂಗ ನಮ್ಮ ಸಮಾಜವನ್ನು ಮುನ್ನಡೆಸಿಕೊಂಡು ಹೋಗಬೇಕು ಎಂದು ಹೇಳಿದರು.

ಕಾಞಂಗಾಡ್ ಶ್ರೀ ಮಹಾಸತಿ ದೇವಸ್ಥಾನದ ಅಧ್ಯಕ್ಷ ಎಚ್ .ಎನ್ . ಜಗದೀಶ್ ಮಲ್ ಮತ್ತು ದುರ್ಗ ಮಲ್ಲಿಕಾರ್ಜುನ ಜಟ್ಟಿ ಮನೆತನದ ಅಧ್ಯಕ್ಷ ಬಿ.ನವನೀತ ಮಾಳವ, ಸಮಾಜ ಭಾಂದವರ ಸಹಕಾರ ಕೋರಿದರು.

ಕಾಞಂಗಾಡ್ ಇಕ್ಕೇರಿ ಮಲ್ಲವ ಸಮಾಜ ಸಂಘ ಅಧ್ಯಕ್ಷ ದಯಾನಂದ ಕುದ್ರು, ಚಿತ್ತಾರಿ ಕುದ್ರು ಶ್ರೀ ಮೂಕಾಂಬಿಕಾ ದೇವಸ್ಥಾನದ ಅಧ್ಯಕ್ಷ ನಾಗರಾಜ್ ಕೆ.ಪಿ., ಚಿತ್ತಾರಿ ಎಲ್ಲಾಂಬಿಕಾ ದೇವಸ್ಥಾನದ ಅಧ್ಯಕ್ಷ ಒ.ರಮೇಶ್ , ರಾವಣೇಶ್ವರ ಓರವಂಗೆರೆ ಶ್ರೀ ಜಟಕೇಶ್ವರ ದೇವಸ್ಥಾನದ ಅಧ್ಯಕ್ಷ ಎನ್ . ಪ್ರಭಾಕರ, ಮಿತ್ತಬೆಟ್ಟು ಶ್ರೀ ಮಹಮ್ಮಾಯಿ ವನದುರ್ಗ ದೇವಿ ದೇವಸ್ಥಾನದ ಅಧ್ಯಕ್ಷ ಎನ್ . ಮೋಹನ ಹೆಗ್ಡೆ, ಯುವಕ ಸಂಘ ಅಧ್ಯಕ್ಷ ಮೋಹನ ಬೆಳ್ತಂಗಡಿ, ಮಹಿಳಾ ಸಂಘ ಅಧ್ಯಕ್ಷೆ ಮಂಜುಳಾ ಬೆಳ್ತಂಗಡಿ ಮೊದಲಾದವರು ಉಪಸ್ಥಿತರಿದ್ದರು.

ಸಮಾಜದ ಸಾಧಕರಾದ ದೇಹದಾನ ನೀಡಿದ ಸುಶೀಲಾ ಹೆಗ್ಡೆ ಅಳದಂಗಡಿ, ಮಾಧ್ಯಮ ಕೇತ್ರದ ಭುವನೇಶ್ ಗೇರುಕಟ್ಟೆ, ಆಂಬ್ಯುಲೆನ್ಸ್ ಸೇವೆಗೆ ಭುವನೇಶ್ ಕೆಂಬರ್ಜೆ ಹಾಗೂ ಶ್ರೀನಿವಾಸ ವಿವಿ ಪಿಜಿಯೋಥೆರಪಿಸ್ಟ್ ನಲ್ಲಿನಾಲ್ಕನೇ ರಾರ ಯಂಕ್ ಪಡೆದ ಡಾ. ಪ್ರಣಿತ್ ಹೆಗ್ಡೆ ಅವರನ್ನು ಗೌರವಿಸಲಾಯಿತು. ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿವಿಶಿಷ್ಟ ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಮೋಹನ ಬೆಳ್ತಂಗಡಿ ಸಾರಥ್ಯದ ಸಪ್ತಸ್ವರಗಳ ಗಾನಯಾನ ಮೆಲೋಡಿಸ್ ತಂಡದಿಂದ ಸಂಗೀತ ರಸಮಂಜರಿ ಹಾಗೂ ಸಮಾಜ ಭಾಂದವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.

ಮಾಳವ ಯಾನೆ ಮಲ್ಲವ ಸಂಘದ ಕೋಶಾಧಿಕಾರಿ ಸತೀಶ್ ರಾಜ್ ವರದಿ ವಾಚಿಸಿದರು. ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಈಶ್ವರ ಅಲ್ಲಟಬೈಲು ಪ್ರಸ್ತಾವಿಸಿದರು. ಗೌತಮ್ ಹೆಗ್ಡೆ ಬೆಳ್ತಂಗಡಿ ಕಾರ್ಯಕ್ರಮ ನಿರ್ವಹಿಸಿ ಮಹಿಳಾ ಸಂಘದ ಕಾರ್ಯದರ್ಶಿ ಅಶ್ವಿನಿ ಉಜಿರೆ ವಂದಿಸಿದರು.

27ಎಂಜೆ ಕವಲೇದುರ್ಗ.

ತೀರ್ಥಹಳ್ಳಿ ಕವಲೇದುರ್ಗ ಮಠದ ಕೆಳದಿ ಸಂಸ್ಥಾನದ ರಾಜಗುರು ಶ್ರೀ ಷ.ಬ್ರ.ಮರಳಸಿದ್ಧ ಶಿವಾಚಾರ್ಯ ಮಹಾಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು.