ಪೊಸಡಿಗುಂಪೆಗೆ ಪ್ರಕೃತಿ ಯಾತ್ರೆ

Contributed bycrastalp19@gmail.com|Vijaya Karnataka

ಬೇಸಿಗೆ ರಜೆಯ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಗ್ರಂಥಾಲಯ ಸಮಿತಿ ಪ್ರಕೃತಿ ಯಾತ್ರೆಯನ್ನು ಆಯೋಜಿಸಿತ್ತು. ಅಂಗಡಿಮೊಗರು ಬಿ. ಕೆ. ಮೊಹಮ್ಮದ್‌ ಮಾಸ್ಟರ್‌ ಗ್ರಂಥಾಲಯದ ವತಿಯಿಂದ ಪೊಸಡಿಗುಂಪೆಗೆ ಮಕ್ಕಳು ಭೇಟಿ ನೀಡಿದರು. ಅಲ್ಲಿನ ನಿಸರ್ಗ ಸೌಂದರ್ಯ, ನೇತ್ರಾವತಿ ನದಿ, ಅರಬೀ ಸಮುದ್ರ, ಪಕ್ಷಿಗಳು, ಹೂವುಗಳು ಮತ್ತು ಸೂರ್ಯಾಸ್ತಮಾನವನ್ನು ಮಕ್ಕಳು ಆನಂದಿಸಿದರು. ಜಿಲ್ಲಾ ಗ್ರಂಥಾಲಯ ಸಮಿತಿಯ ಸದಸ್ಯರು ಮಕ್ಕಳೊಂದಿಗೆ ಇದ್ದರು.

nature trip for kids to posadigumpa a great experience and learning

ಕಾಸರಗೋಡು: ಬೇಸಗೆ ರಜೆಯಲ್ಲಿ ಗ್ರಂಥಾಲಯ ಸಮಿತಿಯು ವಿದ್ಯಾರ್ಥಿಗಳಿಗಾಗಿ ನಡೆಸುತ್ತಿರುವ ಕಾರ್ಯಕ್ರಮದ ಅಂಗವಾಗಿ ಅಂಗಡಿಮೊಗರು ಬಿ. ಕೆ. ಮೊಹಮ್ಮದ್ ಮಾಸ್ಟರ್ ಗ್ರಂಥಾಲಯದ ನೇತೃತ್ವದಲ್ಲಿಪ್ರಕೃತಿಯಾತ್ರೆ ನಡೆಯಿತು.

ಮಂಜು, ಕಾಡು, ಗಾಳಿ, ಪಕ್ಷಿಗಳು ತುಂಬಿಕೊಂಡಿರುವ ಪೊಸಡಿಗುಂಪೆಗೆ ಮಕ್ಕಳು ಪ್ರಯಾಣ ಬೆಳೆಸಿದರು. ಒಂದು ಭಾಗದಲ್ಲಿನೇತ್ರಾವತಿ ನದಿ, ಇನ್ನೊಂದೆಡೆ ದೂರದ ಅರಬಿಸಮುದ್ರ, ಮಂಗಳೂರು ನಗರದ ಭಾಗಗಳು ಮೊದಲಾದವುಗಳನ್ನು ಬೆಟ್ಟದ ತುಂದಿಯಿಂದ ನೋಡಿ ಮಕ್ಕಳು ಹಿಂತಿರುಗಿದರು. ನಾನಾ ಪಕ್ಷಿಗಳು, ಹೂವುಗಳು, ಸೂರ್ಯಾಸ್ತಮಾನದ ಭಂಗಿಯನ್ನು ಮಕ್ಕಳು ಆಸ್ವಾದಿಸಿದರು. ಜಿಲ್ಲಾಗ್ರಂಥಾಲಯ ಸಮಿತಿ ಸದಸ್ಯ ಬಶೀರ್ ಕೊಟ್ಯೂಡಲ್ , ಪ್ರೇಮ ಎಸ್ . ರೈ, ಸಯೀದ್ ಪರ್ಲಾಡಂ ಮಕ್ಕಳೊಂದಿಗಿದ್ದರು.

ಚಿತ್ರ: 29ಕೆಎಸ್ ಎಲ್ ಗುಂಪೆ