ಬೇಡಡ್ಕ: ನವ ವಿವಾಹಿತೆ ಅಶ್ವತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೇತೂರುಪಾರೆ ವಟ್ಟಂತಟ್ಟ ದಿ. ಸುಗು ಅವರ ಪುತ್ರಿ ಅಶ್ವತಿ(25) ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿನರ್ಸ್ ಆಗಿದ್ದು, ಅಂಬಲತ್ತರ ಪರಕ್ಕಳಾಯಿ ಚೀಟಕ್ಕಾವು ರೂಪೇಶ್ ಅವರ ಪತ್ನಿ. ಅವರ ವಿವಾಹವು ಏ. 5 ರಂದು ನಡೆದಿತ್ತು.
ಮೇ 18ರಂದು ತನ್ನ ಕಾಸರಗೋಡಿನ ನಿವಾಸದಲ್ಲಿವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ಅಶ್ವತಿಯನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತರಾದರು. ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಚಿತ್ರ.. 30ಎಂಯುಅಶ್ವತಿ

