ಆರಿಕ್ಕಾಡಿ ಟೋಲ್ ಪ್ಲಾಜಾ: 24 ದಿನಗಳಲ್ಲಿ2.71ಕೋಟಿ ರೂ ಸಂಗ್ರಹ

Contributed byshreemolu.93@gmail.com|Vijaya Karnataka

ಆರಿಕ್ಕಾಡಿ ಟೋಲ್ ಪ್ಲಾಜಾ 24 ದಿನಗಳ ಕಾರ್ಯಾಚರಣೆಯಲ್ಲಿ 2.71 ಕೋಟಿ ರೂ. ಸಂಗ್ರಹಿಸಿದೆ. ಟೋಲ್ ಪ್ಲಾಜಾ ನಿರ್ಮಾಣಕ್ಕೆ 2.15 ಕೋಟಿ ರೂ. ವೆಚ್ಚವಾಗಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಈ ಮಾಹಿತಿ ಬಹಿರಂಗವಾಗಿದೆ. ಟೋಲ್ ವಸೂಲಾತಿ ವಿರೋಧಿಸಿ ಕ್ರಿಯಾ ಸಮಿತಿ ಹೋರಾಟ ನಡೆಸಿತ್ತು. ಕೇರಳ ಉಚ್ಚ ನ್ಯಾಯಾಲಯದ ಆದೇಶದಂತೆ ಟೋಲ್ ಪ್ಲಾಜಾ ರದ್ದುಗೊಳಿಸಲಾಗಿತ್ತು.

rs 271 crores collected in 24 days from arikkadi toll plaza

ಕುಂಬಳೆ: ಆರಿಕ್ಕಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿಸ್ಥಾಪಿಸಲಾಗಿದ್ದ ವಿವಾದಿತ ಆರಿಕ್ಕಾಡಿ ಟೋಲ್ ಪ್ಲಾಜಾ ಕಾರ್ಯಾಚರಣೆ ನಡೆಸಿದ್ದ 24 ದಿನಗಳಲ್ಲಿ2.71 ಕೋಟಿ ರೂ. ಸಂಗ್ರಹಿಸಲಾಗಿತ್ತೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬಹಿರಂಗ ಪಡಿಸಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಕೋರಲಾಗಿದ್ದ ಮನವಿಯ ಆಧಾರದಲ್ಲಿಈ ಕುರಿತಾದ ವಿಷಯ ಬಹಿರಂಗ ಪಡಿಸಲಾಗಿದೆ. ಇದೇ ವೇಳೆ ಟೋಲ್ ಪ್ಲಾಜಾ ನಿರ್ಮಾಣಕ್ಕಾಗಿ 2.15 ಕೋಟಿ ರೂ. ವೆಚ್ಚ ತಗುಲಿದೆ ಎಂಬ ವಿಷಯನ್ನೂ ಪ್ರಾಧಿಕಾರ ಹೇಳಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಕಣ್ಣೂರು, ಪ್ರಾಜೆಕ್ಟ್ ಇಂಪ್ಲಿಮೆಂಟೇಶನ್ ಘಟಕದಿಂದ ಕೋರಿದ ಮನವಿ ಆಧಾರದಲ್ಲಿಮಾಹಿತಿ ಹಕ್ಕು ಆಯೋಗ ಉತ್ತರ ನೀಡಿದೆ. ಟೋಲ್ ಪ್ಲಾಜಾ ಕಾರ್ಯಾಚರಣೆ ವೇಳೆ ಸುಂಕ ವಸೂಲಾತಿಯನ್ನು ವಿರೋಧಿಸಿ ಕ್ರಿಯಾ ಸಮಿತಿ ತೀವ್ರ ಹೋರಾಟ ನಡೆಸಿತ್ತು. ಬಳಿಕ ಕೇರಳ ಉಚ್ಛ ನ್ಯಾಯಾಲಯದ ಆದೇಶದಂತೆ ಆರಿಕ್ಕಾಡಿ ಟೋಲ್ ಪ್ಲಾಜಾ ರದ್ದುಗೊಳಿಸಲಾಗಿತ್ತು.