ತೇವಾಂಶ ಆಧರಿಸಿ ಬಿತ್ತನೆ ಮಾಡಿ

Contributed bymanjunathrd59@gmail.com|Vijaya Karnataka

ಹಾವೇರಿ ಜಿಲ್ಲೆಯಲ್ಲಿ ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ಬಿತ್ತನೆ ಬೀಜ ವಿತರಣೆ ಆರಂಭವಾಗಿದೆ. ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರು ಭೂಮಿ ಹದಗೊಳಿಸಿ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಸೋಯಾಬಿನ್ ಬಿತ್ತನೆಗೆ ಭೂಮಿಯಲ್ಲಿ ಸಾಕಷ್ಟು ತೇವಾಂಶವಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಇನ್ನು, ರಾಣೇಬೆನ್ನೂರಿನಲ್ಲಿ ಶಿವಕುಮಾರ ಚಂದ್ರಶೇಖರ ಮೋಟೆಬೆನ್ನೂರ ಎಂಬುವರು ಮೇ 4ರಂದು ಕಾಣೆಯಾಗಿದ್ದಾರೆ. ಅವರನ್ನು ಪತ್ತೆಹಚ್ಚಲು ಪೊಲೀಸರು ಸಾರ್ವಜನಿಕರ ಸಹಾಯ ಕೋರಿದ್ದಾರೆ.

moisture based farming practices for crop sowing

ತೇವಾಂಶ ಆಧರಿಸಿ ಬಿತ್ತನೆ ಮಾಡಿ

ಹಾವೇರಿ: ಕೃಷಿ ಇಲಾಖೆಯಿಂದ ಸಹಾಯಧನದಡಿ ಬಿತ್ತನೆ ಬೀಜ ವಿತರಣಾ ಕಾರ್ಯ ಪ್ರಾರಂಭವಾಗಿರುತ್ತದೆ. ಪ್ರಸಕ್ತ 2026ನೇ ಸಾಲಿನ ಮುಂಗಾರು ಹಂಗಾಮಿನಲ್ಲಿಉತ್ತಮ ಮಳೆಯಾಗುತ್ತಿದ್ದು, ರೈತರು ಕೃಷಿ ಭೂಮಿಯನ್ನು ಹದಗೊಳಿಸುತ್ತಿದ್ದು, ರೈತರು ಅಲ್ಲಲ್ಲಿಬಿತ್ತನೆ ಕಾರ್ಯ ಪ್ರಾರಂಭಿಸಿರುತ್ತಾರೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. ರೈತರು ವಿಶೇಷವಾಗಿ ಸೋಯಾಬಿನ್ ಬಿತ್ತನೆ ಮಾಡುವಾಗ ಭೂಮಿಯ ತೇವಾಂಶ ಕಡಿಮೆ ಇದ್ದಲ್ಲಿಯಾರು ಬಿತ್ತನೆ ಮಾಡಬಾರದು. ಒಂದು ವೇಳೆ ಕಡಿಮೆ ತೇವಾಂಶದಲ್ಲಿಬಿತ್ತನೆ ಮಾಡಿದರೆ ಬಿತ್ತನೆ ಬೀಜಗಳ ಮೊಳಕೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪೂರ್ಣ ಪ್ರಮಾಣದ ತೇವಾಂಶವನ್ನು ಖಚಿತಪಡಿಸಿಕೊಂಡು ಸೋಯಾಬೀನ್ ಬಿತ್ತನೆ ಮಾಡಬೇಕು ಎಂದು ಪ್ರಕಟಣೆಯಲ್ಲಿತಿಳಿಸಿದ್ದಾರೆ.

=

ವ್ಯಕ್ತಿ ನಾಪತ್ತೆ

ಹಾವೇರಿ: ಜಿಲ್ಲೆಯ ರಾಣೇಬೆನ್ನೂರ ಶಹರದ ಸಿದ್ದೇಶ್ವರ ನಗರದ ನಿವಾಸಿ 40 ವರ್ಷದ ಶಿವಕುಮಾರ ಚಂದ್ರಶೇಖರ ಮೋಟೆಬೆನ್ನೂರ ಎಂಬಾತ 2026 ಮೇ.4 ರಂದು ಮನೆಯಿಂದ ಹೋದವನು ಕಾಣೆಯಾಗಿರುವುದಾಗಿ ರಾಣೇಬೆನ್ನೂರು ಶಹರ ಪೊಲೀಸ್ ಠಾಣೆಯಲ್ಲಿದೂರು ದಾಖಲಿಸಲಾಗಿದೆ. ಕಾಣೆಯಾದ ವ್ಯಕ್ತಿ 5.2 ಅಡಿ ಎತ್ತರ, ಸಾಧಾರಣ ಮೈಕಟ್ಟು ಹೊಂದಿದ್ದು, ಹಳದಿ ಬಣ್ಣದ ಶರ್ಟ್ , ಕಪ್ಪು ಪ್ಯಾಂಟ್ ಧರಿಸಿದ್ದಾನೆ. ಕಾಣೆಯಾದ ವ್ಯಕ್ತಿ ಪತ್ತೆಯಾದಲ್ಲಿಹತ್ತಿರದ ಪೊಲೀಸ್ ಠಾಣೆಗೆ ಅಥವಾ ರಾಣೇಬೆನ್ನೂರು ಶಹರ ಪೊಲೀಸ್ ಠಾಣೆ ದೂ.08373-266333, ಪಿಎಸ್ ಐ ಮೊ.9480804550 ಅಥವಾ ಶಹರ ವೃತ್ತ ಸಿಪಿಐ ಮೊ.9480804532 ಸಂಪರ್ಕಿಸಬಹುದೆಂದು ರಾಣೇಬೆನ್ನೂರು ಶಹರ ಪೊಲೀಸ್ ಠಾಣೆ ಆರಕ್ಷಕ ಉಪ ನಿರೀಕ್ಷಕರು ಪ್ರಕಟಣೆಯಲ್ಲಿತಿಳಿಸಿದ್ದಾರೆ.