ಕಾಸರಗೋಡು : ಕಣ್ಣೂರು ಜಿಲ್ಲೆಯ ಪಯ್ಯನ್ನೂರು ತಾಲೂಕು ಮಾತಮಂಗಲಂ ಎಂಬಲ್ಲಿಕ್ಯಾಂಪ್ಕೋ ನಿಯಮಿತ ಸಂಸ್ಥೆಯ ಶಾಖೆಯು ಮೇ 26ರಂದು ಬೆಳಗ್ಗೆ 10.30ಕ್ಕೆ ಉದ್ಘಾಟನೆಗೊಳ್ಳಲಿರುವುದು.
ಹಿರಿಯ ರೈತ ಸದಸ್ಯರು ಉದ್ಘಾಟಿಸಲಿದ್ದಾರೆ. ಕ್ಯಾಂಪ್ಕೋ ನಿರ್ದೇಶಕ ರಾಧಾಕೃಷ್ಣನ್ ಕರಿಂಜಾಲ್ ಸ್ವಾಗತಿಸಲಿರುವರು. ಪಯ್ಯನ್ನೂರು ವಿಧಾನಸಭಾ ಕ್ಷೇತ್ರ ಶಾಸಕ ಪಿ. ಕುಂಞ್ಞಿಕೃಷ್ಣನ್ ಉದ್ಘಾಟಿಸಲಿರುವರು. ಕ್ಯಾಂಪ್ಕೋ ಅಧ್ಯಕ್ಷ ಎಸ್ . ಆರ್ . ಸತೀಶ್ಚಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ವಿ.ಸತ್ಯನಾರಾಯಣ, ಎರಮಂ ಕುಟ್ಟೂರು ಪಂಚಾಯಿತಿ ಅಧ್ಯಕ್ಷೆ ಪ್ರೀತ ಕೆ., ವಾರ್ಡ್ ಸದಸ್ಯ ಬಿಂದು ಪಿ.ವಿ. ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳಲಿರುವರು. ಕ್ಯಾಂಪ್ಕೋ ಉಪಾಧ್ಯಕ್ಷ ಪದ್ಮರಾಜ ಪಟ್ಟಾಜೆ ವಂದಿಸಲಿರುವರು.

