ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 75ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿಅಮೃತ ಮಹೋತ್ಸವ, ಸಭಾಭವನ, ಗೋದಾಮು ಕಟ್ಟಡ ಉದ್ಘಾಟನೆಹಾಗೂ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ನ.18ರಂದು ಸಂಘದ ಪ್ರಧಾನ ಕಚೇರಿ ಪಾಂಚಜನ್ಯದ ಆವರಣದಲ್ಲಿನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸಹಕಾರ ರತ್ನ ಸತೀಶ್ ಕೆ. ಕಾಶಿಪಟ್ಣ ತಿಳಿಸಿದರು.ಅವರು ಸಂಘದ ಪ್ರಧಾನ ಕಚೇರಿ ಪೆರಾಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿಮಾತನಾಡಿದರು.
ನ.18ರಂದು ಬೆಳಗ್ಗೆ ಕಾಶಿಪಟ್ಣ ಪ್ರೌಢಶಾಲೆಯಿಂದ ಸಂಘದ ಕಚೇರಿಯವರೆಗೆ ಸ್ತಬ್ಧಚಿತ್ರಗಳೊಂದಿಗೆ ಮೆರವಣಿಗೆ ನಡೆಯಲಿದೆ. ಬಳಿಕ ಬೆಳಗ್ಗೆ 9.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ , ಸಹಕಾರ ರತ್ನ ಡಾ.ಎಂ. ಎನ್ . ರಾಜೇಂದ್ರ ಕುಮಾರ್ ನೂತನ ಕಟ್ಟಡ ಉದ್ಘಾಟನೆ ಹಾಗೂ ಉತ್ತಮ ನವೋದಯ ಸಂಘಗಳಿಗೆ ಗೌರವಾರ್ಪಣೆ ಸಲ್ಲಿಸಲಿದ್ದಾರೆ. ಸಚಿವ ಲಕ್ಷ್ಮಣ ಸಂಗಪ್ಪ ಸವದಿ ಸಂಗಮ ಸಭಾಭವನ ಹಾಗೂ ಸಚಿವ ಯು.ಟಿ. ಖಾದರ್ ಪಂಚಸಿರಿ ಸಭಾಭವನ, ಶಾಸಕ ಹರೀಶ್ ಪೂಂಜ ರಸಗೊಬ್ಬರ ವಿಭಾಗ ಉದ್ಘಾಟನೆ ನಡೆಸಲಿದ್ದಾರೆ. ಸಂಘದ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಪಡಿತರ ವಿಭಾಗ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಲಿಫ್ಟ್ ಉದ್ಘಾಟಿಸಲಿದ್ದಾರೆ ಎಂದರು.
ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಸಿಎಸ್ ಸಿ ವಿಭಾಗ ಉದ್ಘಾಟನೆ, ದ.ಕ. ಸಹಕಾರಿ ಹಾಲು ಉತ್ಪಾದಕ ಒಕ್ಕೂಟ ಅಧ್ಯಕ್ಷ ರವಿರಾಜ್ ಹೆಗ್ಡೆ ಉತ್ತಮ ಹೈನುಗಾರರಿಗೆ ಸನ್ಮಾನ ನಡೆಸಲಿದ್ದಾರೆ. ಮಾಜಿ ಸಚಿವ ವಿನಯ ಕುಮಾರ್ ಸೊರಕೆ ವಸತಿ ಸಮುಚ್ಚಯ, ದ.ಕ. ಜಿಲ್ಲಾಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಸಹಕಾರ ಸಪ್ತಾಹ, ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟದ ಆನುವಂಶೀಯ ಆಡಳಿತ ಮೊಕ್ತೇಸರ ಜೀವಂಧರ್ ಕುಮಾರ್ ಯಾನೆ ಕಂಚಿ ಪೂವಣಿ ಸಹಕಾರಿ ಜಾಥಾ, ಶಿರ್ತಾಡಿ ಕಾರ್ಮೆಲ್ ಮಾತೆಯರ ದೇವಾಲಯ ಧರ್ಮಗುರು ಫಾ. ಸಿಲ್ವೆಸ್ಟರ್ ವಿನ್ಸೆಂಟ್ ಲೋಬೊ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಚೇರಿ ಉದ್ಘಾಟಿಸಲಿದ್ದಾರೆ. ಅಳದಂಗಡಿ ಅರಮನೆ ತಿಮ್ಮಣ್ಣರಸ ಡಾ. ಪದ್ಮಪ್ರಸಾದ್ ಅಜಿಲ ರೈತ ಸಂಗಮ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ದ.ಕ. ಜಿಲ್ಲಾಸಹಕಾರಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಸಹಕಾರಿ ಧ್ವಜಾರೋಹಣ, ಎಸ್ ಕೆಡಿಆರ್ ಡಿಪಿ ಸಿಇಒ ಅನಿಲ್ ಕುಮಾರ್ ಉತ್ತಮ ಸಂಘಗಳಿಗೆ ಗೌರವಾರ್ಪಣೆ ಸಲ್ಲಿಸಲಿದ್ದಾರೆ. ಮಂಗಳೂರು ಮಾಸ್ ಅಧ್ಯಕ್ಷ ಸೀತಾರಾಮ ರೈ ಉತ್ತಮ ಕೃಷಿಕರಿಗೆ ಸನ್ಮಾನ ನೆರವೇರಿಸಲಿದ್ದಾರೆ.
ಪಂಚ ಗ್ಯಾರಂಟಿ ಅನುಷ್ಠಾ್ಠನ ಸಮಿತಿ ಬೆಳ್ತಂಗಡಿ ಅಧ್ಯಕ್ಷ ರಕ್ಷಿತ್ ಶಿವರಾಂ ಸಭಾ ಕೊಠಡಿ ಉದ್ಘಾಟನೆ ನಡೆಸಲಿದ್ದಾರೆ. ಕುದ್ರೋಳಿ ಗೋಕರ್ಣನಾಥೇಶ್ಚರ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಸಾಧಕರನ್ನು ಸನ್ಮಾನಿಸಲಿದ್ದಾರೆ. ದ.ಕ. ಜಿಲ್ಲಾಸಹಕಾರಿ ಸಂಘಗಳ ಉಪನಿಬಂಧಕ ಎಚ್ . ಎನ್ . ರಮೇಶ್ ಕ್ಯಾಲೆಂಡರ್ ಬಿಡುಗಡೆಗೊಳಿಸಲಿದ್ದಾರೆ. ಜಿಲ್ಲಾಸಹಕಾರಿ ಸಂಘದ ಸಿಇಒ ಗೋಪಾಲಕೃಷ್ಣ ಭಟ್ ಕೆ. ಹಾಗೂ ಪುತ್ತೂರು ವಿಭಾಗದ ಸಹಕಾರಿ ಸಂಘಗಳ ನಿಬಂಧಕ ಎಸ್ . ಎಂ. ರಘು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.
ಸಂಜೆ ಸಭಾ ಕಾರ್ಯಕ್ರಮದಲ್ಲಿಸಹಕಾರಿ ರತ್ನ ಸಂಘದ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ ಅಧ್ಯಕ್ಷತೆ ವಹಿಸಲಿದ್ದು, ನವೋದಯ ವಿವಿಧೋದ್ದೇಶ ಸಹಕಾರಿ ಸಂಘಗಳ ಮಂಗಳೂರು ಅಧ್ಯಕ್ಷ ಮೇಘರಾಜ್ , ಪೆರಾಡಿ ಬದ್ರಿಯಾ ಜಮಾ ಮಸೀದಿ ಧರ್ಮಗುರು ಜ. ಸಫ್ವಾನ್ ಬಾಖವಿ ಮಪಾಲ್ , ಗುರುದೇವ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಬೆಳ್ತಂಗಡಿ ಅಧ್ಯಕ್ಷ ಭಗೀರಥ ಜಿ., ಕಲಾವಿದ ದೇವದಾಸ್ ಕಾಪಿಕಾಡ್ , ಜಾದೂಗಾರ ಕುದ್ರೋಳಿ ಗಣೇಶ್ , ಸಂಘದ ಮಾಜಿ ಅಧ್ಯಕ್ಷರಾದ ಶಂಕರ್ ಭಟ್ ಬಾಲ್ಯ, ಹೇಮರಾಜ್ ಕೆ., ಪಿ.ಕೆ.ರಾಜು ಪೂಜಾರಿ ಹಾಗೂ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಎನ್ . ಆರ್ . ಸೀತಾರಾಮ ರೈ ಉಪಸ್ಥಿತರಿರುವರು. ಸಂಗೀತ ರಸಮಂಜರಿ, ಕುದ್ರೋಳಿ ಗಣೇಶ್ ತಂಡದ ಜಾದೂ ಹಾಗೂ ದೇವದಾಸ್ ಕಾಪಿಕಾಡ್ ಅವರ ಚಾಪರ್ಕ ಕಲಾವಿದರ ಯಾನೊರಿ ಬರೊಲಿಯಾ ನಾಟಕ ಆಯೋಜಿಸಲಾಗಿದೆ ಎಂದರು.
ಉಪಾಧ್ಯಕ್ಷ ಶ್ರೀಪತಿ ಉಪಾಧ್ಯಾಯ, ನಿರ್ದೇಶಕರಾದ ಎನ್ . ಆರ್ . ಸೀತಾರಾಮ ರೈ, ಪ್ರವೀಣ್ ಗಿಲ್ಬರ್ಟ್ ಪಿಂಟೊ, ದೇವಕಿ ಡಿ. ಶೆಟ್ಟಿ, ಸುಜಾತಾ, ಕೃಷ್ಣಪ್ಪ, ರಾಜೇಶ್ ಎನ್ ., ಸುರೇಶ್ ಅಂಚನ್ , ಅಕ್ಷಯ್ ಕುಮಾರ್ ವಿಜಯ್ ನಾಯ್ಕ, ಮಾಜಿ ಅಧ್ಯಕ್ಷ ಹೇಮರಾಜ್ ಕೆ.ಹಾಗೂ ಸಿಇಒ ಹೇಮಾ ಉಪಸ್ಥಿತರಿದ್ದರು.