ಎಸ್ ಸ್ಸಿ, ಎಸ್ಟಿ ದೌರ್ಜನ್ಯ ತಡೆ ಸಮಿತಿ ಸಭೆ ಕರೆಯುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾಸಮಿತಿ ನೇತೃತ್ವದಲ್ಲಿಬಿದರಹಳ್ಳಿ ಮತ್ತು ಎಂ.ಜಿ.ದೊಡ್ಡಿ ಗ್ರಾಮದ ಸುಳ್ವಾಡಿ ವಿಷ ಪ್ರಸಾದ ಸಂತ್ರಸ್ತರು ನಗರದ ಜಿಲ್ಲಾಡಳಿತ ಭವನದಲ್ಲಿಜಿಲ್ಲಾಧಿಕಾರಿ ಶ್ರೀರೂಪ ಅವರಿಗೆ ಮನವಿ ಸಲ್ಲಿಸಿದರು.2018 ಡಿ.14 ರಂದು ಕಿಚ್ಚುಗುತ್ತಿ ಮಾರಮ್ಮನ ದೇವಸ್ಥಾನದಲ್ಲಿಪ್ರಸಾದದಲ್ಲಿವಿಷ ಬೆರಸಿ ಜನರಿಗೆ ಕೊಟ್ಟ ಘಟನೆಯಲ್ಲಿ17 ಮಂದಿ ಮರಣ ಹೊಂದಿದ್ದು, 117 ಮಂದಿ ನಾನಾ ಕಾಯಿಲೆಯಿಂದ ಬಳಲುತ್ತಿದ್ದಾರೆæ. ಈ ವಿಚಾರವಾಗಿ 8 ವರ್ಷ ಚಾಮರಾಜನಗರ ಜಿಲ್ಲಾನ್ಯಾಯಾಲಯದಲ್ಲಿಕೇಸು ನಡೆಯುತ್ತಿತ್ತು. ನವೆಂಬರ್ 11, 2026 ರಂದು ಜಿಲ್ಲಾನ್ಯಾಯಾಲಯದಲ್ಲಿವಿಚಾರಣೆ ನಡೆಸಿ ಆರೋಪಿ ಇಮ್ಮಡಿ ಮಹದೇವಸ್ವಾಮಿ ಅವರ ಜಾಮೀನು ರದ್ದು ಪಡಿಸಲಾಗಿದೆ. ಇಮ್ಮಡಿ ಮಹದೇವಸ್ವಾಮಿ ಅವರ ಜಾಮೀನಿಗೆ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ. ಆರೋಪಿ ಇಮ್ಮಡಿ ಮಹದೇವಸ್ವಾಮಿ ಅವರ ವಿರುದ್ಧ ಸರಿಯಾದ ರೀತಿಯಲ್ಲಿಉಚ್ಚ ನ್ಯಾಯಾಲಯಕ್ಕೆ ಸಾಕ್ಷ್ಯ ನೀಡಿಲ್ಲ. ಸಂತ್ರಸ್ತರು ಹೆಚ್ಚಿನ ಸಂಖ್ಯೆಯಲ್ಲಿದಲಿತ ಸಮುದಾಯದವರಾಗಿದ್ದಾರೆ. ಹಾಗಾಗಿ ಎಸ್ ಸಿ, ಎಸ್ಟಿ ಸಭೆಯನ್ನು ಕರೆದು ಸೂಕ್ತ ದಾಖಲೆಗಳನ್ನು ಒದಗಿಸಿಕೊಡಬೇಕು ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿರುವ ಮನವಿಯಲ್ಲಿಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ದೊಡ್ಡಿಂದುವಾಡಿ ಕೆ.ಸಿದ್ದರಾಜು ಒತ್ತಾಯಿಸಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತಾಲೂಕು ಸಂಘಟನಾ ಸಂಚಾಲಕ ದೇವರಾಜು, ಹನೂರು ತಾಲೂಕು ಸಂಚಾಲಕ ಎಂ.ಮುರುಗೇಶ್ , ಷಣ್ಮುಗ ಸೇರಿದಂತೆ ಇತರರು ಹಾಜರಿದ್ದರು.
ಸಿಎಚ್ ಎನ್ 21ಎಸ್ ಎಂಆರ್ 6
ಎಸ್ ಸ್ಸಿ, ಎಸ್ಟಿ ದೌರ್ಜನ್ಯ ತಡೆ ಸಮಿತಿ ಸಭೆ ಕರೆಯುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾಸಮಿತಿ ನೇತೃತ್ವದಲ್ಲಿಬಿದರಹಳ್ಳಿ ಮತ್ತು ಎಂ.ಜಿ.ದೊಡ್ಡಿ ಗ್ರಾಮದ ಸುಳ್ವಾಡಿ ವಿಷ ಪ್ರಸಾದ ಸಂತ್ರಸ್ತರು ನಗರದ ಜಿಲ್ಲಾಡಳಿತ ಭವನದಲ್ಲಿಜಿಲ್ಲಾಧಿಕಾರಿ ಶ್ರೀರೂಪ ಅವರಿಗೆ ಮನವಿ ಸಲ್ಲಿಸಿದರು.