ಉಪ್ಪಿನ ಬೆಟಗೇರಿ

Contributed by: prakashhugar3@gmail.com|Vijaya Karnataka•
Vijay Karnataka
ಉಪ್ಪಿನ ಬೆಟಗೇರಿಯಲ್ಲಿಸಂಭ್ರಮ ಶನಿವಾರ

ವಿಕ ಸುದ್ದಿಲೋಕ ಉಪ್ಪಿನ ಬೆಟಗೇರಿ
ವಿದ್ಯಾರ್ಥಿ ದೆಸೆಯಿಂದ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡರೆ ಉಜ್ವಲ ಭವಿಷ್ಯ ರೂಪುಗೊಳ್ಳುತ್ತದೆ ಎಂದು ವಿದ್ಯಾರ್ಥಿಗಳಿಗೆ ಶಿಕ್ಷಕಿ ವಿಜಯಲಕ್ಷ್ಮಿ ಕಿವಿಮಾತು ಹೇಳಿದರು.

ಅವರು, ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿಸಂಭ್ರಮ ಶನಿವಾರ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿಮಾತನಾಡಿದರು.

ಪ್ರತಿ ತಿಂಗಳ ಮೂರನೇ ಶನಿವಾರವನ್ನು ಬ್ಯಾಗ್ ಫ್ರೀ ಡೇ ಮತ್ತು ಸಂಭ್ರಮ ಶನಿವಾರವಾಗಿ ಆಚರಿಸಲಾಗುತ್ತಿದ್ದು, ಈ ವಾರ ಆರೋಗ್ಯಕರ ಜೀವನ ಶೈಲಿ ಎಂಬ ಧ್ಯೇಯದೊಂದಿಗೆ ಆಚರಿಸಲಾಗುತ್ತಿದೆ ಎಂದರು.

ಪ್ರಧಾನ ಗುರು ಬಿ.ವಿ.ಸತ್ಯಣ್ಣವರ ಮಾತನಾಡಿ, ವಿದ್ಯಾರ್ಥಿಗಳು ಬೆಳಗ್ಗೆ ಬೇಗ ಏಳುವುದು, ತಂದೆ ತಾಯಿಗಳಿಗೆ ನೆರವಾಗುವುದು, ಸಮತೋಲಿತ ಆಹಾರ ಸೇವನೆ, ಪುಸ್ತಕಗಳ ಓದು, ಆಟೋಟ ಸೇರಿದಂತೆ ರಚನಾತ್ಮಕ ಕಾರ್ಯಗಳಲ್ಲಿತೊಡಗುವ ಮೂಲಕ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.

ವಿದ್ಯಾರ್ಥಿಗಳು ಆರೋಗ್ಯಕರ ಜೀವನ ಶೈಲಿ ಕುರಿತು ಕಿರು ನಾಟಕ ಪ್ರಸ್ತುತ ಪಡಿಸಿದರು. ಶಿಕ್ಷಕಿಯರಾದ ಎಸ್ .ಎಂ.ನದಾಫ, ಎಸ್ .ಪಿ.ಹದಳಗಿ ಸೇರಿದಂತೆ ಶಿಕ್ಷಕರು, ಮಕ್ಕಳ ಪಾಲಕರು ಇದ್ದರು.

ಫೋಟೋ 1:

ಉಪ್ಪಿನ ಬೆಟಗೇರಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿಸಂಭ್ರಮ ಶನಿವಾರ ಪ್ರಯುಕ್ತ ಮಕ್ಕಳು ಕಿರು ನಾಟಕ ಪ್ರಸ್ತುತ ಪಡಿಸಿದರು.