ದೇವರಹಳ್ಳಿಯಲ್ಲಿಕುಡಿವ ನೀರಿಗೆ ಹಾಹಾಕಾರ

Contributed by: npatangegkl@gmail.com|Vijaya Karnataka•
Vijay Karnataka
21ಜಿಕೆಎಲ…1:

ದೇವರಹಳ್ಳಿ ಗ್ರಾಮದಲ್ಲಿಮೂಲಸೌಕರ್ಯಗಳ ಕೊರತೆ ಖಂಡಿಸಿ ಬಾರುಕೋಲು, ಖಾಲಿ ಕೊಡ ಹಿಡಿದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ದೇವರಹಳ್ಳಿಯಲ್ಲಿಕುಡಿವ ನೀರಿಗೆ ಹಾಹಾಕಾರ

ಬಾರುಕೋಲು ಹಿಡಿದು ಗ್ರಾಮಸ್ಥರ ಪ್ರತಿಭಟನೆ | ಜೆಜೆಎಂ ಕಾಮಗಾರಿ ವಿಫಲ ಆರೋಪ

ವಿಕ ಸುದ್ದಿಲೋಕ ಗುರುಮಠಕಲ…

ಸ್ವಾತಂತ್ರ್ಯ ಬಂದು ಎಂಟು ದಶಕಗಳು ಕಳೆದರೂ ದೇವರಹಳ್ಳಿ ಗ್ರಾಮದಲ್ಲಿಮೂಲಸೌಕರ್ಯಗಳ ಕೊರತೆ ನೀಗಿಲ್ಲ. ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದು, ಕೊಳಚೆ ನೀರು ಮತ್ತು ಸೊಳ್ಳೆಗಳ ಹಾವಳಿಯಿಂದ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ನೇತೃತ್ವದಲ್ಲಿಗ್ರಾಮಸ್ಥರು ಶುಕ್ರವಾರ ಬಾರುಕೋಲು, ಬೆತ್ತ ಹಾಗೂ ಖಾಲಿ ಕೊಡಗಳನ್ನು ಹಿಡಿದು ವಿನೂತನ ಪ್ರತಿಭಟನೆ ನಡೆಸಿದರು.

ತಾಲೂಕಿನ ಗಾಜರಕೋಟ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವರಹಳ್ಳಿಗೆ ಭೇಟಿ ನೀಡಿದ ಮುದ್ನಾಳ್ , ತಮಟೆ ಬಾರಿಸುತ್ತಾ ಗ್ರಾಮದ ಪ್ರಮುಖ ಬೀದಿಗಳಲ್ಲಿಸಂಚರಿಸಿ ಸಮಸ್ಯೆಗಳನ್ನು ಪರಿಶೀಲಿಸಿದರು.

ನಂತರ ಮಾತನಾಡಿದ ಅವರು, ರೈತರ ಜಮೀನಿನ ಪಂಪ್ ಸೆಟ್ ಗಳಿಂದ ಎತ್ತಿನ ಗಾಡಿಗಳಲ್ಲಿಡ್ರಮ್ ಗಳ ಮೂಲಕ ಕುಡಿಯುವ ನೀರು ತರುವ ದುಸ್ಥಿತಿ ಇದೆ. 76 ಲಕ್ಷ ವೆಚ್ಚದ ಜೆಜೆಎಂ ಕಾಮಗಾರಿ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತಿದ್ದು, ನಿರ್ಮಾಣಗೊಂಡ ನೀರಿನ ಟ್ಯಾಂಕ್ ಕೂಡ ಬಳಕೆಯಾಗುತ್ತಿಲ್ಲಎಂದು ಆರೋಪಿಸಿದರು.

ಗ್ರಾಮದ ಚರಂಡಿಗಳಲ್ಲಿಕೊಳಚೆ ನೀರು ನಿಂತು ದುರ್ವಾಸನೆ ಹರಡುತ್ತಿದೆ. ಸೊಳ್ಳೆಗಳ ಕಾಟದಿಂದ ಸಾಂಕ್ರಾಮಿಕ ರೋಗ ಬರುವ ಆತಂಕವಿದೆ. ಸಿಸಿ ರಸ್ತೆ, ಚರಂಡಿ ನಿರ್ಮಾಣ, ಕೈಪಂಪ್ ದುರಸ್ತಿ, ನೀರಿನ ಪೈಪ್ ಲೈನ್ ಸೋರಿಕೆ ತಡೆ, ತೆರೆದ ಬಾವಿಗಳಿಗೆ ಜಾಲರಿ ಅಳವಡಿಕೆ ಹಾಗೂ ಮುಖ್ಯ ರಸ್ತೆಯ ಡಾಂಬರೀಕರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನ.24ರಂದು ರೇಣುಕಾ ಯಲ್ಲಮ್ಮ ಜಾತ್ರೆ ನಡೆಯಲಿದ್ದು, ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಆತಂಕ ಮೂಡಿಸಿದೆ. ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ 24ಗಂಟೆಯೊಳಗೆ ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆ ಆಲಿಸಬೇಕು. ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು. ಇಲ್ಲದಿದ್ದರೆ ಯಾದಗಿರಿ-ಗುರುಮಠಕಲ್ ಮುಖ್ಯರಸ್ತೆಯಲ್ಲಿಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿಮಲ್ಲೇಶಿ, ರಾಜಪ್ಪ, ಭೀಮಶಂಕರ, ಹಣಮಂತು, ಯಲ್ಲಾಲಿಂಗ, ಸಾಬಣ್ಣ, ಬಸ್ಸಪ್ಪ, ಯಲ್ಲಪ್ಪ, ಕಾಶಪ್ಪ, ಉಮೇಶ್ , ಶಿವಪ್ಪ, ಬಸಪ್ಪ, ರೇನಪ್ಪ, ನರಸಪ್ಪ, ಭಗವಂತ, ಶರಣಪ್ಪ, ಮೋಹನರೆಡ್ಡಿ, ಬುಗ್ಗಪ್ಪ, ಕಾಶಮ್ಮ, ಬಾಗಮ್ಮ, ಯಲ್ಲಮ್ಮ, ರಾಧಿಕಾ, ರಾಜಮ್ಮ, ಪಾರ್ವತಮ್ಮ, ಕಲಾವತಿ, ಹೇಸೆಂತಮ್ಮ, ಕಿಸ್ತಮ್ಮ, ಚೆಂದಪ್ಪ, ಮೊಗಲಪ್ಪ, ಭೀಮಶೇಪ್ಪ ಸೇರಿ ಗ್ರಾಮದ ಮುಖಂಡರು, ಮಹಿಳೆಯರು ಹಾಗೂ ಯುವಕರು ಇದ್ದರು.

ಕೋಟ್ **

ಸ್ವಾತಂತ್ರ್ಯ ಬಂದು 80 ವರ್ಷ ಕಳೆದರೂ ದೇವರಹಳ್ಳಿ ಗ್ರಾಮಕ್ಕೆ ಮೂಲಸೌಕರ್ಯ ಮರೀಚಿಕೆಯಾಗಿವೆ. ಕುಡಿವ ನೀರಿಗಾಗಿ ಜನರು ಎತ್ತಿನ ಗಾಡಿಗಳಲ್ಲಿಡ್ರಮ್ ಗಳನ್ನು ಸಾಗಿಸುವ ದುಸ್ಥಿತಿ ನಿರ್ಮಾಣವಾಗಿದೆ. 76 ಲಕ್ಷ ರೂ.ವೆಚ್ಚದ ಜೆಜೆಎಂ ಕಾಮಗಾರಿ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ತಕ್ಷಣ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು.

-ಉಮೇಶ ಕೆ.ಮುದ್ನಾಳ್ , ಸಾಮಾಜಿಕ ಹೋರಾಟಗಾರ