ಕಿಕ್ಕರ್ - ಆತಿಥೇಯರ ವಿರುದ್ಧ ಗಿಲ್ ಪಡೆ ಮೇಲುಗೈ, 2 ರನ್ ಗಳಿಂದ ಶತಕ ಮಿಸ್ ಮಾಡಿಕೊಂಡ ಗಿಲ್
ವೆಲ್ಲಿಂಗ್ಟನ್ (ನ್ಯೂಜಿಲೆಂಡ್ ): ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ವ್ ಪಂದ್ಯದ ಮೂರನೇ ದಿನದಾಟದಲ್ಲಿಕೆ.ಎಲ್ . ರಾಹುಲ್ ಶತಕ ಮತ್ತು ನಾಯಕ ಶುಬ್ಮನ್ ಗಿಲ್ ಆಕರ್ಷಕ ಅರ್ಧಶತಕದಾಟದ ನೆರವಿನಿಂದ ಭಾರತ ಮೇಲುಗೈ ಸಾಧಿಸಿದೆ. ಶನಿವಾರ ದಿನದಾಟದ ಅಂತ್ಯಕ್ಕೆ ಭಾರತ ತಂಡವು 4 ವಿಕೆಟ್ ನಷ್ಟಕ್ಕೆ 486 ರನ್ ಗಳಿಸಿ ಬೃಹತ್ ಮುನ್ನಡೆಯತ್ತ ದಾಪುಗಾಲಿಟ್ಟಿದೆ. ಸದ್ಯ ಭಾರತ 118 ರನ್ ಗಳ ಮುನ್ನಡೆ ಸಾಧಿಸಿದೆ.ಶುಕ್ರವಾರ ಸಂಜೆ ಯಶಸ್ವಿ ಜೈಸ್ವಾಲ್ (85) ಉತ್ತಮ ಆರಂಭ ನೀಡಿದ ಬಳಿಕ, ರಾಹುಲ್ (290 ಎಸೆತಗಳಲ್ಲಿ136) ಮತ್ತು ಯುವ ಬ್ಯಾಟರ್ ದೇವದತ್ ಪಡಿಕ್ಕಲ್ (175 ಎಸೆತಗಳಲ್ಲಿ80) ಎರಡನೇ ವಿಕೆಟ್ ಗೆ 165 ರನ್ ಗಳ ಅಮೂಲ್ಯ ಜೊತೆಯಾಟ ನೀಡಿದರು. ಬೆಂಗಳೂರಿನ ಈ ಜೋಡಿ ತಂಡದ ಬೃಹತ್ ಮೊತ್ತಕ್ಕೆ ಭದ್ರ ಬುನಾದಿ ಹಾಕಿತು.
ಬಾಕ್ಸ್ - ರಾಹುಲ್ ವಿಶೇಷ ದಾಖಲೆ
ರಾಹುಲ್ ತಮ್ಮ ಇನಿಂಗ್ಸ್ ನಲ್ಲಿ9 ಬೌಂಡರಿ ಹಾಗೂ ಸ್ಪಿನ್ನರ್ ಗ್ಲೆನ್ ಫಿಲಿ±್ಸ… ಎಸೆತದಲ್ಲಿಲಾಂಗ್ - ಆನ್ ಮೇಲೆ ಬಾರಿಸಿದ ಭರ್ಜರಿ ಸಿಕ್ಸರ್ ಮೂಲಕ ಗಮನ ಸೆಳೆದರು. ಈ ಶತಕದೊಂದಿಗೆ ರಾಹುಲ್ , ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ , ನ್ಯೂಜಿಲೆಂಡ್ ಮತ್ತು ಆಸ್ಪ್ರೇಲಿಯಾ ದೇಶಗಳೆಲ್ಲದರ ವಿರುದ್ಧವೂ ಟೆಸ್ವ್ ಶತಕ ಬಾರಿಸಿದ ಸಚಿನ್ ತೆಂಡೂಲ್ಕರ್ , ಮೊಹಮ್ಮದ್ ಅಜರುದ್ದೀನ್ ಮತ್ತು ರಾಹುಲ್ ದ್ರಾವಿಡ್ ನಂತರದ ನಾಲ್ಕನೇ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಶತಕವಂಚಿತ ಗಿಲ್
ಪಡಿಕ್ಕಲ್ ತಮ್ಮ ಎರಡನೇ ಟೆಸ್ವ್ ಅರ್ಧಶತಕ ಪೂರೈಸಿ ಸತತ ಮೂರನೇ ಶತಕದತ್ತ ಸಾಗುತ್ತಿದ್ದಾಗ ಕೈಲಿ ಜೇಮಿಸನ್ ಎಸೆತದಲ್ಲಿಔಟಾದರು. ಬಳಿಕ ಕ್ರೀಸ್ ಗೆ ಬಂದ ನಾಯಕ ಶುಬ್ಮನ್ ಗಿಲ್ (146 ಎಸೆತಗಳಲ್ಲಿ98) ಆರಂಭದಿಂದಲೇ ಕಿವೀಸ್ ಬೌಲರ್ ಗಳ ಮೇಲೆ ಸವಾರಿ ಮಾಡಿದರು. ಜೇಕಬ್ ಡಫಿ (1/180) ಎಸೆತದಲ್ಲಿಸಿಕ್ಸರ್ ಸಿಡಿಸಿ ಅರ್ಧಶತಕ ಪೂರೈಸಿದ ಗಿಲ್ , ಭಾರತಕ್ಕೆ ಮೊದಲ ಇನಿಂW್ಸ… ಮುನ್ನಡೆಯನ್ನೂ ತಂದುಕೊಟ್ಟರು. ಆದರೆ, ದಿನದ ಕೊನೆಯ ಓವರ್ ನಲ್ಲಿಡಫಿ ಎಸೆತದಲ್ಲಿಬೌಲ್ಡ… ಆಗುವ ಮೂಲಕ ಕೇವಲ 2 ರನ್ ಗಳಿಂದ ಶತಕ ವಂಚಿತರಾದರು.
ನಾಲ್ಕನೇ ವಿಕೆಟ್ ಗೆ ಗಿಲ್ ಜೊತೆಗೂಡಿದ ರಿಷಭ್ ಪಂತ್ (ಅಜೇಯ 55, 62 ಎಸೆತ) 100 ರನ್ ಗಳ ಜೊತೆಯಾಟ ನೀಡಿದರು. ಡಫಿ ಬೌಲಿಂಗ್ ನಲ್ಲಿಸತತ ಎರಡು ಸಿಕ್ಸರ್ ಹಾಗೂ ಟೆನಿಸ್ ಶೈಲಿಯ ಫೋರ್ ಹ್ಯಾಂಡ್ ಹೊಡೆತದ ಮೂಲಕ ಪಂತ್ ತಮ್ಮ 22ನೇ ಟೆಸ್ವ್ ಅರ್ಧಶತಕ ಪೂರೈಸಿದರು. ನಾಲ್ಕನೇ ಇನಿಂಗ್ಸ್ ನಲ್ಲಿಬ್ಯಾಟಿಂಗ್ ಮಾಡುವ ಅಗತ್ಯವೇ ಬೀಳದಂತೆ ಬೃಹತ್ ಮುನ್ನಡೆ ಪಡೆಯುವುದು ಭಾರತದ ಸ್ಪಷ್ಟ ತಂತ್ರವಾಗಿದೆ. ಇದರ ಫಲಿತಾಂಶ ತಿಳಿಯಲು ಭಾರತೀಯ ಕ್ರೀಡಾಭಿಮಾನಿಗಳು ಉತ್ಸುಕರಾಗಿದ್ದಾರೆ.
ನ್ಯೂಜಿಲೆಂಡ್ : ಮೊದಲ ಇನಿಂಗ್ಸ್ 368
ಭಾರತ: ಮೊದಲ ಇನಿಂಗ್ಸ್ 125 ಓವರ್ ಗಳಲ್ಲಿ4 ವಿಕೆಟ್ ಗೆ 486(ಕೆ.ಎಲ್ .ರಾಹುಲ್ 136, ಶುಬ್ಮನ್ ಗಿಲ್ 98; ಕೈಲಿ ಜೇಮಿಸನ್ 57ಕ್ಕೆ 1, ನೇಥನ್ ಸ್ಮಿತ್ 65ಕ್ಕೆ 1)