ತುಳಸಿ ದಾಮೋದರ ವಿವಾಹ

Contributed by: Subhas S|Vijaya Karnataka•
Vijay Karnataka
ತುಳಸಿ ದಾಮೋದರ ವಿವಾಹ

ವಿಕಸುದ್ದಿಲೋಕ ರಾಯಚೂರು
ಉತ್ತಾನ ದ್ವಾದಶಿ ನಿಮಿತ್ತ ಮಂತ್ರಾಲಯದ ಶ್ರೀಮಠದಲ್ಲಿತುಳಸಿ ದಾಮೋದರ ವಿವಾಹ ಮಹೋತ್ಸವವನ್ನು ಭಕ್ತಿಭಾವದಿಂದ ಶನಿವಾರ ಆಚರಿಸಲಾಯಿತು. ಶ್ರೀಮಠದಲ್ಲಿಸಂಜೆ ಪೂಜಾ ಕೈಂಕರ್ಯ ನೆರವೇರಿಸಿದ ಬಳಿಕ ತುಳಸಿ ಸನ್ನಿಧಾನದಲ್ಲಿತುಳಸಿ ದಾಮೋದರ ವಿವಾಹ ಮಹೋತ್ಸವ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರುಗಿತು. ರಾಯರ ಮೂಲ ಪಾದುಕಾ ಪೂಜೆ ಹಾಗೂ ಪ್ರಹ್ಲಾದ ರಾಜರ ಉತ್ಸವ ಮೂರ್ತಿಗೆ ಮಂಗಳಾರತಿ ಸಮರ್ಪಿಸಲಾಯಿತು. ಈ ಎಲ್ಲಧಾರ್ಮಿಕ ಕಾರ್ಯಕ್ರಮಗಳನ್ನು ಸುಬುಧೇಂದ್ರ ತೀರ್ಥ ಶ್ರೀಗಳು ನೆರವೇರಿಸಿದರು. ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು, ಶ್ರೀಗಳಿಂದ ಆಶೀರ್ವಾದ ಪಡೆದರು.

---

ಉತ್ತಾನ ದ್ವಾದಶಿ ನಿಮಿತ್ತ ಮಂತ್ರಾಲಯದ ಶ್ರೀ ಮಠದಲ್ಲಿತುಳಸಿ ದಾಮೋದರ ವಿವಾಹ ಮಹೋತ್ಸವವನ್ನು ಭಕ್ತಿಭಾವದಿಂದ ಶನಿವಾರ ಆಚರಿಸಲಾಯಿತು.