ಯಾದಗಿರಿಯಲ್ಲಿಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಸದಸ್ಯ ಭೀಮರಾಯ ತಳವಾರ ಹಾಗೂ ಜಿಲ್ಲಾ ಸಂಚಾಲಕ ಆರ್ .ಶ್ರೀನಿವಾಸ ನಾಯಕ ಮಾತನಾಡಿದರು.ಸಂವಿಧಾನ ಉಳಿಸಿ, ಮನುವಾದ ಅಳಿಸಿ ಜನಾಗ್ರಹ ಸಮಾವೇಶ 26ಕ್ಕೆ
ವಿಕ ಸುದ್ದಿಲೋಕ ಯಾದಗಿರಿ
ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ವತಿಯಿಂದ 76ನೇ ಸಂವಿಧಾನ ದಿನಾಚರಣೆಯ ಅಂಗವಾಗಿ ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದ ಸಂವಿಧಾನ ಉಳಿಸಿ, ಮನುವಾದ ಅಳಿಸಿ ಜನಾಗ್ರಹ ಸಮಾವೇಶವನ್ನು ನ.26ರಂದು ಬೆಳಗ್ಗೆ 11 ಗಂಟೆಗೆ ಶಹಾಪುರದ ಚರಬಸವೇಶ್ವರ ಗದ್ದುಗೆ ಕಲ್ಯಾಣ ಮಂಟಪದಲ್ಲಿಆಯೋಜಿಸಲಾಗಿದೆ ಎಂದು ರಾಜ್ಯ ಸಮಿತಿ ಸದಸ್ಯ ಭೀಮರಾಯ ತಳವಾರ ಹಾಗೂ ಜಿಲ್ಲಾ ಸಂಚಾಲಕ ಆರ್ .ಶ್ರೀನಿವಾಸ ನಾಯಕ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾರ್ಯಕ್ರಮದ ಸಾನಿಧ್ಯ ಬೀದರ್ ನ ಅಣದೂರು ಬುದ್ಧವಿಹಾರದ ಪೂಜ್ಯ ಭಂತೆ ವರಜ್ಯೋತಿ ಥೇರೊ ವಹಿಸಲಿದ್ದಾರೆ. ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪುರ ಮತ್ತು ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಉದ್ಘಾಟಿಸಲಿದ್ದಾರೆ ಎಂದರು.
ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ ಸಂವಿಧಾನ ಪೀಠಿಕೆ ಬಿಡುಗಡೆ ಮಾಡಲಿದ್ದು, ಭಾವಚಿತ್ರಕ್ಕೆ ಮಾಲಾರ್ಪಣೆ ರಾಜ್ಯ ಸಂಚಾಲಕ ಎಂ.ಸೋಮಶೇಖರ ಮಾಡಲಿದ್ದಾರೆ. ಶಹಾಪುರ ಮಾಜಿ ಶಾಸಕ ಗುರುಪಾಟೀಲ ಶಿರವಾಳ ಹಾಗೂ ಕೃಷ್ಣಾ ಕಾಡಾ ಅಧ್ಯಕ್ಷ ಬಾಬು ಹೊನ್ನನಾಯಕ ಜ್ಯೋತಿ ಬೆಳಗಲಿದ್ದಾರೆ ಎಂದು ತಿಳಿಸಿದರು.
ಕಲಬುರಗಿಯ ಡಾ.ಬಿ.ಆರ್ .ಅಂಬೇಡ್ಕರ್ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಅರುಣ್ ಜೋಳದಕೂಡ್ಲಗಿ ಮತ್ತು ಗೋಗಿಯ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಕಾಮಣ್ಣ ಜಿ.ಕೆ. ವಿಶೇಷ ಉಪನ್ಯಾಸ ನೀಡಲಿದ್ದಾರೆ. ಭೀಮರಾಯ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿವಿಭಾಗೀಯ ಸಂಚಾಲಕ ಸುಭಾಷ ತಳವಾರ, ರಾಜ್ಯ ಸಮಿತಿ ಸದಸ್ಯ ಸಾಯಬಣ್ಣ ಕುರಕುಂದಿ, ವಿಭಾಗೀಯ ಸಹ ಸಂಚಾಲಕರಾದ ಹಣಮಂತ ಹೊಸ್ಮನಿ, ಚಂದ್ರು ಗುತ್ತೇದಾರ, ಈಶ್ವರ ರೋಜಾ, ಜಿಲ್ಲಾ ಸಹ ಸಂಚಾಲಕರಾದ ರಾಜು ದೊಡ್ಡಮನಿ, ಮಡಿವಾಳಪ್ಪ ಕಿರದಳ್ಳಿ, ಈರಣ್ಣ ದೊರಿ ಕಿರದಳ್ಳಿ, ಮರೆಪ್ಪ ಮಾಳಹಳ್ಳಿ, ಲಕ್ಷ್ಮಣ ಸಿತ್ನಿ, ಜಿಲ್ಲಾ ಖಜಾಂಚಿ ತಿಮ್ಮಣ್ಣ ಮ್ಯಾಗೇರಿ, ಸುರಪುರ ಸಂಚಾಲಕ ಮಾನಪ್ಪ ಬಳಬಟ್ಟ, ಶಹಾಪುರ ಸಂಚಾಲಕ ಜೈಭೀಮ್ , ತಾಲೂಕು ಸಹ ಸಂಚಾಲಕರಾದ ಸುರಪುರದ ಪರಶುರಾಮ ದೊಡ್ಡಮನಿ, ಶಹಾಪುರದ ಭೀಮರಾಯ ದೊರಿ ಮತ್ತು ಮಂಜು ಉಪಸ್ಥಿತರಿದ್ದರು.